ಅದು ನಾನಲ್ಲ...ಇಲ್ಲಸಲ್ಲದ ವದಂತಿಗಳನ್ನು ಹರಡುತ್ತಿರುವ ಕಿಡಿಗೇಡಿಗಳಿಗೆ ಖಡಕ್​ ವಾರ್ನಿಂಗ್​ ನೀಡಿದ ಭಾವನಾ! Actress Bhavana  
ಸಿನಿವಾಣಿ

ಅದು ನಾನಲ್ಲ...ಇಲ್ಲಸಲ್ಲದ ವದಂತಿಗಳನ್ನು ಹರಡುತ್ತಿರುವ ಕಿಡಿಗೇಡಿಗಳಿಗೆ ಖಡಕ್​ ವಾರ್ನಿಂಗ್​ ನೀಡಿದ ಭಾವನಾ! Actress Bhavana

ಪ್ರಮುಖ ಮುಖ್ಯಾಂಶಗಳು

  • ಫೇಸ್‌ಬುಕ್‌ನಲ್ಲಿ ತನ್ನ ಹೆಸರಿನ ನಕಲಿ ಖಾತೆಗಳ ಹಾವಳಿ ಕಂಡು ಅಭಿಮಾನಿಗಳಿಗೆ ಗಂಭೀರ ಎಚ್ಚರಿಕೆ ನೀಡಿದ ನಟಿ ಭಾವನಾ
  • ನನಗೆ ಯಾವುದೇ ಫೇಸ್‌ಬುಕ್ ಖಾತೆ ಇಲ್ಲ ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ ನಟಿ ಭಾವನಾ ಮೆನನ್
  • ನನ್ನ ಹೆಸರಿನ ನಕಲಿ ಪ್ರೊಫೈಲ್‌ಗಳನ್ನು ನಂಬಬೇಡಿ ಎಂದು ಸೋಶಿಯಲ್ ಮೀಡಿಯಾ ವಂಚಕರಿಗೆ ಬ್ರೇಕ್ ಹಾಕಿದ ಸ್ಟಾರ್ ನಟಿ
  • ಸಾಲು ಸಾಲು ನಕಲಿ ಫ್ಯಾನ್ ಪೇಜ್‌ಗಳ ಕಾಟಕ್ಕೆ ಬೇಸತ್ತು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಐಡಿ ಬಹಿರಂಗಪಡಿಸಿದ ಭಾವನಾ
Actress Bhavana : ತಮ್ಮ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಪೇಜ್‌ಗಳ ಬಗ್ಗೆ ಮಲಯಾಳಂ ಹಾಗೂ ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಭಾವನಾ ಮೆನನ್ ಅವರು ತಮ್ಮ ಅಭಿಮಾನಿಗಳಿಗೆ ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಅಭಿಮಾನಿಗಳನ್ನು ದಾರಿ ತಪ್ಪಿಸುವ ಜಾಲ ಸಕ್ರಿಯವಾಗಿದ್ದು, ಈಗ ಭಾವನಾ ಅವರೂ ಸಹ ಇದರ ಬಲಿಪಶುವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವತಃ ನಟಿಯೇ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿರುವ ನಟಿ ಭಾವನಾ, "ನನಗೆ ಯಾವುದೇ ಅಧಿಕೃತ ಫೇಸ್‌ಬುಕ್ ಖಾತೆ ಇಲ್ಲ. ನಾನು ಬಳಸುವ ಏಕೈಕ ಸಾಮಾಜಿಕ ಜಾಲತಾಣವೆಂದರೆ ಅದು ಇನ್‌ಸ್ಟಾಗ್ರಾಮ್ ಮಾತ್ರ. ನನ್ನ ಅಧಿಕೃತ ಐಡಿ @bhavzmenon ಆಗಿದೆ. ಇದನ್ನು ಹೊರತುಪಡಿಸಿ ನನ್ನ ಹೆಸರಿನಲ್ಲಿ ಬೇರೆ ಯಾವುದೇ ಪ್ರೊಫೈಲ್‌ಗಳು ಅಥವಾ ಪೇಜ್‌ಗಳು ಕಂಡುಬಂದಲ್ಲಿ, ಅವುಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ. ದಯವಿಟ್ಟು ಯಾರು ಅದನ್ನು ನಂಬಬೇಡಿ" ಎಂದು ಬರೆದುಕೊಂಡು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ನಟಿ ಭಾವನಾ ಹೆಸರಿನಲ್ಲಿ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಸಾಲು ಸಾಲು ಫ್ಯಾನ್ ಪೇಜ್‌ಗಳು ಹಾಗೂ ಪ್ರೊಫೈಲ್‌ಗಳು ಸೃಷ್ಟಿಯಾಗಿ ಭಾರಿ ಸದ್ದು ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಟಿ ಈ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಸಕ್ರಿಯರಾಗಿರುವ ಭಾವನಾ, ತಮ್ಮ ದಿನನಿತ್ಯದ ಸುಂದರ ಫೋಟೋಗಳು, ವಿಡಿಯೋಗಳು ಹಾಗೂ ವೈಯಕ್ತಿಕ ಅಪ್‌ಡೇಟ್‌ಗಳನ್ನು ನಿರಂತರವಾಗಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಹೀಗಾಗಿ ಅಭಿಮಾನಿಗಳು ಕೇವಲ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ಮಾತ್ರ ಫಾಲೋ ಮಾಡಬೇಕು ಎಂದು ವಿನಂತಿಸಿದ್ದಾರೆ, (ಏಜೆನ್ಸೀಸ್​).