Adivi Sesh Dog Rescue 
ಟಾಲಿವುಡ್

ಅನಾಥವಾಗಿ ಬೀದಿ ಬೀದಿ ಅಲೆಯುತ್ತಿರುವ ನಾಯಿ ರಕ್ಷಣೆಗೆ ಮುಂದಾದ ನಟ ಅಡವಿ ಶೇಷ; ಜಾಗ ಹುಡುಕಿ ಕೊಡಿ ಪ್ಲೀಸ್ ಎಂದು ಫ್ಯಾನ್ಸ್​ಗೆ ಮನವಿ..Viral Video

ಪ್ರಮುಖ ಮುಖ್ಯಾಂಶಗಳು

  • ಅನಾಥ ನಾಯಿ ರಕ್ಷಣೆಗೆ ಮುಂದಾದ ನಟ ಅಡವಿ ಶೇಷ
  • ವಿಡಿಯೋವೊಂದನ್ನು ಹಂಚಿಕೊಂಡು ಸ್ಥಳ ಗುರುತಿಸುವಂತೆ ಮನವಿ
  • 2026ರಲ್ಲಿ ರಿಲೀಸ್​ ಆದ 'ಡೆಕಾಯಿತ್​' ಸಿನಿಮಾಗೆ ಭಾರೀ
Adavi Shesha: ಎವರು, ಮೇಜರ್​ , ಡೆಕಾಯತ್​ ಸಿನಿಮಾಗಳ ಮೂಲಕ ಮಿಂಚಿದ ಅಡಿವಿ ಶೇಷ ಅವರ ಮಾನವೀಯತೆ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಬೀದಿ ನಾಯಿಯೊಂದು ದಿಕ್ಕು ತೋಚದೆ ಅಲೆದಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು ಅದರ ರಕ್ಷಣೆಗೆ ಮುಂದಾಗಿದ್ದಾರೆ.

ವಿಡಿಯೋದಲ್ಲಿ ಏನಿದೆ?

ವಿದಿತ್​ ಶರ್ಮಾ ಎಂಬುವವರು ಬೀದಿ ನಾಯಿಯೊಂದು ಆಹಾರವಿಲ್ಲದೆ ಬೀದಿ ಬೀದಿ ಅಲೆಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ದಕ್ಷಿಣ ಭಾರತದ ಯಾವುದೋ ರಾಜ್ಯದಲ್ಲಿರುವ ನಾಯಿ ಲ್ಯಾಬ್ರಡಾರ್‌ ಪ್ರಭೇದದ ನಾಯಿಯಂತೆ ಕಾಣುತ್ತಿದೆ. ಒಬ್ಬ ಗಾಡಿಯವ ಬೇಕೆಂದು ನಾಯಿಗೆ ಡಿಕ್ಕಿ ಹೊಡೆಯಲು ಹೋಗುತ್ತಾನೆ. ಅದು ಆಗ ಭಯದಿಂದ ಓಡಿ ಹೋಗುತ್ತಿದೆ. ಆ ನಾಯಿಯಲ್ಲಿರುವ ಭಯ, ಅಸಹಾಯಕತೆ, ನೋವು ಎಲ್ಲವೂ ಕರುಳು ಕಿವುಚುವಂತೆ ಮಾಡುತ್ತಿದೆ. ದಯವಿಟ್ಟು ಈ ವಿಡಿಯೋ ಶೇರ್​ ಮಾಡಿ, ಪ್ರಾಣಿಗಳ ಮೇಲೆ ದಯೆ ಇರಲಿ. ನಾಯಿಯನ್ನು ಹುಡುಕಿ ರಕ್ಷಿಸಿ ಎಂದು ಹಂಚಿಕೊಂಡಿದ್ದಾರೆ.

ಅಡವಿ ಶೇಷ ಟ್ವೀಟ್​ನಲ್ಲಿ ಏನಿದೆ?

ಅವರ ಟ್ವೀಟ್​ ಅನ್ನೇ ಶೇರ್​ ಮಾಡಿರುವ ಅಡವಿ ಶೇಷ ಅವರು, ನನ್ನ ಪ್ರೀತಿಯ ಗೆಳೆಯರೇ ಇದು ಯಾವ ಸ್ಥಳ ಎಂದು ಪತ್ತೆ ಹಚ್ಚೋಕೆ ಸಾಧ್ಯ ಇದೆಯಾ. ಈ ನಾಯಿಯ ವಿಡಿಯೋ ನೋಡ್ತಾ ನನ್ನ ಕಣ್ಣಲ್ಲಿ ನೀರೇ ಬಂತು. ಈ ಸ್ಥಳ ಗರುತಿಸಲು ಸಹಾಯ ಮಾಡಿ. ನಾನು ಆ ನಾಯಿಯನ್ನು ಹುಡುಕಿ, ರಕ್ಷಿಸಲು ಪ್ರಯತ್ನಿಸುತ್ತೇನೆ. ದಯವಿಟ್ಟು ಸಹಾಯ ಮಾಡಿ ಎಂದು ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ದಕ್ಷಿಣ ಭಾರತದ ಯಾವುದೋ ಭಾಗದಲ್ಲಿ ಈ ನಾಯಿ ಅನಾಥವಾಗಿ ಅಲೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಪ್ರಾಣಿ ಕಲ್ಯಾಣ ಮತ್ತು ಪರಿಸರದ ಬಗ್ಗೆ ಮೊದಲಿನಿಂದಲೂ ಕಾಳಜಿ ಹೊಂದಿರುವ ಅಡಿವಿ ಶೇಷ್, ಪ್ರಾಣಿಗಳ ನಿಸ್ವಾರ್ಥ ಗುಣವನ್ನು ಗೌರವಿಸುತ್ತಾರೆ. ಮೂಕ ಪ್ರಾಣಿಗಳ ಪರವಾಗಿ ಧ್ವನಿ ಎತ್ತುವವರು ಕಡಿಮೆ ಇರುವ ಕಾರಣ, ತಾವೇ ಖುದ್ದಾಗಿ ಈ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಅಡವಿ ಶೇಷ್​ ಸಿನಿಮಾ ವೃತ್ತಿ ಜೀವನ ಹೇಗಿದೆ?

ಅಡಿವಿ ಶೇಷ್ ನಟನೆಯ 'ಡೆಕಾಯಿತ್​' ಸಿನಿಮಾ ರಿಲೀಸ್​ ಆಗಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಶನೀಲ್​ ದೇವ್​ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದು ಪ್ರಕಾಶ್ ರಾಜ್, ಸುನಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರು ದಿನಗಳಲ್ಲಿ ಭಾರತದಲ್ಲಿ ಸುಮಾರು 25.50 ಕೋಟಿ ರೂ. ಹಾಗೂ ಜಗತ್ತಿನಾದ್ಯಂತ 41.69 ಕೋಟಿ ರೂ. ಗಳಿಕೆ ಮಾಡಿದೆ. ಮೃಣಾಲ್​ ಟಾಕುರ್​​ ಅವರು ನಾಯಕ ನಟಿಯಾಗಿ ಬಣ್ಣ ಹಚ್ಚಿದ್ದು ಈಗಾಗಲೇ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ,
(ಏಜೆನ್ಸೀಸ್​​).