ಬಡಿದಾಡಿಕೊಂಡ ಮಹೇಶ್​ ಬಾಬು-ರಾಜಮೌಳಿ ( Mahesh Babu ) 
ಟಾಲಿವುಡ್

ಅಂತ್ಯ ಶುರು... ಮಹೇಶ್​ ಬಾಬು-ರಾಜಮೌಳಿ ಬಡಿದಾಡಿಕೊಳ್ಳುವುದನ್ನು ನೋಡಿ ಸ್ಫೋಟಕ ಹೇಳಿಕೆ ನೀಡಿದ ಆರ್​ಜಿವಿ! Mahesh Babu

ಪ್ರಮುಖ ಮುಖ್ಯಾಂಶಗಳು

  • ಕೃತಕ ಬುದ್ಧಿಮತ್ತೆ (ಎಐ) ಇಂದು ಸೃಷ್ಟಿಸುತ್ತಿರುವ ಅವಾಂತರ ಒಂದೆರೆಡಲ್ಲ
  • ಸತ್ಯ ಯಾವುದು? ಸುಳ್ಳು ಯಾವುದು? ಅನ್ನೋ ಗೊಂದಲವನ್ನು ಎಐ ಸೃಷ್ಟಿ ಮಾಡಿದೆ
  • ನಟ ಮಹೇಶ್​ ಬಾಬು ಮತ್ತು ನಿರ್ದೇಶಕ ರಾಜಮೌಳಿ ನಡುವೆ ಜಗಳದ ವಿಡಿಯೋ ರಚಿಸಿದ ಎಐ
Mahesh Babu : ವಾಸ್ತವದ ತಲೆಯ ಮೇಲೆ ಹೊಡೆದಂತೆ ಇರುವ ಕೃತಕ ಬುದ್ಧಿಮತ್ತೆ (ಎಐ) ಇಂದು ಸೃಷ್ಟಿಸುತ್ತಿರುವ ಅವಾಂತರ ಒಂದೆರೆಡಲ್ಲ. ಇಂದು ಬಹುತೇಕ ಮಂದಿಗೆ ಸತ್ಯ ಯಾವುದು? ಸುಳ್ಳು ಯಾವುದು? ಅನ್ನೋ ಗೊಂದಲವನ್ನು ಎಐ ಸೃಷ್ಟಿ ಮಾಡಿದೆ. ಹೀಗೆ ಮುಂದುವರಿದರೆ, ಮುಂದೊಂದು ದಿನ ಜನ ವಾಸ್ತವವನ್ನೇ ಮರೆತುಬಿಡುತ್ತಾರೇನೋ? ಏಕೆಂದರೆ, ಎಐ ವಾಸ್ತವವನ್ನೇ ಮೀರಿಸುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು ಮತ್ತು ಪ್ಯಾನ್​ ಇಂಡಿಯಾ ಸ್ಟಾರ್​ ನಿರ್ದೇಶಕ ಎಸ್​. ಎಸ್​. ರಾಜಮೌಳಿ ನಡುವೆ ಎಐ ರಚಿಸಿದ ಜಗಳದ ವಿಡಿಯೋ.
ಎಐ ಬಗ್ಗೆ ಅಷ್ಟೊಂದು ಗೊತ್ತಿಲ್ಲದೇ ಇರುವವರು ಮಹೇಶ್ ಬಾಬು ಮತ್ತು ರಾಜಮೌಳಿ ಜಗಳವನ್ನು ನಿಜವಾಗಿಯೂ ನಂಬಿ ಬಿಡುತ್ತಾರೆ. ಅಷ್ಟರಮಟ್ಟಿಗೆ ಎಐ ವಿಡಿಯೋ ಕ್ರಿಯೇಟ್​ ಮಾಡಿದೆ. ಹೌದು, ಇತ್ತೀಚೆಗೆ ಮಹೇಶ್ ಬಾಬು ಮತ್ತು ರಾಜಮೌಳಿ ಪರಸ್ಪರ ಜಗಳವಾಡುತ್ತಿರುವ ಎಐ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
ಸಾಮಾನ್ಯವಾಗಿ, ರಾಜಮೌಳಿ ಅವರ ಸಿನಿಮಾಗಳಲ್ಲಿ ನಾಯಕ, ಖಳನಾಯಕನೊಂದಿಗೆ ಫೈಟ್​ ಮಾಡುವುದನ್ನು ನಾವು ನೋಡುತ್ತೇವೆ. ಆದರೆ, ಈ AI ವಿಡಿಯೋದಲ್ಲಿ, ರಾಜಮೌಳಿ ಮತ್ತು ಮಹೇಶ್ ಬಾಬು ಕಿತ್ತಾಡಿದ್ದಾರೆ. ಮುಖ ಮೂತಿ ನೋಡದೇ ಬಡಿದಾಡಿಕೊಂಡಿದ್ದಾರೆ. ಅದನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಈ ವಿಡಿಯೋ ತುಂಬಾ ನೈಜವಾಗಿದೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ಆರ್​ಜಿವಿ ಸ್ಫೋಟಕ ಹೇಳಿಕೆ

ಇನ್ನು ವೈರಲ್​ ಆಗುತ್ತಿರುವ ವಿಡಿಯೋ ಕುರಿತು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಂಚಲನಾತ್ಮಕ ಹೇಳಿಕಗಳನ್ನು ನೀಡಿದ್ದಾರೆ. ಆರ್​ಜಿವಿ ನೀಡಿದ ಹೇಳಿಕೆಗಳು ಇದೀಗ ಸಿನಿಮಾ ಸಮುದಾಯದಲ್ಲಿ ಚರ್ಚೆಯ ವಿಷಯವಾಗಿದೆ. ಈ ವಿಡಿಯೋ ನೋಡಿದ ನಂತರ, ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯಿಸಿರುವ ಆರ್​ಜಿವಿ, "ಸಿನಿಮಾ ಸತ್ತಿದೆ" ಎಂದಿದ್ದಾರೆ. ಅಲ್ಲದೆ, ವಿಡಿಯೋ ಸಹ ಹಂಚಿಕೊಂಡಿದ್ದಾರೆ.
ಇಲ್ಲಿ ಆರ್​ಜಿವಿ ಮಾತಿನ ಅರ್ಥವೇನೆಂದರೆ, ಭವಿಷ್ಯದಲ್ಲಿ AI ಹೊಂದಿರುವ ಕಂಪ್ಯೂಟರ್ ಮುಂದೆಯೇ ಕುಳಿತು ಅದ್ಭುತ ಚಲನಚಿತ್ರಗಳನ್ನು ಮಾಡಬಹುದು ಅನ್ನೋದು. ಇದು ಸಾಂಪ್ರದಾಯಿಕ ಚಲನಚಿತ್ರ ನಿರ್ಮಾಣದ ಅಂತ್ಯವನ್ನು ಸೂಚಿಸುತ್ತದೆ ಎಂಬ ಅರ್ಥದಲ್ಲಿ ಆರ್​ಜಿವಿ ಕಾಮೆಂಟ್‌ ಮಾಡಿದ್ದಾರೆ.
ಅಂದಹಾಗೆ, ರಾಜಮೌಳಿ ಮತ್ತು ಮಹೇಶ್ ಬಾಬು ಜುಗಲ್​ಬಂಧಿಯಲ್ಲಿ 'ವಾರಣಾಸಿ' ಸಿನಿಮಾ ರೆಡಿಯಾಗುತ್ತಿದೆ. ಹಾಲಿವುಡ್ ರೇಂಜ್‌ನಲ್ಲಿ ಬರುತ್ತಿರುವ ಈ ಚಿತ್ರದ ಮೇಲೆ ಊಹಿಸಲಾಗದ ನಿರೀಕ್ಷೆಗಳಿವೆ. ಈ ಚಿತ್ರವು 2027, ಏಪ್ರಿಲ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ, (ಏಜೆನ್ಸೀಸ್​).