'ಡಕಾಯಿತ್' ಚಿತ್ರದ ಟೀಸರ್ ಲಾಂಚ್ ಈವೆಂಟ್ನಲ್ಲಿ ಮೃನಾಲ್ ಠಾಕೂರ್ ಮತ್ತು ಅದ್ವಿ ಶೇಷ್
- ಹೈದರಾಬಾದ್ನಲ್ಲಿ 'ಡಕಾಯಿತ್' ಚಿತ್ರದ ಟೀಸರ್ ಲಾಂಚ್
- ನಟಿ ಮೃನಾಲ್ ಠಾಕೂರ್- ಅದ್ವಿ ಶೇಷ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ
- ಚಿತ್ರ 2026ರ ಮಾರ್ಚ್ 19ರಂದು ತೆರೆಕಾಣಲು ಸಿದ್ಧ
ಆಂಧ್ರಪ್ರದೇಶ: ನಿನ್ನೆಯಷ್ಟೇ ಹೈದರಾಬಾದ್ನಲ್ಲಿ ಬಹುನಿರೀಕ್ಷಿತ ತೆಲುಗು 'ಡಕಾಯಿತ್' ಚಿತ್ರದ ಟೀಸರ್ ಲಾಂಚ್ ಈವೆಂಟ್ ಅದ್ಧೂರಿಯಾಗಿ ನಡೆಯಿತು. ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಅಭಿನಯಿಸಿರುವ ಅನುರಾಗ್ ಕಶ್ಯಪ್, ನಟ ಅದ್ವಿ ಶೇಷ್ ಮತ್ತು ನಟಿ ಮೃಣಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಡಕಾಯಿತ್ ಚಿತ್ರದ ಮುಖೇನ ಇದೀಗ ಟಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ.
ಶೆನಾಯಿಲ್ ಡಿಯೋ ನಿರ್ದೇಶಿಸಿರುವ ಈ ಸಿನಿಮಾದ ಟೀಸರ್ ಲಾಂಚ್ ಈವೆಂಟ್ ವೇಳೆ ಹಲವು ವಿಷಯಗಳನ್ನು ಮಾತನಾಡಿದ ಅನುರಾಗ್ ಕಶ್ಯಪ್, "ತೆಲುಗು ಚಿತ್ರದೊಂದಿಗೆ ನಾನು ಭಾಗಿಯಾಗಲು ಕಾರಣ ರಾಮ್ ಗೋಪಾಲ್ ವರ್ಮಾ ಅವರು. ನನಗೆ 'ಡಕಾಯಿತ್' ಸಿನಿಮಾ ಒಂದು ರೀತಿ ಹಾಲಿವುಡ್ ಚಿತ್ರದಂತೆ ಭಾಸವಾಯಿತು. ಈ ಚಿತ್ರದ ಶೂಟಿಂಗ್ ಶೈಲಿ ನೋಡಿದಾಗ ಇದು ನನ್ನ ಹಿಂದಿನ ಸಿನಿಮಾಗಳ ಚಿತ್ರೀಕರಣದಂತಿರಲಿಲ್ಲ. ಅದ್ವಿ ಶೇಷ್ ಅವರಿಗೆ ಅವರದ್ದೇ ಆದ ಒಂದು ವಿಶಿಷ್ಟ ಶೈಲಿಯಿದೆ" ಎಂದರು.
"ಇನ್ನು ಚಿತ್ರದ ಎರಡು ಪ್ರತ್ಯೇಕ ದೃಶ್ಯಗಳನ್ನು ನಾನು ನೋಡಿದೆ. ಅದರಲ್ಲಿ ಮೊದಲ ಸೀಕ್ವೆನ್ಸ್ನಲ್ಲಿ ನಾನು ನಟಿಸಿಲ್ಲ. ಆದರೆ, ಅದರಲ್ಲಿದ್ದ ಫಲಿತಾಂಶಗಳು ನನ್ನನ್ನು ನಿಜಕ್ಕೂ ಸೆಳೆಯಿತು. ಇಲ್ಲಿಯವರೆಗೆ, ಮೃನಾಲ್ ಠಾಕೂರ್ ಅವರನ್ನು ನಾನು ಆ ರೀತಿ ನೋಡಿಯೇ ಇಲ್ಲ. ಈ ಸಿನಿಮಾ ನಿಜಕ್ಕೂ ಅವರಿಗೆ ಗೇಮ್ ಚೇಂಚರ್ ಎಂಬುದರಲ್ಲಿ ಅನುಮಾನವೇ ಬೇಡ" ಎಂದು ಹೇಳಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರಾಜ್, ಅತುಲ್ ಕುಲಕರ್ಣಿ, ಸುನಿಲ್ ಸೇರಿ ಮುಂತಾದವರು ನಟಿಸಿದ್ದಾರೆ. ಚಿತ್ರವು 2026ರ ಮಾರ್ಚ್ 19ರಂದು ತೆರೆಕಾಣಲು ಸಜ್ಜಾಗಿದ್ದು, ಕೇವಲ ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ,(ಏಜೆನ್ಸೀಸ್).