- 'ಡಕಾಯಿತ್' ಚಿತ್ರದ ಸಕ್ಸಸ್ ಮೀಟ್
- ಅದಿವಿ ಶೇಷ್ ಮತ್ತು ಮೃನಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿ ನಟನೆಯ ಚಿತ್ರ
- ಚಿತ್ರಕ್ಕೆ ಸಿನಿಪ್ರಿಯರಿಂದ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಗಳು
- ಸಕ್ಸಸ್ ಮೀಟ್ ವೇದಿಕೆಯಲ್ಲಿ ಅಲ್ಲು ಅರ್ಜುನ್ ತಂದೆ ಆಡಿದ ಮಾತಿಗೆ ನಾಚಿದ ಮೃನಾಲ್
ಆಂಧ್ರಪ್ರದೇಶ: ನಟ ಅದ್ವಿ ಶೇಷ್ ಮತ್ತು ಸೀತಾ ರಾಮಂ ಖ್ಯಾತಿಯ ಬ್ಯೂಟಿ ಮೃನಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ 'ಡಕಾಯಿತ್' ಚಿತ್ರವು ಇದೇ ಏ.10ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಂಡಿತು. ಸಿನಿಮಾಗೆ ಉತ್ತಮ ವಿಮರ್ಶೆಗಳು, ಮೆಚ್ಚುಗೆಗಳು ವ್ಯಕ್ತವಾದ ಬೆನ್ನಲ್ಲೇ ಚಿತ್ರತಂಡ ಇತ್ತೀಚೆಗಷ್ಟೇ ಸಕ್ಸಸ್ ಮೀಟ್ ಕಾರ್ಯಕ್ರಮ ಮಾಡಿತು.
ತೆಲುಗು ಚಿತ್ರರಂಗದ ಹಿರಿಯ ನಿರ್ಮಾಪಕ ಅಲ್ಲು ಅರವಿಂದ್ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮಗಳು ಸದಾ ಮೋಜು ಮತ್ತು ಕುತೂಹಲಕಾರಿಯಾಗಿರುತ್ತವೆ. ಇದಕ್ಕೆ ಡಕಾಯಿತ್ ಚಿತ್ರದ ಸಕ್ಸಸ್ ಮೀಟ್ ಈವೆಂಟ್ ಕೂಡ ಒಂದು ಸಾಕ್ಷಿ. ವೇದಿಕೆಯ ಮೇಲೆ ಚಿತ್ರತಂಡಕ್ಕೆ ಶುಭಕೋರಿದ ಅರವಿಂದ್, ಎಲ್ಲಾ ಕಲಾವಿದರಿಗೂ ಅಭಿನಂದನೆ ತಿಳಿಸಿದರು. ಈ ವೇಳೆ, ಮೃನಾಲ್ಗೆ ಮದುವೆ ಕುರಿತಂತೆ ಒಂದು ಸಲಹೆ ನೀಡಿದರು.
ನೋಡಮ್ಮ, ನೀನು ತೆಲುಗು ಹುಡುಗನನ್ನೇ ಮದುವೆಯಾಗಿ, ಇಲ್ಲಿನ ಸೊಸೆ ಆಗಿಬಿಡು ಎಂದರು. ಅಲ್ಲು ಅರವಿಂದ್ ಅವರ ಮಾತು ಕೇಳುತ್ತಿದ್ದಂತೆ ನಾಚಿ ನೀರಾದ ಮೃನಾಲ್, ಕೆಲ ಸಮಯ ಮುಖವನ್ನು ಮುಚ್ಚಿಕೊಂಡರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ಹಿಂದೆ ನಟಿ ಲಾವಣ್ಯ ತ್ರಿಪಾಠಿಗೂ ಇದೇ ರೀತಿಯ ಹೇಳಿದ್ದರು ಅರವಿಂದ್. ಅನಿರೀಕ್ಷಿತವಾಗಿ ವರುಣ್ ತೇಜ್ ಅವರನ್ನು ಮದುವೆಯಾಗುವ ಮೂಲಕ ಅಲ್ಲು ಅರವಿಂದ್ ಅವರ ಮಾತನ್ನು ಲಾವಣ್ಯ ಈಡೇರಿಸಿದರು. ಈಗ, ಮೃಣಾಲ್‌ಗೂ ಅದೇ ಆಗುತ್ತದೆ ಎಂದು ಅರವಿಂದ್ ತಮಾಷೆ ಮಾಡಿದ್ದಾರೆ.
ಆಗ ನಾನು ಲಾವಣ್ಯಗೆ ಹೇಳಿದ್ದೆ. ಅವಳು ವರುಣ್ ಅವರನ್ನು ಮದುವೆಯಾದಳು. ಈಗ ಮೃಣಾಲ್ ಅವರಿಗೆ ಹೇಳಿದ್ದೇನೆ. ಈಕೆ ಯಾರ ಜೊತೆ ಸಪ್ತಪದಿ ತುಳಿಯುತ್ತಾರೆ ಅನ್ನೋದನ್ನು ಕಾದು ನೋಡೋಣ ಎಂದು ತಮಾಷೆಯಾಗಿ ಹೇಳಿದರು. ಈಗಾಗಲೇ ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಮೃನಾಲ್, ತಮಿಳು ನಟ ಧನುಷ್ ಜೊತೆಗೆ ದಾಂಪತ್ಯಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿಗಳು ಭಾರೀ ಸದ್ದು ಮಾಡಿತು. ಇದು ವಿಪರೀತಗೊಂಡ ಬೆನ್ನಲ್ಲೇ ಸ್ವತಃ ನಟಿಯೇ ಪ್ರತಿಕ್ರಿಯಿಸಿ, ಇದೆಲ್ಲ ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರು.