ಸಿನಿಮಾ ರಂಗದ ಕರಾಳ ಮುಖ ಹಾಗೂ ಕಹಿ ಸತ್ಯಗಳನ್ನು ಬಿಚ್ಚಿಟ್ಟ ನಟಿ ಕಾಜಲ್ ಅಗರ್ವಾಲ್ 
ಟಾಲಿವುಡ್

ನಾನಂತೂ ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ, ಆದರೆ ಈಗ...ಸಿನಿಮಾ ರಂಗದ ಕಹಿ ಸತ್ಯ ಬಿಚ್ಚಿಟ್ಟ ಕಾಜಲ್ ಅಗರ್ವಾಲ್! Kajal Aggarwal

ಪ್ರಮುಖ ಮುಖ್ಯಾಂಶಗಳು

  • ಸಿನಿಮಾ ರಂಗದ ಕರಾಳ ಮುಖ ಹಾಗೂ ಕಹಿ ಸತ್ಯಗಳನ್ನು ಬಿಚ್ಚಿಟ್ಟ ನಟಿ ಕಾಜಲ್ ಅಗರ್ವಾಲ್
  • ಝಿರೋ ಫಿಗರ್ ಒತ್ತಡ, ಟ್ರೋಲ್ಸ್ ಮತ್ತು ಇಂದಿನ ನಟಿಯರ ಪರಿಸ್ಥಿತಿ ಬಗ್ಗೆ ಕಾಜಲ್ ಓಪನ್​ ಟಾಕ್​
  • ಇವತ್ತಿನ ನಟಿಯರನ್ನು ನೋಡಿದರೆ ಪಾಪ ಅನ್ನಿಸುತ್ತೆ!
ಮುಂಬೈ: ಸಿನಿಮಾರಂಗವನ್ನು ದೂರದಿಂದ ನೋಡುವಾಗ ಎಲ್ಲವೂ ಗ್ಲಾಮರಸ್​ ಆಗಿ ಕಾಣಿಸುತ್ತವೆ. ಆದರೆ ಅಲ್ಲಿ ನಿಜವಾದ ಸಂಗತಿಗಳು ಅಲ್ಲಿ ವರ್ಷಾನುಗಟ್ಟಲೆ ಇದ್ದವರಿಗೆ ಮಾತ್ರ ತಿಳಿದಿರುತ್ತದೆ. ಇತ್ತೀಚಿಗೆ ಬಾಲಿವುಡ್​ ಸೇರಿ ದಕ್ಷಿಣ ಭಾರತದ ಬಹುತೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಕಾಜಲ್​​ ಅಗರ್ವಾಲ್ (Kajal Aggarwal) ಸಿನಿಮಾ ರಂಗದ ಕೆಲ ಡಾರ್ಕ್​ ಸಿಕ್ರಟ್ಸ್​ಗಳನ್ನು ಬಿಚ್ಚಿಟ್ಟಿದ್ದಾರೆ.

ನೀನು ತೆಳ್ಳಗಾಗಲೇ ಬೇಕು!

ತಮ್ಮ ಸಿನಿ ಪಯಣದ ಆರಂಭದ ದಿನಗಳ ಬಗ್ಗೆ ಮಾತನಾಡಿರುವ ಕಾಜಲ್​​ ಅಗರ್ವಾಲ್, ಒಂದು ಸಿನಿಮಾಗಾಗಿ ನೀನು ತೆಳ್ಳಗಾಗಬೇಕು ಎನ್ನುತ್ತಿದ್ದರೆ, ಇನ್ನೊಂದು ಸಿನಿಮಾದವರು ಮೇಡಂ ಹೊಟ್ಟೆಗೆ ಏನಾದರೂ ತಿನ್ನಿ ಎನ್ನುತ್ತಿದ್ದರು. ಆದರೂ ಆವಾಗ ಹೇಗೋ ಸಿನಿಮಾ ಮಾಡಿ ಮುಗಿಸುತ್ತಿದ್ದೆವು. ಆದರೆ ಈಗ ಡಯಟ್​ ಎಲ್ಲಾ ತುಂಬಾ ಕಟ್ಟುನಿಟ್ಟಾಗಿದೆ. ಹಿರೋಯಿನ್​ಗೆ ಝಿರೋ ಫಿಗರ್​​ ಬೇಕೆಂದರೆ ನಟಿ ಝಿರೋ ಫಿಗರ್​ ಮಾಡಲೇ ಬೇಕಾಗಿದೆ. ಇದರಿಂದ ಇಗೀನ ನಟಿಯರಿಗೆ ಕಷ್ಟವಾಗುತ್ತಿರುವುದು ಸತ್ಯವಾಗಿದೆ.
ಸೋಷಿಯಲ್​ ಮೀಡಿಯಾದಿಂದ ತಲೆನೋವು!
ನಮ್ಮ ಕಾಲದಲ್ಲಿ ಈ ಸೋಷಿಯಲ್​ ಮೀಡಿಯಾ ಇಷ್ಟೊಂದು ಬೆಳೆದಿರಲಿಲ್ಲ. ಈಗ ಏರ್​ಪೋರ್ಟ್​ಗೆ ಬರಬೇಕೆಂದರೂ ಸರಿಯಾಗಿ ತಯಾರಾಗಿ ಬರಬೇಕಾಗಿದೆ. ಹಾಗೂ ಈ ಏರ್​​ಪೋರ್ಟ್​ ಲುಕ್​ಗಳನ್ನು ಇಟ್ಟುಕೊಂಡೇ ಟ್ರೋಲ್​ ಮಾಡುತ್ತಾರೆ. ಇವೆಲ್ಲಾ ಒಂದರ್ಥದಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿದೆ ಎಂದು ಕಾಜಲ್​ ಹೇಳಿದ್ದಾರೆ.

ಇವತ್ತಿನ ನಟಿಯರನ್ನು ನೋಡಿದರೆ ಪಾಪ ಅನ್ನಿಸುತ್ತದೆ!

ನಮ್ಮ ಕಾಲದಲ್ಲಿ ಸಿನಿಮಾಗೆ ಆಯ್ಕೆಯಾದ, ಶೂಟಿಂಗ್​ಗೆ ಹೋದ, ನಟಿಸಿದ ಮರಳಿ ಮನೆಗೆ ಬಂದ ಇದೆ ನಮ್ಮ ಕ್ರಮ ಆಗಿತ್ತು. ಆದರೆ ಇವತ್ತಿನ ನಟಿಯರಿಗೆ ಬಿಡುವೇ ಇರುವುದಿಲ್ಲ. ಪ್ರೇಕ್ಷಕರು ಸಿನಿಮಾ ನೋಡಿ ನಾಯಕಿ ಬಗ್ಗೆ ಮಾತನಾಡುವ ಮೊದಲು ಆಕೆಯ ಸೋಷಿಯಲ್​ ಮೀಡಿಯಾ ಅಕೌಂಟ್​ ನೋಡಿ ತೀರ್ಪನ್ನು ಕೊಡುತ್ತಾರೆ. ನನಗಂತೂ ಈಗೀನ ನಟಿಯರನ್ನು ನೋಡಿದರೆ ಪಾಪ ಅನ್ನಿಸುತ್ತದೆ ಎಂದು ಹೇಳಿದ್ದಾರೆ.

ನಾನು ಸಾಕಷ್ಟು ಅನುಭವಿಸಿದ್ದೆನೆ!

ನಾನು ಸಿನಿಮಾ ರಂಗಕ್ಕೆ ಬಂದಾಗ ನೂರು ಜನ ನೂರು ರೀತಿಯಲ್ಲಿ ಮಾತನಾಡುತ್ತಿದ್ದರು. ನೀನು ತೆಳ್ಳಗಾಗಿಲ್ಲ ಎಂದರೆ ಸಿನಿಮಾ ಅವಕಾಶ ಸಿಗಲ್ಲ, ನೀನು ಒಂದೈದು ಕಿಲೋ ತೂಕ ಹೆಚ್ಚಿಸಿಕೋ ಫಿಗರ್ ಸರಿ ಆಗುತ್ತೆ, ಹೀಗೆ ನೂರಾರು ಮಾತುಗಳನ್ನು ನಾನು ಕೇಳಿಸಿಕೊಂಡಿದ್ದೆನೆ.
ನಮ್ಮ ಸಮಯದಲ್ಲಿ ಕೂಡ ನಟಿಯರ ಮೇಲೆ ಒತ್ತಡ ಇರುತ್ತಿತ್ತು, ಆದರೆ ಈಗ ಅದು ಮಿತಿಮೀರಿ ಹೋಗಿದೆ. ಸೌಂದರ್ಯಕ್ಕೆ ನಿಗದಿತ ಮಾನದಂಡವಿದೆ ಎಂದು ಅವರೇ ಭಾವಿಸಿ, ಅದರಂತೆ ಇದ್ದರೆ ಮಾತ್ರ ಅವಕಾಶ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಜಲ್​ ಹೇಳಿದ್ದಾರೆ.
ನಾನಂತೂ ನನ್ನ ವೃತ್ತಿ ಜೀವನದಲ್ಲಿ ಯಾವುದನ್ನೂ ಹೊಂದಾಣಿಕೆ ಮಾಡಿಕೊಂಡಿಲ್ಲ, ಕೆಲವು ಪಾತ್ರಗಳನ್ನು ನನ್ನಿಂದ ಮಾಡಲು ಸಾಧ್ಯವಿಲ್ಲದಾಗ ನಾನು ಆ ಸಿನಿಮಾವನ್ನು ನಿರಾಕರಿಸಿದ್ದೆ. ಆದರೆ ಈಗ ಆ ವಾತಾವರಣ ಸಿನಿಮಾದಿಂದ ಮಾಯವಾಗಿದೆ. ಸಿನಿ ತಂಡ ಏನು ಹೇಳುತ್ತೋ, ಅದನ್ನು ಮಾಡಲೇ ಬೇಕಾದ ಒತ್ತಡ ನಟಿಯರ ಮೇಲಿದೆ ಎಂದು ಕಾಜಲ್​ ಬೇಸರ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್​).