ಟಾಲಿವುಡ್

ಕಪ್ಪು ಸೀರೆಯಲ್ಲಿ 'ಡೊರೊಥಿ' ಕೀರ್ತಿ! Keerthy Suresh

Keerthy Suresh: ಕೀರ್ತಿ ಸುರೇಶ್ ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಟಿಯಾಗಿದ್ದು, ಪ್ರಮುಖವಾಗಿ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚೆನ್ನೈನಲ್ಲಿ ಜನಿಸಿದ ಇವರು, ನಿರ್ಮಾಪಕ ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ದಂಪತಿಯ ಪುತ್ರಿಯಾಗಿದ್ದಾರೆ. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಕೀರ್ತಿ, 2013 ರಲ್ಲಿ ಮಲಯಾಳಂನ ‘ಗೀತಾಂಜಲಿ’ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ತೆಲುಗಿನ ‘ಮಹಾನಟಿ’ ಚಿತ್ರದಲ್ಲಿ ದಿವಂಗತ ನಟಿ ಸಾವಿತ್ರಿ ಅವರ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿ, ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡರು. ‘ನೇನು ಶೈಲಜಾ’, ‘ರಜಿನಿಮುರುಗನ್’, ‘ರೆಮೋ’, ‘ಸರ್ಕಾರು ವಾರಿ ಪಾಟ’ ಮತ್ತು ‘ದಸರಾ’ ಇವರ ಪ್ರಮುಖ ಚಿತ್ರಗಳಾಗಿವೆ. ತಮ್ಮ ಸಹಜ ಅಭಿನಯ ಮತ್ತು ಸೌಂದರ್ಯದ ಮೂಲಕ ಕೀರ್ತಿ ಸುರೇಶ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ವಿಜಯವಾಣಿ ಸುದ್ದಿ ಜಾಲ