- ಅಟ್ಲೀ ಮತ್ತು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಷನ್ ಸಿನಿಮಾದ ಪೋಸ್ಟರ್ ರಿವೀಲ್
- ವಿಚಿತ್ರ ಮೃಗದ ಪವರ್‌ಫುಲ್ ಕೈ ಇರುವ ಪೋಸ್ಟರ್ ಹಂಚಿಕೊಂಡ ಅಟ್ಲಿ, ಸಿನಿಮಾದ ಒಳಗುಟ್ಟೇನು?
- ಏಪ್ರಿಲ್ 8 ರಂದು ಬೆಳಿಗ್ಗೆ 11 ಗಂಟೆಗೆ ಚಿತ್ರದ ಅಧಿಕೃತ ಶೀರ್ಷಿಕೆ ಬಿಡುಗಡೆ
ತೆರಿ, ರಾಜಾ-ರಾಣಿ, ಮೆರ್ಸೆಲ್, ಬಿಗಿಲ್ ಹೀಗೆ ಪ್ರತಿಯೊಂದು ಹಿಟ್ ಸಿನಿಮಾಗಳನ್ನೇ ಕೊಟ್ಟ ಅಟ್ಲೀ ಕುಮಾರ್(Atlee Kumar) ಹಾಗೂ ಟಾಲಿವುಡ್ ಸ್ಟಾರ್ ಆದ ಅಲ್ಲು ಅರ್ಜುನ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ 'AA22xA6' ಸಿನಿಮಾ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ.
ಪುಷ್ಪ-2 ಸಿನಿಮಾ ನಂತರ ಯಾವುದೇ ಸಿನಿಮಾಗಳಲ್ಲಿ ನಟನೆಗೆ ಒಪ್ಪಿಕೊಳ್ಳದ ನಟ ಅಲ್ಲು ಅರ್ಜುನ್ ತಮಿಳು ನಿರ್ದೇಶಕ ಅಟ್ಲೀ ಕತೆಗೆ ತಲೆ ಬಾಗಿದ್ದಾರೆ. ಸಿನಿಮಾದ ಮೊದಲ ಪೋಸ್ಟರ್ ಅನ್ನು ಸನ್ ಪಿಕ್ಚರ್ಸ್ ಹಂಚಿಕೊಂಡಿದೆ. ಸದ್ಯ 'AA22xA6' ಈಗ ಸಿನಿರಂಗದಲ್ಲಿ ಕುತೂಹಲ ಕೆರಳಿಸಿದೆ. ಚಿತ್ರದ ಅಧಿಕೃತ ಶೀರ್ಷಿಕೆಯನ್ನು ಏಪ್ರಿಲ್ 8 ರಂದು ಬೆಳಿಗ್ಗೆ 11 ಗಂಟೆಗೆ ಘೋಷಣೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಅಟ್ಲೀ ಪೋಸ್ಟರ್ನಲ್ಲಿ ಏನಿದೆ?
ಸನ್ ಪಿಕ್ಚರ್ಸ್ ಹಂಚಿಕೊಂಡಿರುವ ಪೋಸ್ಟರ್ನಲ್ಲಿ ವಿಚಿತ್ರ ಮೃಗದ ಪವರ್‌ಫುಲ್ ಕೈ ಇದೆ. ಇದು ಸಿನಿಮಾದಲ್ಲಿನ ಫ್ಯಾಂಟಸಿ ಅಂಶದ ಬಗ್ಗೆ ನೀಡುತ್ತಿರುವ ಮಾಹಿತಿ ಎಂದು ಊಹಿಸಲಾಗಿದೆ. ಈ ಪೋಸ್ಟ್ಗೆ "ಬ್ರೇಸ್ ಫಾರ್ ದಿ ಬ್ಲಾಸ್ಟ್" ಎಂಬ ಶೀರ್ಷಿಕೆ ಕೊಟ್ಟು ಪೋಸ್ಟರ್ ಹಂಚಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯಾರೆಲ್ಲ ಸಿನಿಮಾದಲ್ಲಿದ್ದಾರೆ?
ದೀಪಿಕಾ ಪಡುಕೋಣೆ ಅವರು ಅಟ್ಲೀ ನಿರ್ದೇಶನದ ಜವಾನ್ ಸಿನಿಮಾದಲ್ಲಿ ನಟಿಸಿದ್ದರು. ಮೊದಲ ಬಾರಿಗೆ ದೀಪಿಕಾರ ಜೊತೆಗೆ ಅಲ್ಲು ಅರ್ಜುನ್ ನಟಿಸಲಿದ್ದಾರೆ. ಇದರಲ್ಲಿ ಅವರಿಗೆ ವಿಶೇಷ ಪಾತ್ರ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ರಶ್ಮಿಕಾ ಮಂದಣ್ಣ ಅವರು ಸಹ ಈ ಸಿನಿಮಾದಲ್ಲಿರಲಿದ್ದು, ಇದರಲ್ಲಿ ಅವರದ್ದು ಖಳನಾಯಕಿ ಪಾತ್ರ ಎಂದು ಹೇಳಲಾಗುತ್ತಿದೆ. ರಮ್ಯಾ ಕೃಷ್ಣ, ಕೃತಿ ಶೆಟ್ಟಿ ಬಣ್ಣ ಹಚ್ಚಲಿದ್ದಾರೆ.
ಹಾಲಿವುಡ್ ರೀತಿ ಸಿನಿಮಾ ಮೇಕಿಂಗ್
ಈ ಸಿನಿಮಾವು ಹಾಲಿವುಡ್ನ ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ ಸಿನಿಮಾ ಮಾದರಿ ಇರಲಿದೆ ಎನ್ನಲಾಗುತ್ತಿದೆ. ಬೃಹತ್ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಇದರ ವಿನ್ಯಾಸ ಮತ್ತು ಕತೆ ವಿಭಿನ್ನ ಲೋಕದಲ್ಲಿ ಸಾಗಲಿದೆ ಎನ್ನಲಾಗುತ್ತಿದೆ. ಅವತಾರ್ 2 ಸಿನಿಮಾ ಮಾದರಿ ದೃಶ್ಯ ವೈಭವ ಇರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಬಿಗ್ ಬಜೆಟ್ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ, (ಏಜೆನ್ಸೀಸ್)