ನಟಿ ಡಿಂಪಲ್​ ಹಯಾತಿ 
ಟಾಲಿವುಡ್

ಸೀರೆಯುಟ್ಟ ಕಣ್ಣಿನಲ್ಲೇ ಮೋಡಿ ಮಾಡಿದ ಬೆಡಗಿ: ನಟಿ ಡಿಂಪಲ್ ಹಯಾತಿ ಹೊಸ ಫೋಟೋಶೂಟ್ ವೈರಲ್​..! Dimple Hayathi

ಟಾಲಿವುಡ್‌ನ ಗ್ಲಾಮರಸ್ ನಟಿಯರಲ್ಲಿ ಒಬ್ಬರಾದ ಡಿಂಪಲ್ ಹಯಾತಿ ತಮ್ಮ ಮಾದಕ ನೋಟ ಹಾಗೂ ಅದ್ಭುತ ನಟನೆಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಡಿಜಿಟಲ್​ ಲೋಕದಲ್ಲಿ ತೀವ್ರ ಸಂಚಲನ ಮೂಡಿಸಿವೆ.

ವಿಜಯವಾಣಿ ಸುದ್ದಿ ಜಾಲ

ಸೂಪರ್​ ಸೀರೆ ಲುಕ್ಕು

ಹಳದಿ ಬಣ್ಣದ ಸಾಂಪ್ರದಾಯಿಕ ಸೀರೆಯುಟ್ಟು, ಮಾದಕ ನೋಟದೊಂದಿಗೆ ಕ್ಯಾಮೆರಾಗೆ ಪೋಸ್​ ನೀಡಿರುವ ಹೊಸ ಫೋಟೋಶೂಟ್ ಅಭಿಮಾನಿಗಳ ಮನ ಗೆದ್ದಿದ್ದು, ಹಾಟ್​ ಫೋಟೋಗಳು ಕ್ಷಣಾರ್ಧದಲ್ಲಿ ವೈರಲ್ ಆಗಿವೆ.

ಫ್ಯಾನ್ಸ್​ ಫಿದಾ

ಹಳದಿ ಬಣ್ಣದ ರವಿಕೆ ಮತ್ತು ಕೆನೆ ಬಣ್ಣದ ಸೀರೆಯುಟ್ಟು ಮಾದಕ ಭಂಗಿಗಳಲ್ಲಿರುವ ಹಯಾತಿ ಅವರ ಹಾಟ್ ಫೋಟೋಗಳನ್ನು ನೋಡಿ ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್​ಗಳ ಮೂಲಕ ನಟಿಯ ಮೈಮಾಟವನ್ನು ಕೊಂಡಾಡುತ್ತಿದ್ದಾರೆ. ​

ವಿಜಯವಾಡ ಸುಂದರಿ

ಡಿಂಪಲ್ ಹಯಾತಿ ಅವರು ಆಗಸ್ಟ್ 21, 1998 ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದರು. ಆದರೆ ಇವರ ಪಾಲನೆ ಹಾಗೂ ವಿದ್ಯಾಭ್ಯಾಸವೆಲ್ಲವೂ ಹೈದರಾಬಾದ್‌ನಲ್ಲಿಯೇ ನಡೆಯಿತು.

ನಟನಾ ವೃತ್ತಿಯ ಆರಂಭ

ತಮ್ಮ 19 ನೇ ವಯಸ್ಸಿನಲ್ಲಿಯೇ ಅಂದರೆ 2017 ರಲ್ಲಿ ಬಿಡುಗಡೆಯಾದ 'ದಬಂಗ್ ವೆಂಕಟೇಶ್' ಎಂಬ ತೆಲುಗು ಚಿತ್ರದ ಮೂಲಕ ಡಿಂಪಲ್ ಹಯಾತಿ ನಟನಾ ಲೋಕಕ್ಕೆ ಅಧಿಕೃತವಾಗಿ ಕಾಲಿಟ್ಟರು.

ಪ್ರಸಿದ್ಧಿ ತಂದುಕೊಟ್ಟ 'ಗದ್ದಲಕೊಂಡ ಗಣೇಶ್'

ವರುಣ್ ತೇಜ್ ಅಭಿನಯದ 'ಗದ್ದಲಕೊಂಡ ಗಣೇಶ್' ಚಿತ್ರದಲ್ಲಿ ಅವರು ಮಾಡಿದ ಐಟಂ ಸಾಂಗ್ ಸಖತ್ ಹಿಟ್ ಆಯಿತು. ಈ ಹಾಡಿನ ಮೂಲಕ ಅವರು ಯುವಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದರು.

ಬಾಲಿವುಡ್ ಪ್ರವೇಶ

ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗದೆ, ಬಾಲಿವುಡ್‌ನ ಪ್ರತಿಷ್ಠಿತ ನಟ ಅಕ್ಷಯ್ ಕುಮಾರ್ ಅಭಿನಯದ 'ಅಟ್ರಾಂಗಿ ರೇ' ಚಿತ್ರದಲ್ಲಿ ನಟಿಸುವ ಮೂಲಕ ಹಿಂದಿ ಪ್ರೇಕ್ಷಕರ ಗಮನವನ್ನೂ ಸೆಳೆದರು.

ಮಾಸ್ ಮಹಾರಾಜ್ ಜೊತೆ ನಟನೆ

ರವಿತೇಜ ಅಭಿನಯದ ವಾಣಿಜ್ಯ ಯಶಸ್ಸು ಕಂಡ 'ಖಿಲಾಡಿ' ಸಿನಿಮಾದಲ್ಲಿ ಡಿಂಪಲ್ ಹಯಾತಿ ನಾಯಕಿಯಾಗಿ ನಟಿಸಿ ಉತ್ತಮ ಪ್ರಶಂಸೆಯನ್ನು ಪಡೆದರು.

ನೃತ್ಯದ ಮೇಲಿನ ಒಲವು

ನಟನೆಯಷ್ಟೇ ಅಲ್ಲದೆ ಡಿಂಪಲ್ ಹಯಾತಿ ಒಬ್ಬ ಅತ್ಯುತ್ತಮ ನರ್ತಕಿ. ಇವರ ಡ್ಯಾನ್ಸ್‌ ಮೂವ್‌ಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿ ಬಳಗವಿದೆ.

ಫಿಟ್‌ನೆಸ್ ಪ್ರಿಯೆ

ಫಿಟ್‌ನೆಸ್ ಮತ್ತು ಆರೋಗ್ಯದ ವಿಚಾರದಲ್ಲಿ ಕಟ್ಟುನಿಟ್ಟಾಗಿರುವ ಡಿಂಪಲ್, ನಿರಂತರ ಜಿಮ್ ವರ್ಕೌಟ್ ಹಾಗೂ ಯೋಗದ ಮೂಲಕ ತಮ್ಮ ದೇಹದಾರ್ಢ್ಯವನ್ನು ಕಾಪಾಡಿಕೊಳ್ಳುತ್ತಾರೆ.

ಸೋಷಿಯಲ್ ಮೀಡಿಯಾ ಸೆನ್ಸೆಷನ್

ಇನ್‌ಸ್ಟಾಗ್ರಾಮ್ ಹಾಗೂ ಇTರೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಇವರು, ತಮ್ಮ ಗ್ಲಾಮರಸ್ ಹಾಗೂ ಟ್ರೆಂಡಿ ಫೋಟೋಗಳ ಮೂಲಕ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.