Chinmayi Sripada: ದಿ ಗರ್ಲ್‌ಫ್ರೆಂಡ್ ಚಿತ್ರವು ಅನೇಕ ರೀತಿಯಲ್ಲಿ ಸಕರಾತ್ಮಕ ಫಲಿತಾಂಶಗಳನ್ನು ಕಂಡನಂತರ ನಿರ್ದೇಶಕ ರಾಹುಲ್ ರವೀಂದ್ರನ್ ಅವರ ಬಗ್ಗೆ ಪತ್ನಿ, ಗಾಯಕಿ ಚಿನ್ಮಯಿ ಶ್ರೀಪಾದ ಹೆಮ್ಮೆಯಿಂದ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ.
ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಕಳೆದ ತಿಂಗಳುಗಳಲ್ಲಿ ತೆರೆಕಂಡು ಯಶಸ್ವೀ ಪ್ರದರ್ಶನವನ್ನು ಕಂಡಿತು. ಇದಾದ ಬಳಿಕ ಅವರು ತನ್ನ ಗಂಡನನ್ನು ಉದ್ದೇಶಿಸಿ, ಒಬ್ಬ ಹುಡುಗ ತನ್ನ 20 ರ ದಶಕದ ಅಂತ್ಯದಲ್ಲಿ ಹೊಸ ಭಾಷೆಯನ್ನು ಕಲಿಯುತ್ತಾನೆ.
ಇದಾದ ಬಳಿಕ ಅಂತಿಮವಾಗಿ ತನ್ನ ಚೊಚ್ಚಲ ನಿರ್ದೇಶನವನ್ನು ತೆಲುಗಿನಲ್ಲಿ ಬರೆದು, ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳೊಂದಿಗೆ ಅತ್ಯತ್ತಮ ಚಿತ್ರಕಥೆಗಾರರಲ್ಲಿ ತನ್ನ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಎಲ್ಲಾ ಬೆಳವಣಿಗೆ ಮತ್ತು ಯಶಸ್ಸಿನ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ ಎಂದು ಬರೆದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ನ್ನು ಹಂಚಿಕೊಂಡಿದ್ದರು.
ಕೆಲವೇ ನಿಮಿಷಗಳಲ್ಲಿ ಈ ಪೋಸ್ಟ್ಗೆ ಬಳಕೆದಾರರೊಬ್ಬ "ನಿನ್ನ ಗಂಡ ನೀನು ಹೇಳುವ ಹಾಡಿಗೆ ಡ್ಯಾನ್ಸ್ ಮಾಡುವ ಗೊಂಬೆ" ಎಂದು ಕಾಮೆಂಟ್ ಮಾಡಿದ್ದಾರೆ. ಈ ಪ್ರತಿಕ್ರಿಯೆಗೆ ತೀಕ್ಷ್ಣವಾಗಿ ಪ್ರತಿಕ್ರಿಸಿದ ಚಿನ್ಮಯಿ ಅವನೊಬ್ಬ ಅಲ್ಫಾ ಪುರುಷ, ಬುದ್ಧಿ ಬಳಸುವವನು, ಯಾರ ಹಾಡಿಗೂ ನೃತ್ಯ ಮಾಡದವನು. ಮೂರ್ಖವಾಗಿ ಆಟಗಳಾಡಿದರೆ, ಮೂರ್ಖ ಫಲಿತಾಂಶ ಎದುರಿಸಬೇಕಾಗುತ್ತದೆ. ಗೊಂದಲಕ್ಕೀಡಾಗಬೇಡಿ ಮತ್ತು ಕಠಿಣ ಮಾರ್ಗವನ್ನು ಕಂಡುಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.
ಚಿತ್ರದ ಬಗ್ಗೆ
ದಿ ಗರ್ಲ್‌ಫ್ರೆಂಡ್' 2025ರ ಭಾರತೀಯ ತೆಲುಗು ಭಾಷೆಯ ರೊಮ್ಯಾಂಟಿಕ್ ಡ್ರಾಮಾ ಚಿತ್ರವಾಗಿದೆ. ಈ ಚಿತ್ರವನ್ನು ರಾಹುಲ್ ರವೀಂದ್ರನ್ ಬರೆದು ನಿರ್ದೇಶಿಸಿದ್ದಾರೆ. ರಶ್ಮಿಕಾ, ದೀಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ನಾಯಕ, ನಾಯಕಿಯರಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ವಿದ್ಯಾರ್ಥಿನಿಯೊಬ್ಬಳು ಬ್ಯಾಡ್ ಬಾಯ್ನೊಂದಿಗೆ ಸಂಬಂಧ ಬೆಳೆಸಿದಾಗ ಉಂಟಾಗುವ ಸಮಸ್ಯೆಗಳ ಬಗ್ಗೆ ಆಳವಾಗಿ ಚರ್ಚೆ ಹುಟ್ಟುಹಾಕಿದೆ (ಏಜೆನ್ಸೀಸ್).