ಸಿನಿವಾಣಿ

ಟಾಲಿವುಡ್​ ಸ್ಟಾರ್ ಹೀರೋ ಗೆಳತಿ ಬಂಧನ

ಹೈದರಾಬಾದ್​: ಟಾಲಿವುಡ್​ ಸಿನಿಮಾ ರಂಗದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಸ್ಯಾಂಡಲ್​ವುಡ್​ ಸೇರಿ ಭಾರತೀಯ ಸಿನಿಮಾ ರಂಗವು ಡ್ರಗ್ಸ್ ಹಾವಳಿಯಿಂದ ಮುಕ್ತವಾಗಿಸಲು ನಾನಾ ರೀತಿಯಲ್ಲಿ ಪ್ರಯತ್ನ ಮಾಡುತ್ತಲೇ ಇದ್ದಾರೆ ಪೊಲೀಸರು.

ಆದರೆ ಪೊಲೀಸರು ಆ ಯುವತಿಯ ಹೆಸರನ್ನು ಪೊಲೀಸರು ಗೋಪ್ಯವಾಗಿ ಇಟ್ಟಿದ್ದಾರೆ. ಹಾಗಾಗಿ ಕನ್ನಡವೂ ಸೇರಿದಂತೆ ಹಲವು ಚಿತ್ರರಂಗದ ನಟ ನಟಿಯರನ್ನು ಬಂಧಿಸಿಯೂ ಆಗಿದೆ. ಈಗ ತೆಲುಗಿನಲ್ಲಿ ನಟನೊಬ್ಬನ ಪ್ರೇಯಸಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಿನಿಮಾ ಚೂಪಿಸ್ತ ಮಾವ, ಕುಮಾರಿ 21 ಎಫ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಯುವ ನಟ ರಾಜ್ ತರುಣ್ ಅವರ ಪ್ರೇಯಸಿಯನ್ನು ಈ ಬಾರಿ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿದ ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಹೆಸರೂ ಕೂಡ ಬಹಿರಂಗ ಪಡಿಸಿಲ್ಲ.

ಯುವತಿ ಗೋವಾದಿಂದ ಡ್ರಗ್ಸ್ ತಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆ ಯುವತಿಯನ್ನು ಬಂಧಿಸಿದ ನಂತರ, ಯಾರಿಗೆಲ್ಲ ಡ್ರಗ್ಸ್ ಸರಬರಾಜು ಆಗುತ್ತಿತ್ತು, ಯಾರು ತಂದು ಕೊಡುತ್ತಿದ್ದರು. ಹೀಗೆ ಇತ್ಯಾದಿ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ವಿಚಾರಣೆ ವೇಳೆ ನಟ ತರುಣ್​ ರಾಜ್​ ಹೆಸರು ಬಂದಿದ್ದರಿಂದ ಆ ನಟನನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಈ ಹಿಂದೆ ಟಾಲಿವುಡ್​ನಲ್ಲಿ ನಟ ನವದೀಪ್​, ರವಿತೇಜ ಸಹೋದರ, ನಿರ್ದೇಶಕ ಪೂರಿ ಜಗನ್ನಾಥ್​, ನಟ ಚಾರ್ಮಿ, ಮುಮೈಥ್ ಖಾನ್​ ಸೇರಿದಂತೆ ಕೆಲ ನಿರ್ಮಾಪಕರು, ನಟರು ಹೆಸರು ಕೇಳಿಬಂದಿದ್ದವು.