- ಮುಂಬರುವ ಬಹುನಿರೀಕ್ಷಿತ ಚಿತ್ರಕ್ಕಾಗಿ ಟಾಲಿವುಡ್‌ನ ಜೂನಿಯರ್ ಎನ್‌ಟಿಆರ್ ಅಕ್ಷರಶಃ ಸುದ್ದಿಯಲ್ಲಿದ್ದಾರೆ
- 'ಡ್ರ್ಯಾಗನ್'ಗಾಗಿ ಮಾಡಿಕೊಂಡಿರುವ ದೈಹಿಕ ಬದಲಾವಣೆಯು ಇಡೀ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದೆ
- ಎನ್‌ಟಿಆರ್ 9.5 ಕಿಲೋ ಸ್ನಾಯುವಿನ ದ್ರವ್ಯರಾಶಿಯನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ
Jr NTR: ಟಾಲಿವುಡ್‌ನ ಜೂನಿಯರ್ ಎನ್‌ಟಿಆರ್ ಅಕ್ಷರಶಃ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ 'ಡ್ರ್ಯಾಗನ್'ಗಾಗಿ ಮಾಡಿಕೊಂಡಿರುವ ದೈಹಿಕ ಬದಲಾವಣೆಯು ಇಡೀ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದೆ. ಇತ್ತೀಚೆಗೆ ನಟ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ಚಿತ್ರವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹೊಸ ಲುಕ್ಗೆ ಫಿದಾ ಆಗಿದ್ದಾರೆ.
ಇತ್ತೀಚೆಗೆ ವೈರಲ್ ಆಗಿರುವ ಫೋಟೋದಲ್ಲಿ ಎನ್‌ಟಿಆರ್ ಮಧ್ಯದಲ್ಲಿ ನಿಂತು ತಮ್ಮ ಬೆನ್ನು ಮತ್ತು ತೋಳುಗಳನ್ನು ಕ್ಲಾಸಿಕ್ ಡಬಲ್ ಬೈಸೆಪ್ಸ್ ನಿಲುವಿನಲ್ಲಿ ಪ್ರದರ್ಶಿಸಿದ್ದಾರೆ. ವಿಶೇಷವೆಂದರೆ, ಅವರ ಚಿತ್ರವನ್ನು ಹಿಂದಿನಿಂದ ತೆಗೆದಿದ್ದು, ಅಗಲವಾದ ಭುಜಗಳು ಮತ್ತು ಕೆತ್ತಿದ ತೋಳುಗಳಿಂದ ಸ್ಪಷ್ಟವಾದ ಸ್ನಾಯು ಸಮ್ಮಿತಿಯನ್ನು ಎತ್ತಿ ತೋರಿಸಿದೆ.
ಪೋಸ್ಟ್ನಲ್ಲೇನಿದೆ?
ತಮ್ಮ ಪೋಸ್ಟ್ನಲ್ಲಿ ಜಿಮ್ ಸೆಂಟರ್ನಲ್ಲಿ ವರ್ಕೌಟ್ ಮಾಡಲು ಸಿದ್ದರಾಗಿದ್ದ ಪೋಟೋವೊಂದನ್ನು ಹಂಚಿಕೊಂಡಿದ್ದ ಎನ್‌ಟಿಆರ್ ಕಷ್ಟಪಟ್ಟು ರೂಪಿಸಿದ್ದು. ದುಡ್ಡು ಕೊಟ್ಟು ಕೊಂಡದ್ದಲ್ಲ ಎಂಬ ಶೀರ್ಷಿಕೆಯನ್ನು ಬರೆದು ಪೋಸ್ಟ್ ಮಾಡಿದ್ದಾರೆ.
ಈ ರೂಪಾಂತರ ಎಷ್ಟರ ಮಟ್ಟಿಗೆ ತೀವ್ರವಾಗಿದೆ ಎಂದು ನೀವು ಆಶ್ಚರ್ಯ ಪಡಬಹುದು. ಆದಾಗ್ಯೂ, ಅವರ ತರಬೇತುದಾರ ಕುಮಾರ್ ಮನ್ನವ ಹೇಳುವ ಹಾಗೆ ಎನ್‌ಟಿಆರ್ 9.5 ಕಿಲೋ ಸ್ನಾಯುವಿನ ದ್ರವ್ಯರಾಶಿಯನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಈ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಬರೀ ಏಳು ವಾರಗಳಲ್ಲಿ ಅಂದರೆ 49 ದಿನಗಳಲ್ಲಿ ನಡೆದಿದೆ ಎಂದು ಅಚ್ಚರಿ ಮಾಹಿತಿ ಹೊರಹಾಕಿದ್ದಾರೆ.
ಈ ಬಾರಿ ಎನ್‌ಟಿಆರ್ ಅವರ ಗಮನ ಕೇವಲ ಸ್ನಾಯುಗಳನ್ನು ಬೆಳೆಸುವುದರ ಮೇಲೆ ಮಾತ್ರ ಇರಲಿಲ್ಲ. ಅವರ ತರಬೇತಿಯು ಕ್ರಿಯಾತ್ಮಕ ಚಲನೆಗಳು ಮತ್ತು ಹೃದಯ-ಕೇಂದ್ರಿತ ವ್ಯಾಯಾಮಗಳ ಕಡೆಗೆ ಹೆಚ್ಚು ವಾಲಿತ್ತು. ಇದರೊಂದಿಗೆ ಮಧ್ಯಮ ಪ್ರತಿರೋಧ ತರಬೇತಿಯನ್ನು ಸಮತೋಲನಗೊಳಿಸಲಾಗಿತ್ತು. ಈ ಹೊಸ ವಿಧಾನವು ಅವರ ದೇಹಕ್ಕೆ ಅಗತ್ಯವಿದ್ದ 'ಲೀನ್' ಮತ್ತು 'ಅಥ್ಲೆಟಿಕ್' ನೋಟವನ್ನು ನೀಡಲು ಸಹಕಾರಿಯಾಯಿತು ಎಂದು ಕೋಚ್ ಹೇಳಿದ್ದಾರೆ.
ಎನ್ಟಿ ಆರ್ ಅವರ ಆಹಾರ ಯೋಜನೆ ಕೂಡಾ ವಿಭಿನ್ನ ಮಾರ್ಗವನ್ನು ತೆಗೆದುಕೊಂಡಿದ್ದು, ಸ್ನಾಯುಗಳ ಬೆಳವಣಿಗೆಗೆ ಕಡಿಮೆ ಪ್ರೊಟೀನ್ ಸೇವನೆಯನ್ನು ಆರಿಸಿಕೊಂಡರು. ದಿನಕ್ಕೆ 45-90 ನಿಮಿಷಗಳ ಕಾಲ ವ್ಯಾಯಾಮ ಅಭ್ಯಾಸ ಮಾಡಿಕೊಂಡರು. ಈ ಎಲ್ಲಾ ಬದಲಾವಣೆಗಳು ಅವರು ತೂಕ ಇಳಿಸಿಕೊಳ್ಳಲು ಸಹಾಯ ಮಾಡಿತು (ಏಜೆನ್ಸೀಸ್).