ಸಿನಿವಾಣಿ

50 ಸೆಕೆಂಡ್​ ಜಾಹೀರಾತಿಗೆ 5 ಕೋಟಿ, ಖಾಸಗಿ ಜೆಟ್​, 100 ಕೋಟಿಯ ಫ್ಲ್ಯಾಟ್ಸ್​ ಹೊಂದಿದ್ದಾರೆ ಈ ನಟಿ!

ಚೆನ್ನೈ: ಕೋಟಿ ಸಂಭಾವನೆ ಪಡೆಯುವ ಅನೇಕ ನಾಯಕಿಯರಿದ್ದಾರೆ. ಅವರಲ್ಲಿ ಲೇಡಿ ಸೂಪರ್​ಸ್ಟಾರ್​ ನಯನತಾರ ಕೂಡ ಒಬ್ಬರು. ಚಿತ್ರರಂದಲ್ಲಿ ಶ್ರೀಮಂತ ನಟಿಯರಲ್ಲಿ ನಯನಾತಾರ ಹೆಸರು ಮುಂಚೂಣಿಯಲ್ಲಿದೆ.

ದಕ್ಷಿಣ ಭಾರತದ ಖ್ಯಾತ ನಟಿಯಾಗಿರುವ ಇತ್ತೀಚೆಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರವು ಭಾರೀ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ಅಂದಾಜಿನ ಪ್ರಕಾರ, ಚಿತ್ರವು 1000 ಕೋಟಿ ಕಲೆಕ್ಷನ್ ಮಾಡಿದೆ.

ಜವಾನ್ ಸಿನಿಮಾ ಹಿಟ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಯನತಾರಾ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ. ನಯನತಾರಾ ಅವರ ನಿವ್ವಳ ಮೌಲ್ಯ ಮತ್ತು ಚಿತ್ರಕ್ಕಾಗಿ ಅವರ ಸಂಭಾವನೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಭಿಮಾನಿಗಳು ಈಗ ಕುತೂಹಲ ಹೊಂದಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಕೆಲವರು ಮಾತ್ರ ತಮ್ಮದೇ ಆದ ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ. ಅವರಲ್ಲಿ ನಯನತಾರಾ ಕೂಡ ಒಬ್ಬರು.

50 ಸೆಕೆಂಡ್‌ಗಳ ಜಾಹೀರಾತಿಗೆ ನಯನತಾರಾ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ದೃಢೀಕರಿಸದ ವರದಿಗಳು ತಿಳಿಸಿವೆ. ಕೆಲವು ಜಾಹೀರಾತುಗಳಿಗೆ 4ರಿಂದ 7 ಕೋಟಿ ರೂಪಾಯಿ ಪಡೆಯುತ್ತಾರಂತೆ. ನಯನತಾರಾ ಅವರಿಗೆ ನಾಲ್ಕು ಐಷಾರಾಮಿ ಮನೆಗಳಿವೆ. ಚೆನ್ನೈನಲ್ಲಿ ತನ್ನ ಪತಿ ವಿಘ್ನೇಶ್​ ಶಿವನ್​ ಅವರೊಂದಿಗೆ 100 ಕೋಟಿ ರೂ. ಮೌಲ್ಯದ 4 ಬಿಎಚ್‌ಕೆ ಫ್ಲ್ಯಾಟ್‌ನಲ್ಲಿ ತಂಗಿದ್ದಾರೆ. ಈ ಫ್ಲ್ಯಾಟ್ ಖಾಸಗಿ ಸಿನಿಮಾ ಹಾಲ್, ಈಜುಕೊಳ ಮತ್ತು ಜಿಮ್ ಅನ್ನು ಹೊಂದಿದೆ.

ಇದಿಷ್ಟೇ ಅಲ್ಲದೆ, ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ತಲಾ 30 ಕೋಟಿ ರೂಪಾಯಿ ಮೌಲ್ಯದ ಎರಡು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಹೊಸ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.

ನಯನಾತಾರಾ ಅವರಿಗೆ ಐಷಾರಾಮಿ ಕಾರುಗಳೆಂದರೆ ತುಂಬಾ ಇಷ್ಟ. ಆಕೆಯ ಗ್ಯಾರೇಜ್‌ನಲ್ಲಿ ಹಲವು ಐಷಾರಾಮಿ ಕಾರುಗಳಿವೆ. BMW 7 ಸರಣಿ, ಮರ್ಸಿಡಿಸ್ GLS350D ಮತ್ತು BMW 5 ಸರಣಿ. ಇತ್ತೀಚಿನ ವರದಿಯ ಪ್ರಕಾರ ನಯನತಾರಾ 200 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಅಲ್ಲದೆ, ಹಲವಾರು ವ್ಯಾಪಾರ ಉದ್ಯಮಗಳಲ್ಲಿ ಪಾಲನ್ನು ಹೊಂದಿದ್ದಾರೆ. ಅವರು ತಮ್ಮ ಪತಿ ವಿಘ್ನೇಶ್ ಅವರೊಂದಿಗೆ ರೌಡಿ ಪಿಕ್ಚರ್ಸ್ ಬ್ಯಾನರ್‌ನ ನಿರ್ಮಾಣ ಸಂಸ್ಥೆಯ ಭಾಗವಾಗಿದ್ದಾರೆ. (ಏಜೆನ್ಸೀಸ್​)