ಸಿನಿವಾಣಿ

ಧನುಷ್​ ನಟಿಸಲಿರುವ 'ತೇರೆ ಇಷ್ಕ್ ಮೇ​​' ಚಿತ್ರಕ್ಕೆ ಈ ಟಾಪ್​ ನಟಿಯೇ ಹೀರೋಯಿನ್!

ತಮಿಳುನಾಡು: ಬಹುಭಾಷಾ ನಟ, ಕಾಲಿವುಡ್​ ಸ್ಟಾರ್ ಧನುಷ್ ನಟಿಸಲಿರುವ ಮುಂದಿನ ಹಿಂದಿ ಭಾಷೆಯ ಚಿತ್ರ 'ತೇರೆ ಇಷ್ಕ್ ಮೇ' ಚಿತ್ರದ ಬಗ್ಗೆ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದ್ದು, ನಟನಿಗೆ ನಾಯಕಿಯಾಗಿ ಬಾಲಿವುಡ್​ ಚೆಲುವೆಯೊಬ್ಬರು ಕಾಣಿಸಿಕೊಳ್ಳಲ್ಲಿದ್ದಾರೆ ಎಂಬ ವದಂತಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಈ ಹಿಂದೆಯೇ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದ ಧನುಷ್​, ಚಿತ್ರ ಹಿಂದಿ ಭಾಷೆಯಲ್ಲಿ ಮೂಡಿಬರಲಿದೆ ಎಂದು ಹೇಳಿದ್ದರು. ಮನರಂಜನಾ ಚಿತ್ರಗಳಿಗೆ ಹೆಸರಾದ ಆನಂದ್ ಎಲ್.ರೈ ತೇರೆ ಇಷ್ಕ್ ಮೇ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಇತ್ತೀಚಿನ ವದಂತಿಗಳ ಪ್ರಕಾರ, ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್​ನ ಹಾಟ್ ಬ್ಯೂಟಿ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.

ಈ ಚಿತ್ರಕ್ಕೆ ಕಿಯಾರಾ ಅಡ್ವಾಣಿ ಕೂಡ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಲಾಗಿದ್ದು, ಸದ್ಯ ಈ ಕುರಿತು ಚಿತ್ರತಂಡ ಮತ್ತು ನಟಿ ಅಧಿಕೃತವಾಗಿ ಘೋಷಿಸುವವರೆಗೂ ಕಾಯಬೇಕಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಕೆಲಸಗಳನ್ನು ಹಿಮಾಂಶು ಶರ್ಮಾ ಮತ್ತು ನೀರಜ್ ಯಾದವ್ ಮಾಡಿದ್ದಾರೆ. ಸಿನಿಮಾಗೆ ಸಂಗೀತ ದಿಗ್ಗಜ ಎ.ಆರ್. ರೆಹಮಾನ್ ಅವರು ಮ್ಯೂಸಿಕ್​ ಕಂಪೋಸ್​ ಮಾಡಲಿದ್ದಾರೆ,(ಏಜೆನ್ಸೀಸ್).