Anand Deverakonda (ಚಿತ್ರ Instagram)
ಹೈದರಾಬಾದ್: ಇತ್ತೀಚಿಗೆ ಮದುವೆಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಕುಟುಂಬದೊಂದಿಗೆ ಸಂಭ್ರಮಿಸುತ್ತಿರುವ ಅಪರೂಪದ ವಿಡಿಯೋವೊಂದನ್ನು (Anand Deverakonda) ಆನಂದ್ ದೇವರಕೊಂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಸಧ್ಯ ಎಲ್ಲೆಡೆ ವೈರಲ್ ಆಗಿದೆ.
ವಿಡಿಯೋದಲ್ಲೇನಿದೆ?
ಮನೆಯ ಆವರಣದಲ್ಲಿ ಚಿತ್ರೀಕರಿಸಲಾದ ವಿಡಿಯೋದಲ್ಲಿ ಆನಂದ್, ವಿಜಯ್, ರಶ್ಮಿಕಾ ಮತ್ತು ಹೆಜ್ಜೆ ಹಾಕುವುದನ್ನು ತೋರಿಸಲಾಗಿದೆ. ಇದು ಹಚ್ಚ ಹಸಿರಿನ ಹುಲ್ಲುಹಾಸಿನ ಮೇಲೆ ಸ್ನೇಹಿತರ ಗುಂಪಿನೊಂದಿಗೆ ನೃತ್ಯ ಮಾಡುತ್ತಿರುವ ದೃಶ್ಯವು ಒಂದು ಸುಂದರವಾದ ಕೌಟುಂಬಿಕ ಸಭೆಯ ಚಿತ್ರಣವನ್ನು ನೀಡಿದೆ.
ಈ ವಿಡಿಯೋದಲ್ಲಿ ವಿಜಯ್ ಬಿಳಿ ಪ್ಯಾಂಟ್ ಜೊತೆಗೆ ಬಣ್ಣ-ಬಣ್ಣದ ಶರ್ಟ್ ಧರಿಸಿದ್ದರೆ, ರಶ್ಮಿಕಾ ಶಾರ್ಟ್ಸ್ ಮತ್ತು ಕ್ಯಾಶುವಲ್ ಶರ್ಟ್ ಧರಿಸಿದ್ದಾರೆ. ಆನಂದ್ ದೇವರಕೊಂಡ ಅವರ ಮುಂಬರುವ ಚಿತ್ರ ಎಪಿಕ್ ನ 'ಸಂಚಾರಮೆ' ಹಾಡಿಗೆ ಮುಕ್ತವಾಗಿ ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿರುವಂತೆ ಕಾಣುತ್ತದೆ.
ನೋಡಲು ಇದು ಸ್ವಲ್ಪ ಗೊಂದಲಮಯವಾಗಿ ಕಾಣಿಸಬಹುದು, ಆದರೆ ಆ ಕ್ಷಣದಲ್ಲಿ ನಾವು 'ಸಂಚಾರಮೆ' ಹಾಡನ್ನು ಕೇಳುತ್ತಾ ಅತೀವ ಸಂತೋಷಪಟ್ಟೆವು. ನಾವು ಪ್ರೀತಿಸುವವರ ಜೊತೆಗೂಡಿ ಪ್ರವಾಸ ಮಾಡುವುದು ಮತ್ತು ನೃತ್ಯ ಮಾಡುವುದಕ್ಕಿಂತ ಹೆಚ್ಚಿನ ಆನಂದ ಬೇರೆ ಯಾವುದಿದೆ? ಎಂದು ಆನಂದ್ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
ಆನಂದ್ ಅವರ ಭಾವನಾತ್ಮಕ ಪೋಸ್ಟ್
ಫೆಬ್ರವರಿ 26 ರಂದು ಉದಯಪುರದಲ್ಲಿ ನಡೆದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ವಿವಾಹದ ನಂತರ ಆನಂದ್ ಅವರಿಬ್ಬರನ್ನೂ ಅಪ್ಪಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಅತ್ತಿಗೆ ಹೇಗಿದ್ದಾರೆ ಎಂದು ಕೂಗಿದಾಗ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯುತ್ತಿರಲಿಲ್ಲ.
ಆದರೆ, ಇಂದು ನನ್ನ ಸಹೋದರ ಮದುವೆಯಾಗಿದ್ದಾನೆ. ನನ್ನ ಅತ್ತಿಗೆ ಅತ್ಯಂತ ಸಹಾನುಭೂತಿ ಮತ್ತು ಒಳ್ಳೆಯ ಗುಣಗಳನ್ನು ಹೊಂದಿದವರು. ಇವರಿಬ್ಬರೂ ಜೀವನಪೂರ್ತಿ ಹೀಗೆಯೇ ನಗುತ್ತಲೇ ಇರಬೇಕೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅರ್ಥಪೂರ್ಣ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು (ಏಜೆನ್ಸೀಸ್).