ನಟಿ ಇನಾಯ ಸುಲ್ತಾನ, ನಟ ಶಿವಾಜಿ  
ಟಾಲಿವುಡ್

ಬ್ಲೌಸ್​ ಇಲ್ಲದ ಸೀರೆ ಉಡೋದು ನಮ್ಮ ಸಂಸ್ಕೃತಿ! ನಟ ಶಿವಾಜಿ ಹೇಳಿಕೆಗೆ ಹಾಟ್​ ಬ್ಯೂಟಿ ಇನಾಯಾ ಕೆಂಡ | Actress Inaya

ಪ್ರಮುಖ ಮುಖ್ಯಾಂಶಗಳು

  • ಸಿನಿಮಾ ಪ್ರೀ-ರಿಲೀಸ್​ ಈವೆಂಟ್​ ವೇಳೆ ಮಾತಿನಲ್ಲಿ ಎಡವಟ್ಟು
  • ನಟಿಯರ ಉಡುಗೆ ಬಗ್ಗೆ ನಟ ಶಿವಾಜಿ ಹೇಳಿಕೆಗೆ ಟಾಲಿವುಡ್​ ಕೆಂಡಾಮಂಡಲ
  • ನಟನ ಹೇಳಿಕೆಗೆ ಹಾಟ್ ಬ್ಯೂಟಿ ಇನಾಯ ಸುಲ್ತಾನ ಕಿಡಿ
ಆಂಧ್ರಪ್ರದೇಶ: ಇತ್ತೀಚೆಗೆ ನಡೆದ 'ದಂಡೋರ' ಚಿತ್ರದ ಪ್ರೀ-ರಿಲೀಸ್ ಈವೆಂಟ್​ನಲ್ಲಿ ಮಾತನಾಡಿದ ತೆಲುಗು ನಟ ಶಿವಾಜಿ, ನಟಿಯರು ಮೈತುಂಬ ಸೀರೆ ಉಟ್ಟರೆ ಚೆಂದ, ಅಂದ. ಅದನ್ನು ಬಿಟ್ಟು ದೇಹದ ಅಂಗಾಂಗ ಕಾಣುವಂತ ಬಟ್ಟೆಗಳನ್ನು ಧರಿಸುವುದು ಸರಿಯಲ್ಲ ಎಂದಿದ್ದರು. ಟಾಲಿವುಡ್​ ಅಂಗಳದಲ್ಲಿ ನಟ ಶಿವಾಜಿ ನೀಡಿದ ಈ ಒಂದು ಹೇಳಿಕೆ ಸದ್ಯ ಭಾರೀ ವಿವಾದ ಸೃಷ್ಟಿಸಿದೆ. ಇಂದಿಗೂ ನಟನ ಮಾತಿಗೆ ಒಬ್ಬರಂತೆ ಮತ್ತೊಬ್ಬರು ಕಿಡಿಕಾರುತ್ತಲೇ ಇದ್ದಾರೆ. 
ಶಿವಾಜಿ ಹೇಳಿಕೆ ಹೊರಬಿದ್ದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೆಲುಗು ನಟಿಮಣಿಯರ ಕೆಂಗಣ್ಣಿಗೆ ಗುರಿಯಾಯಿತು. ಸ್ಟಾರ್​ ನಟಿಯರು, ನಿರೂಪಕಿಯರು ಶಿವಾಜಿ ವಿವಾದಾತ್ಮಕ ಹೇಳಿಕೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ವ್ಯಾಪಕ ಛೀಮಾರಿ, ಟೀಕೆಗಳ ಬೆನ್ನಲ್ಲೇ ನಟ ಕೂಡ ಬಹಿರಂಗವಾಗಿ ಹೆಣ್ಣುಮಕ್ಕಳಿಗೆ ಕ್ಷಮೆಯಾಚಿಸಿದರು. ಇಷ್ಟಾದರೂ ಸಹ ಇಂದಿಗೂ ಈ ವಿಚಾರವನ್ನು ಒಂದಷ್ಟು ನಟಿಯರು ಸಂದರ್ಶನಗಳಲ್ಲಿ ಮತ್ತೊಮ್ಮೆ ಮುನ್ನೆಲೆಗೆ ತರುತ್ತಿದ್ದಾರೆ. 

ಇನಯಾ ಸುಲ್ತಾನ್​ ಕಿಡಿ

ಶಿವಾಜಿ ಹೇಳಿಕೆಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ತೆಲುಗು ನಟಿ, ಬಿಗ್ ಬಾಸ್​ ಸ್ಪರ್ಧಿ ಇನಯಾ ಸುಲ್ತಾನ, ಬ್ಲೌಸ್ ಹಾಕದ​ ಸೀರೆ ಉಡುವುದು ನಮ್ಮ ಸಂಸ್ಕೃತಿ. ಹಿಂದೆ, ರಾಜರ ಆಳ್ವಿಕೆಯಲ್ಲಿ ಹಾಗೆಯೇ ಇತ್ತು. ನಮ್ಮ ದೇವಾಲಯಗಳಲ್ಲಿಯೂ ಅದೇ ರೀತಿಯಲ್ಲಿ ಕೆತ್ತಿದ ಪ್ರತಿಮೆಗಳಿವೆ. ಅವರಲ್ಲೂ ಸೀರೆಗಳಿವೆ, ಆದರೆ ಬ್ಲೌಸ್​ಗಳಿಲ್ಲ. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ, 'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲಿ, ಎಲ್ಲಾ ಮಹಿಳೆಯರು ಮತ್ತು ರಾಣಿಯರು ಬ್ಲೌಸ್​ ಇಲ್ಲದ ಸೀರೆಯನ್ನೇ ತೊಟ್ಟಿದ್ದಾರೆ ಎಂದರು. 
ಅಂದು ಆ ರೀತಿ ಇರಲಿಲ್ಲ. ಆದರೀಗ, ಜನರು ಇದನ್ನೆಲ್ಲ ಅಸಭ್ಯವಾಗಿ ನೋಡುತ್ತಿದ್ದಾರೆ. ಹೀಗಾಗಿಯೇ ಅಸಭ್ಯವಾಗಿ ಕಾಣಿಸುತ್ತಿದೆ. ಬಹುಶಃ ನಟ ಶಿವಾಜಿ, ಇನ್ನೂ ತಮ್ಮ ಮಂಗಪತಿ ಪಾತ್ರದಿಂದ ಹೊರಬಂದಿಲ್ಲ ಅನಿಸುತ್ತೆ. ಪುರುಷರು ಮಹಿಳೆಯರನ್ನು ಆಳುತ್ತಿದ್ದಾರೆ. ಭಾರತದಲ್ಲಿ ಇದು ತೊಲಗಬೇಕು ಎಂದು ನಟಿ ಕಿಡಿಕಾರಿದ್ದಾರೆ. 

ಅಷ್ಟಕ್ಕೂ ಏನಿದು ವಿವಾದ? 

ಶಿವಾಜಿ ಹೇಳಿಕೆ ಬೆನ್ನಲ್ಲೇ ಕಿಡಿಕಾರಿದ ನಟ ಕಮಲ್ ಕಾಮರಾಜು, "ಮಹಿಳೆಯರು ಏನು ಧರಿಸಬೇಕು ಎಂಬುದು ಅವರವರ ವೈಯಕ್ತಿಕ ಆಯ್ಕೆ. ಅದು ಪುರುಷರ ತೀರ್ಪಿಗಾಗಿ ಅಲ್ಲ" ಎಂದರು. ಇನ್ನು ನಿರೂಪಕಿ, ನಟಿ ಅನುಸೂಯ ಭಾರಧ್ವಾಜ್ ಕೂಡ ಧ್ವನಿ ಎತ್ತಿದ್ದು, ನನಗೆ ವೈಯಕ್ತಿಕವಾಗಿ ಅನಿಸುವುದು, ಡ್ರೆಸ್ಸಿಂಗ್ ಎನ್ನುವುದು ಯಾರದ್ದೋ ವೈಯಕ್ತಿಕ ವಿಷಯ. ಆಹಾರ ಮತ್ತು ಬಟ್ಟೆಗಳು ಅವರ ಇಚ್ಛೆಯಂತೆ ಇರಬೇಕು. ನಮ್ಮ ಆರಾಮದಾಯಕ, ನಮ್ಮ ಆಯ್ಕೆ ಅಷ್ಟೇ! ನಿಮಗೆ ಹೇಗೆ ಸಾಂಬರ್​ ಬೇಡ, ಬಿರಿಯಾನಿ ಬೇಕು ಎಂಬ ಬಯಕೆಯೋ, ಅಂತೆಯೇ, ನಮಗೆ ಡ್ರೆಸ್‌ಗಳು. ಈ ವಿಚಾರದಲ್ಲಿ ಶಿವಾಜಿ ಬಗ್ಗೆ ನನಗೆ ಬೇಸರವಿದೆ. ಅವರ ಮನಸ್ಥಿತಿ ಒಪ್ಪುವಂತದ್ದಲ್ಲ" ಎಂದಿದ್ದಾರೆ. ​(ಏಜೆನ್ಸೀಸ್).