ಸಿನಿವಾಣಿ

ಪಾಕಿಸ್ತಾನ ಭಯೋತ್ಪಾದಕರ ಜತೆ ಸಮಂತಾ ನಂಟಿದೆಯೇ?; ಕೆಲ ಮೂಲಗಳಿಂದ ಮಾಹಿತಿ ಬಹಿರಂಗ

ಹೈದರಾಬಾದ್​: ಟಾಲಿವುಡ್​ ಸ್ಟಾರ್ ನಟಿ ಸಮಂತಾ ಅಕ್ಕಿನೇನಿ ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸ್ಟಾರ್ ಹೀರೋಗಳ ಜತೆಗೆ ನಟಿಸಿದ್ದಾರೆ. ಅಷ್ಟೇ ಅಲ್ಲ ನಾಯಕಿ ಪ್ರಧಾನ ಸಿನಿಮಾಗಳಿಂದಲೂ ಅವರು ಖ್ಯಾತಿ ಗಿಟ್ಟಿಸಿಕೊಂಡಿದ್ದಾರೆ. ಲಾಕ್​ಡೌನ್​ ನಡುವೆ ಸಿನಿಮಾ ಕೆಲಸಗಳ ಜತೆಗೆ ಉದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚಿನದಾಗಿ ಪಾಕಿಸ್ತಾನದ ಭಯೋತ್ಪಾದಕರ ಜತೆಗೂ ಸಮಂತಾ ನಂಟಿದೆ ಎಂಬ ವಿಚಾರವೂ ಇದೀಗ ಚರ್ಚೆಗೆ ಕಾರಣವಾಗಿದೆ.

ಪಾಕಿಸ್ತಾನದ ಜತೆಗೆ ನಂಟು ಎಂದ ಮಾತ್ರಕ್ಕೆ ಅವರನ್ನು ಭಯೋತ್ಪಾದಕಿ ಎಂದು ಬಿಂಬಿಸಬೇಡಿ. ಏಕೆಂದರೆ, ಪಾಕಿಸ್ತಾನದ ಭಯೋತ್ಪಾದಕಿಯಾಗಿ ಅವರು ಕಾಣಿಸಿಕೊಂಡಿರುವುದು ಫ್ಯಾಮಿಲಿ ಮ್ಯಾನ್​ 2 ವೆಬ್​ಸರಣಿಯಲ್ಲಿ. ಹೌದು. ಈಗಾಗಲೇ ಫ್ಯಾಮಿಲಿ ಮ್ಯಾನ್​ ಮೊದಲ ಸೀಸನ್​ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಅದರ ಮುಂದುವರಿದ ಭಾಗವಾಗಿ ಸೀಸನ್​ ಎರಡರಲ್ಲಿ ಸಮಂತಾ ನಟಿಸಿದ್ದಾರೆ.

ಇಲ್ಲಿಯವರೆಗೂ ಅವರ ಪಾತ್ರ ನೆಗೆಟಿವ್​ ರೀತಿಯಲ್ಲಿ ಇರಲಿದೆ ಎಂದೇ ಹೇಳಲಾಗಿತ್ತು. ಆದರೆ, ಪಾತ್ರದ ಗುಟ್ಟು ರಟ್ಟಾಗಿರಲಿಲ್ಲ. ಇದೀಗ ತಂಡದ ಮೂಲಗಳ ಪ್ರಕಾರ ಪಾಕಿಸ್ತಾನದ ಭಯೋತ್ಪಾದಕಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಶುಕ್ರವಾರವಷ್ಟೇ ಪೂರ್ತಿ ಶೂಟಿಂಗ್​ ಸಹ ಮುಗಿದಿದ್ದು, ಇನ್ನೇನು ಅಮೆಜಾನ್​ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

ರಾಜ್​ ಮತ್ತು ಡಿಕೆ ನಿರ್ದೇಶನದಲ್ಲಿ ದಿ ಫ್ಯಾಮಿಲಿ ಮ್ಯಾನ್​ 2 ಸಿದ್ಧವಾಗಿದ್ದು, ಮನೋಜ್​ ಬಾಜಪೇಯಿ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರಿಯಾಮಣಿ ಸಹ ವೆಬ್​ಸಿರೀಸ್​ನಲ್ಲಿದ್ದಾರೆ. (ಏಜೆನ್ಸೀಸ್​)