ತಮಿಳು ಚಿತ್ರರಂಗದ ಸ್ಟಾರ್ ನಟ  
ಸಿನಿವಾಣಿ

ಈತನ ಮುಖ ನೋಡಲು ಹಣ ಕೊಟ್ಟು ಚಿತ್ರಮಂದಿರಕ್ಕೆ ಹೋಗ್ಬೇಕಾ? ಇಂಥಾ ಚುಚ್ಚು ಮಾತು ಕೇಳಿದ್ದ ನಟನೇ ಇಂದು ಸಿಎಂ | Star Actor

ಪ್ರಮುಖ ಮುಖ್ಯಾಂಶಗಳು

  • ಆರಂಭದಲ್ಲಿ ಚುಚ್ಚು ಮಾತುಗಳು, ಇಂದು ಅಭಿಮಾನಿಗಳ ಅಭಿಮಾನಕ್ಕಿಲ್ಲ ಕೊನೆ
  • ತಮಿಳು ಚಿತ್ರರಂಗದ ಸ್ಟಾರ್​ ನಟನ ಆರಂಭದ ಕಥೆಯಿದು
  • ಸಿನಿಮಾಗೆ ಮಾತ್ರವಲ್ಲ, ನಿಜ ಜೀವನದಲ್ಲೂ ಈತ 'ಜನ ನಾಯಗನ್'​
ಚೆನ್ನೈ: ಚಿತ್ರರಂಗ ಅಂದಮೇಲೆ ಲೇವಡಿ, ಟೀಕೆ, ಚುಚ್ಚು ಮಾತುಗಳು, ವ್ಯಂಗ್ಯಗಳು ಸರ್ವೇ ಸಾಮಾನ್ಯ ಬಿಡಿ. ಇಂತಹ ಕಹಿ ಅನುಭವಗಳು ಅನೇಕ ನಟ-ನಟಿಯರಿಗೆ ಇಂದಿಗೂ ಮರೆಯಲಾಗದು. ಆರಂಭಿಕ ದಿನಗಳಲ್ಲಿ ಇದೆಲ್ಲ ಹೆಚ್ಚಾಗಿ ಕಾಡಿರುತ್ತದೆ. ಅಂತಹ ಹಲವಾರು ನಿದರ್ಶನಗಳು ಇಂದು ನಮ್ಮ ನಿಮ್ಮ ಮುಂದೆ ಸಾಕಷ್ಟಿವೆ.
ಚೊಚ್ಚಲ ಚಿತ್ರದಲ್ಲಿ ಹೀರೋ, ನಾಯಕ ನಟರಾಗಿ ಹೊರಹೊಮ್ಮುವ ಆಸೆಯನ್ನು ಹೊತ್ತುಕೊಂಡು ಬರುವ ಅದೆಷ್ಟೋ ಕಲಾವಿದರು ಕೆಲವರು ಹಿಯಾಳಿಸುವ ರೀತಿಗೆ ಸೋತು, ವೃತ್ತಿಯಿಂದಲೇ ಎಕ್ಸಿಟ್​ ಆಗಿಬಿಡುತ್ತಾರೆ. ಚುಚ್ಚು ಮಾತುಗಳಿಗೆ ನಾಯಕರಾಗಿರುವ ಅಂಥವರ ಮಾತುಗಳನ್ನು ಮನಸ್ಸಿಗೆ ತೆಗೆದುಕೊಂಡು ತಮ್ಮ ಕನಸನ್ನೇ ಮೊಟಕುಗೊಳಿಸುತ್ತಾರೆ. ಇನ್ನು ಕೆಲವರು ಎಷ್ಟೇ ಅಣಕಿಸಿ ಮಾತನಾಡಿದರು, ಕುಗ್ಗಿಸಲು ಪ್ರಯತ್ನಿಸಿದರು, ಅದಕ್ಕೆ ಜಗ್ಗದೆ ತಮ್ಮ ಸಾಧನೆ ಮೂಲಕ ಟೀಕಿಸಿದವರ ಮುಖಕ್ಕೆ ಹೊಡೆದಂತೆ ಉತ್ತರಿಸುತ್ತಾರೆ. ಅದಕ್ಕೆ ಈ ಸ್ಟಾರ್​ ನಟನ ಜೀವನ ಕೂಡ ಒಂದು ಜ್ವಲಂತ ನಿದರ್ಶನ.

ತಮಿಳಿನ ಸ್ಟಾರ್​ ಹೀರೋ

ಇಲ್ಲೊಬ್ಬ ಸ್ಟಾರ್​ ನಟ ತಮ್ಮ ಆರಂಭದ ದಿನಗಳಲ್ಲಿ ನೋಡಿದ ಕಷ್ಟದ ದಿನಗಳನ್ನು ಅವರ ಸ್ನೇಹಿತರೊಬ್ಬರು ನೇರವಾಗಿ ಕಂಡಿದ್ದು, ಅದನ್ನು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಯಾರು ಆ ಸೂಪರ್​ಸ್ಟಾರ್? ಇವರು ಯಾವ ಚಿತ್ರರಂಗದವರು? ಈ ಘಟನೆಗಳನ್ನು ಮುಕ್ತವಾಗಿ ತಿಳಿಸಿದ ಅವರ ಸ್ನೇಹಿತರು ಯಾರು? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.
ತಮಿಳು ನಟ ವಿಶಾಲ್​, ತಮ್ಮ ಆಪ್ತ ಸ್ನೇಹಿತರಾದ ಕಾಲಿವುಡ್​​ನ ಸ್ಟಾರ್​ ದಳಪತಿ ವಿಜಯ್. ಇಂದಿನ ತಮಿಳುನಾಡಿನ ಮುಖ್ಯಮಂತ್ರಿ.​ ವಿಜಯ್​ ಅವರ ಕಷ್ಟದ ದಿನಗಳು ಹೇಗಿತ್ತು ಎಂಬುದನ್ನು ಈ ಹಿಂದಿನ ಸಂದರ್ಶನವೊಂದರಲ್ಲಿ ವಿಶಾಲ್​ ಮೆಲುಕು ಹಾಕಿದ್ದರು. “ನಾನು ವಿಜಯ್​ ಅವರನ್ನು ಕಾಲೇಜು ದಿನಗಳಿಂದಲೂ ನೋಡಿದ್ದೇನೆ. ಯಾಕಂದ್ರೆ, ಕಾಲೇಜಿನಲ್ಲಿ ವಿಜಯ್​ ನನ್ನ ಸಹೋದರನ ಸೀನಿಯರ್​ ಆಗಿದ್ದರು. ಹಾಗಾಗಿ ಅಂದಿನಿಂದಲೂ ಅವರ ಜೀವನದ ಗ್ರಾಫ್​ ಹೇಗಿತ್ತು ಎಂಬುದನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ” ಎಂದರು.

ಅವಮಾನ, ಸನ್ಮಾನ, ಬಹುಮಾನ

“ವಿಜಯ್​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದ ದಿನಗಳಲ್ಲಿ ಒಂದು ಪ್ರತ್ಯೇಕ ಮ್ಯಾಗ್​ಜೀನ್​ ಅವರ ಬಗ್ಗೆ ಕೆಟ್ಟದಾಗಿ ಬರೆದಿತ್ತು. ಇವನ ಮುಖ ನೋಡಲು ಚಿತ್ರಮಂದಿರಕ್ಕೆ ಹಣ ಕೊಟ್ಟು ಹೋಗಬೇಕಾ? ಎಂದು ವ್ಯಂಗ್ಯವಾಡಿತ್ತು. ಆದ್ರೆ, ಇದಕ್ಕೆ ತಲೆಕಡಿಸಿಕೊಳ್ಳದ ವಿಜಯ್​, ತನ್ನ ಕೆಲಸಗಳನ್ನು ಮುಂದುವರೆಸಿ, ಹಲವಾರು ಸಿನಿಮಾಗಳನ್ನು ಮಾಡಿದರು. ಸಿನಿಮಾಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಯಶಸ್ಸು ನೋಡಿದ ಮೇಲೆ, ಅದೇ ಮ್ಯಾಗ್​ಜೀನ್​ನವರು ವಿಜಯ್​ ಬಗ್ಗೆ ಪಾಸಿಟಿವ್ ಆಗಿ​ ಬರೆದರು. ಇಷ್ಟು ವರ್ಷಗಳಿಂದ ನೋಡಿರುವಂತೆ ಅವರು ಏಣಿಯನ್ನು ಹಂತ ಹಂತವಾಗಿ ಹತ್ತಿಕೊಂಡು ಮತ್ತಷ್ಟು ಎತ್ತರಕ್ಕೆ ಬಂದಿದ್ದಾರೆ. ಇದು ಅಷ್ಟು ಸುಲಭದ ಮಾತಲ್ಲ ಎಂದು ವಿಶಾಲ್​ ತಮ್ಮ ಗೆಳಯ ವಿಜಯ್ ಬಗ್ಗೆ ಗುಣಗಾನ ಮಾಡಿದ್ದು ವಿಶೇಷ.

ತಮಿಳುನಾಡಿನ ಸಿಎಂ, ಅಭಿಮಾನಿಗಳ 'ಜನನಾಯಗನ್​'

ತಮಿಳು ಚಿತ್ರರಂಗದಲ್ಲಿ ದಳಪತಿ ಆಗಿ ದಶಕಗಳ ಕಾಲ ಮೆರೆದ ವಿಜಯ್​, ತಮ್ಮ ಸಿನಿ ಪಯಣಕ್ಕೆ ಕೊನೆ ಸಿನಿಮಾ 'ಜನನಾಯಗನ್​' ಮೂಲಕ ಗುಡ್​ಬೈ ಹೇಳಿದ್ದಾರೆ. ಈ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮದೇ ಟಿವಿಕೆ ಪಕ್ಷದಿಂದ ಸ್ಪರ್ಧಿಸಿ, ದಾಖಲೆಯ ಗೆಲುವು ಸಾಧಿಸುವ ಮುಖೇನ ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ವಿಜಯ್​ ಅಧಿಕಾರದ ಚುಕ್ಕಾಣಿ ಹಿಡಿದಿದ್ದೇ ತಡ ತಮಿಳುನಾಡಿನಲ್ಲಿ ಹಲವು ಮಹತ್ವದ ಬದಲಾವಣೆ ಮತ್ತು ಬೆಳವಣಿಗೆಗಳು ಶುರುವಾಗಿವೆ,(ಏಜೆನ್ಸೀಸ್).