ತೆಲುಗು ನಟ ಶಿವಾಜಿ  
ಟಾಲಿವುಡ್

2 ಪದಗಳಿಗೆ ಮಾತ್ರ! ಇಲ್ಲಿ ಯಾರಿಗೂ ಹೆದರಲ್ಲ ನಾನು... ಎರಡನೇ ಬಾರಿ ಕ್ಷಮೆ ಕೇಳುವ ನೆಪದಲ್ಲಿ ಶಿವಾಜಿ ವಾರ್ನಿಂಗ್

ಪ್ರಮುಖ ಮುಖ್ಯಾಂಶಗಳು

  • ಸಿನಿಮಾ ಪ್ರೀ-ರಿಲೀಸ್​ ಈವೆಂಟ್​ ವೇಳೆ ಮಾತಿನಲ್ಲಿ ಎಡವಟ್ಟು
  • ನಟಿಯರ ಉಡುಗೆ ಬಗ್ಗೆ ನಟ ಶಿವಾಜಿ ಹೇಳಿಕೆಗೆ ಟಾಲಿವುಡ್​ ಕೆಂಡಾಮಂಡಲ
  • ಎರಡನೇ ಬಾರಿ ಕೇಳಿದ ಕ್ಷಮೆಯಲ್ಲಿ ಕೆಲವರಿಗೆ ವಾರ್ನಿಂಗ್
ಆಂಧ್ರಪ್ರದೇಶ: ಟಾಲಿವುಡ್​ ಅಂಗಳದಲ್ಲಿ ನಟ ಶಿವಾಜಿ ನೀಡಿರುವ ಒಂದೇ ಒಂದು ಹೇಳಿಕೆ ಸದ್ಯ ಭಾರೀ ವಿವಾದ ಸೃಷ್ಟಿಸಿದೆ. ಇತ್ತೀಚೆಗೆ ನಡೆದ 'ದಂಡೋರ' ಚಿತ್ರದ ಪ್ರೀ-ರಿಲೀಸ್ ಈವೆಂಟ್​ನಲ್ಲಿ ಮಾತನಾಡಿದ ಶಿವಾಜಿ, ನಟಿಯರು ಮೈತುಂಬ ಸೀರೆ ಉಟ್ಟರೆ ಚೆಂದ, ಅಂದ. ಅದನ್ನು ಬಿಟ್ಟು ದೇಹದ ಅಂಗಾಂಗ ಕಾಣುವಂತ ಬಟ್ಟೆಗಳನ್ನು ಧರಿಸುವುದು ಸರಿಯಲ್ಲ ಎಂದರು. ಈ ಹೇಳಿಕೆ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೆಲುಗು ನಟಿಮಣಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಶಿವಾಜಿ ನೀಡಿದ ಹೇಳಿಕೆಗೆ ತೆಲುಗು ಚಿತ್ರರಂಗದಲ್ಲಿ ವ್ಯಾಪಕ ಟೀಕೆ, ಅಸಮಾಧಾನಗಳು ವ್ಯಕ್ತವಾಗುತ್ತಿವೆ. ಭಾರೀ ವಿರೋಧಗಳ ಬೆನ್ನಲ್ಲೇ ಕ್ಷಮಾಪಣೆ ಕೋರಿದ ಶಿವಾಜಿ, ವಿಡಿಯೋ ಮೂಲಕ ತಮ್ಮ ಹೇಳಿಕೆಗೆ ಸ್ಪಷ್ಟತೆ ನೀಡಿದರು. ಇಷ್ಟಾದರೂ ಸಹ ಹಲವರ ಕೆಂಡಾಮಂಡಲ ಮಾತುಗಳು ಇಂದಿಗೂ ಮುಂದುವರಿದಿವೆ. ವಿಡಿಯೋದಲ್ಲಿ ಕ್ಷಮೆಯಾಚಿಸಿದ್ದ ಶಿವಾಜಿ ಇಂದು ಮತ್ತೊಮ್ಮೆ ತಮ್ಮ ಮುಂಬರುವ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ವಾರ್ನಿಂಗ್ ಜತೆ ಕ್ಷಮೆ ಕೇಳಿರುವುದು ಮತ್ತೆ ಕೆಲವರ ಕಿಡಿಗೆ ಕಾರಣವಾಗಿದೆ. .

ಯಾರಿಗೂ ಭಯಪಡುವ ಅಗತ್ಯವಿಲ್ಲ

"ಒಂದಷ್ಟು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಇಲ್ಲಿ ಯಾವುದೇ ಮಹಿಳೆಯ ವಿರುದ್ಧ ನಾನು ಮಾತನಾಡಿಲ್ಲ. ನನ್ನಿಂದ ಕೇವಲ ಎರಡು ಮಾತುಗಳು ಮಾತ್ರ ತಪ್ಪಾಗಿವೆ. ಅದಕ್ಕೆ ಈಗಾಗಲೇ ಬಹಿರಂಗವಾಗಿ ಕ್ಷಮೆಯಾಚಿದ್ದೇನೆ. ಪದಗಳು ತಪ್ಪಾಗಿದೆ ವಿನಃ ನಾನು ನೀಡಿದ ಹೇಳಿಕೆ ಸರಿಯಾಗಿಯೇ ಇದೆ. ಆದ್ದರಿಂದ ನಾನಿಲ್ಲಿ ಯಾರಿಗೂ ಭಯಪಡುವ ಅಗತ್ಯವಿಲ್ಲ. ಅಸಲಿಗೆ, ಕಳೆದ ಎರಡು ದಿನಗಳಿಂದ ನಾನು ನಿದ್ದೆ ಮಾಡಿಲ್ಲ" ಎಂದಿದ್ದಾರೆ.
ಇದೆಲ್ಲದರ ನಡುವೆ ಶಿವಾಜಿ ನಟಿಮಣಿಯರ​ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಚಲನಚಿತ್ರ ಕಲಾವಿದರ ಸಂಘದ (MAA) ಅಧ್ಯಕ್ಷರಿಗೆ ಈಗಾಗಲೇ ಹಲವು ದೂರುಗಳು ಸಲ್ಲಿಕೆಯಾಗಿವೆ. ನಟ ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಅನೇಕ ನಟಿಯರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ, ಶಿವಾಜಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲಿದ್ದೇವೆ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.

ಅಷ್ಟಕ್ಕೂ ಏನಿದು ವಿವಾದ?

ಶಿವಾಜಿ ಹೇಳಿಕೆ ಬೆನ್ನಲ್ಲೇ ಕಿಡಿಕಾರಿದ ನಟ ಕಮಲ್ ಕಾಮರಾಜು, "ಮಹಿಳೆಯರು ಏನು ಧರಿಸಬೇಕು ಎಂಬುದು ಅವರವರ ವೈಯಕ್ತಿಕ ಆಯ್ಕೆ. ಅದು ಪುರುಷರ ತೀರ್ಪಿಗಾಗಿ ಅಲ್ಲ" ಎಂದರು. ಇನ್ನು ನಿರೂಪಕಿ, ನಟಿ ಅನುಸೂಯ ಭಾರಧ್ವಾಜ್ ಕೂಡ ಧ್ವನಿ ಎತ್ತಿದ್ದು, ನನಗೆ ವೈಯಕ್ತಿಕವಾಗಿ ಅನಿಸುವುದು, ಡ್ರೆಸ್ಸಿಂಗ್ ಎನ್ನುವುದು ಯಾರದ್ದೋ ವೈಯಕ್ತಿಕ ವಿಷಯ. ಆಹಾರ ಮತ್ತು ಬಟ್ಟೆಗಳು ಅವರ ಇಚ್ಛೆಯಂತೆ ಇರಬೇಕು. ನಮ್ಮ ಆರಾಮದಾಯಕ, ನಮ್ಮ ಆಯ್ಕೆ ಅಷ್ಟೇ! ನಿಮಗೆ ಹೇಗೆ ಸಾಂಬರ್​ ಬೇಡ, ಬಿರಿಯಾನಿ ಬೇಕು ಎಂಬ ಬಯಕೆಯೋ, ಅಂತೆಯೇ, ನಮಗೆ ಡ್ರೆಸ್‌ಗಳು. ಈ ವಿಚಾರದಲ್ಲಿ ಶಿವಾಜಿ ಬಗ್ಗೆ ನನಗೆ ಬೇಸರವಿದೆ. ಅವರ ಮನಸ್ಥಿತಿ ಒಪ್ಪುವಂತದ್ದಲ್ಲ" ಎಂದಿದ್ದಾರೆ. ​(ಏಜೆನ್ಸೀಸ್).