ನೆಟ್‌ಫ್ಲಿಕ್ಸ್‌ನ ಜಾಗತಿಕ ನಾನ್-ಇಂಗ್ಲಿಷ್ ಚಲನಚಿತ್ರಗಳ ಪಟ್ಟಿಯಲ್ಲಿ 'ಇರುಮುಡಿ' ನಂ.1 ಸ್ಥಾನವನ್ನು
ಸೆಪ್ಟೆಂಬರ್ 21 ರಿಂದ 27 ರವರೆಗಿನ ವಾರದಲ್ಲಿ ಫಸ್ಟ್ ಪ್ಲೇಸ್ ಗಿಟ್ಟಿಸಿಕೊಂಡ 'ಇರುಮುಡಿ'
ಈ ಸಿನಿಮಾವನ್ನು ಕೇವಲ ಒಂದು ವಾರದಲ್ಲಿ 34 ಲಕ್ಷ ಮಂದಿಯಿಂದ ವೀಕ್ಷಣೆ
ರವಿತೇಜ ಮುಖ್ಯಭೂಮಿಕೆಯ ಇರುಮುಡಿ ಸಿನಿಮಾಕ್ಕೆ ಥಿಯೇಟರ್ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಈ ಚಿತ್ರವು ಜಾಗತಿಕ ಮಟ್ಟದಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ವೀಕ್ಷಕರ ಮನ ಗೆಲ್ಲುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ. ಗಾಂಧಾರಿ ಸಿನಿಮಾವನ್ನು ಹಿಂದಿಕ್ಕುವ ಮೂಲಕ ಜಾಗತಿಕ ನಾನ್ ಇಂಗ್ಲಿಷ್ ಸಿನಿಮಾಗಳ ಪೈಕಿ ಹೆಚ್ಚು ನೋಡಿಸಿಕೊಂಡ ಸಿನಿಮಾವಾಗಿ ಸ್ಥಾನ ಗಿಟ್ಟಿಸಿಕೊಂಡಿದೆ.
ಹಿಂದಿನ ವಾರ ಮೂರನೇ ಸ್ಥಾನದಲ್ಲಿದ್ದ ಇರುಮುಡಿ ಈ ವಾರಕ್ಕೆ ಪ್ರಥಮಸ್ಥಾನ ಗಿಟ್ಟಿಸಿಕೊಂಡಿದೆ. ಹಿಂದಿನ ವಾರ ಮೊದಲ ಸ್ಥಾನದಲ್ಲಿದ್ದ ಸೂರ್ಯ ನಟನೆಯ ವಿಶ್ವನಾಥ್ & ಸನ್ಸ್, 58 ಲಕ್ಷ ವೀಕ್ಷಣೆಗಳು ಮತ್ತು 1.54 ಕೋಟಿಗೂ ಹೆಚ್ಚು ವೀಕ್ಷಣೆ ಗಂಟೆಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಆದರೆ ಈ ವಾರ ಐದನೇ ಸ್ಥಾನಕ್ಕೆ ಇಳಿದಿದೆ. ಸಮಯದಲ್ಲಿ ಇರುಮುಡಿ ಮೂರನೇ ಸ್ಥಾನದಲ್ಲಿದ್ದರೆ, ಮೋಧಾ ರಾತ್ರಿ ಏಳನೇ ಸ್ಥಾನದಲ್ಲಿತ್ತು.
ಇತ್ತೀಚಿನ ಟಾಪ್ 10 ರಲ್ಲಿ ಹಲವಾರು ಇತರ ಭಾರತೀಯ ಸಿನಿಮಾ ಟಾಪ್ ಐದರಲ್ಲಿ ಇದೆ. ವಿಶ್ವನಾಥ್ & ಸನ್ಸ್ ಐದನೇ ಸ್ಥಾನ, ಲಸ್ಟ್ ಸ್ಟೋರೀಸ್ 3 ಆರನೇ ಸ್ಥಾನ, ಬೇಬಿ ಡು ಡೈ ಡು ಏಳನೇ ಸ್ಥಾನ ಮತ್ತು ಗಾಂಧಾರಿ ಒಂಬತ್ತನೇ ಸ್ಥಾನ ಪಡೆದಿವೆ. ಇರುಮುಡಿ ಸಿನಿಮಾವನ್ನು ಕೇವಲ ಒಂದು ವಾರದಲ್ಲಿ 34 ಲಕ್ಷ (3.4 ಮಿಲಿಯನ್) ಮಂದಿ ವೀಕ್ಷಿಸಿದ್ದು, ಒಟ್ಟು 81 ಲಕ್ಷ ಗಂಟೆಗಳಿಗೂ ಅಧಿಕ ವೀಕ್ಷಣೆಯ ಸಮಯವನ್ನು ದಾಖಲಿಸಿದೆ.
ಆಗಸ್ಟ್ 21 ರಂದು ರಿಲೀಸ್ ಆಗಿದ್ದ ಇರುಮುಡಿ ಸಿನಿಮಾ, ಸೆಪ್ಟೆಂಬರ್ 18 ರಂದು ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಕಂಡಿತ್ತು. ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾವು 244.97 ಕೋಟಿ ಗಳಿಕೆ ಮಾಡುವ ಮೂಲಕ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ.ಸತತ ಸೋಲು ಕಂಡಿದ್ದ ರವಿತೇಜ ಅವರಿಗೆ ಭರ್ಜರಿ ಯಶಸ್ಸು ಸಿಕ್ಕ ಸಿನಿಮಾ ಇದಾಗಿದೆ. ಅವರ ವೃತ್ತಿಜೀವನದಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದೆ.
ಶಿವ ನಿರ್ವಾಣ ನಿರ್ದೇಶನದ 'ಇರುಮುಡಿ' ಚಿತ್ರದಲ್ಲಿ ರವಿ ತೇಜ, ಪ್ರಿಯಾ ಭವಾನಿ ಶಂಕರ್, ಸಾಯಿ ಕುಮಾರ್ ಮತ್ತು ಬೇಬಿ ನಕ್ಷತ್ರ ನಟಿಸಿದ್ದಾರೆ. ಮದ್ಯದ ಚಟ ಹೊಂದಿರುವ ತಂದೆಯೊಬ್ಬ ತನ್ನ ಚಟ ಬಿಡುವ ಬಗ್ಗೆ ಹೇಳುತ್ತದೆ. ಮತ್ತು ಒಬ್ಬ ಮಗಳಾದವಳು ಶಾಲೆ, ರಸ್ತೆ, ಸಂಚರಿಸುವ ಬಸ್ಗಳಲ್ಲಿ ನಡೆಯುವ ಘಟನೆಯನ್ನು ಚಾಚೂ ತಪ್ಪದೆ ಹೇಗೆ ಪೋಷಕರಿಗೆ ವಿವರಿಸಬೇಕು. ಶಾಲೆಯಲ್ಲಿ ಸ್ಪೆಷಲ್ ಕ್ಲಾಸ್ ಎಂದು ಇರಿಸಿಕೊಂಡು ವಿದ್ಯಾರ್ಥಿನಿಯರ ಮೇಲೆ ರಾಜಕೀಯ ನಾಯಕರು ಎಸಗುವ ದೌರ್ಜನ್ಯದಂತಹ ಗಂಭೀರ ವಿಷಯದ ಸುತ್ತ ಸಿನಿಮಾ ಇದೆ, (ಏಜೆನ್ಸೀಸ್).