ಚೆನ್ನೈ: ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗು ಚಿತ್ರರಂಗದಿಂದ ಹಲವಾರು ಸಿನಿಮಾಗಳು ಕಳೆದ ತಿಂಗಳಲ್ಲಿ ರಿಲೀಸ್ ಆಗಿದ್ದು, ಸಾಕಷ್ಟು ಬಹುನಿರೀಕ್ಷಿತ ಚಿತ್ರಗಳ ಪೈಕಿ ಕೆಲವೇ ಕೆಲವು ಮಾತ್ರ ಸೂಪರ್ಹಿಟ್, ಬ್ಲಾಕ್‌ಬಸ್ಟರ್ ಆಗಿ ಸದ್ದು ಮಾಡಿವೆ. ಈ ಚಿತ್ರಗಳ ಗೆಲುವಿನಿಂದ ನಿರ್ಮಾಪಕರ ಜೇಬು ತುಂಬಿದರೆ, ಹಲವರಿಗೆ ಜನಪ್ರಿಯತೆ ಹೆಚ್ಚಿದೆ. ಇನ್ನೂ ಕೆಲವರಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಆ ಸಾಲಿನಲ್ಲಿ ದಕ್ಷಿಣ ಭಾರತದ ಕೆಲವು ನಟಿಮಣಿಯರು ಮುಂಚೂಣಿಯಲ್ಲಿದ್ದಾರೆ.
'ಡ್ರ್ಯಾಗನ್' ಬ್ಯೂಟಿ
ಪ್ರದೀಪ್ ರಂಗನಾಥನ್ ಅಭಿನಯದ ತಮಿಳಿನ 'ಡ್ರ್ಯಾಗನ್' ಚಿತ್ರ ಬ್ಲಾಕ್‌ಬಸ್ಟರ್ ಆದ ಬೆನ್ನಲ್ಲೇ ನಟಿ ಕಾಯದ್ ಲೋಹರ್ ಅನೇಕ ಯುವಜನರ ಹೃದಯ ಗೆದ್ದರು. ಈ ಸಿನಿಮಾಗೂ ಮುಂಚೆ ನಿರ್ಮಾಪಕರು ಕಾಯದ್ ಅವರ ಬ್ಯೂಟಿ ಮತ್ತು ಪ್ರತಿಭೆಯ ಬಗ್ಗೆ ಅಷ್ಟೊಂದು ಗಮನ ಹರಿಸಿರಲಿಲ್ಲ. ಆದರೆ, ಡ್ರ್ಯಾಗನ್ ಹಿಟ್ ಬಳಿಕ ಸಾಕಷ್ಟು ಆಫರ್ಗಳೊಂದಿಗೆ ನಟಿಯ ಸಮಯ ಕೇಳುತ್ತಿದ್ದಾರೆ.
ಪ್ರಸ್ತುತ, ಟಾಲಿವುಡ್, ಕಾಲಿವುಡ್ ಮತ್ತು ಮಾಲಿವುಡ್ನ ಕೆಲವು ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಕಾಯದು ಕೈಯಲ್ಲಿ ಈಗ ಏಳು ಚಿತ್ರಗಳಿದ್ದು, ಬಿಗ್ ಬ್ಯಾನರ್ನ 'ಪ್ಯಾರಡೈಸ್' ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ತೆಲುಗು ರೀ-ಎಂಟ್ರಿ 'ಫಂಕಿ'ಯಲ್ಲಿ ಯಶಸ್ಸು ಡ್ರ್ಯಾಗನ್ ಬ್ಯೂಟಿ, ಈಗ ಹಲವು ಅವಕಾಶಗಳನ್ನು ಪಡೆಯುತ್ತಿರುವುದು ಗಮನಾರ್ಹ.
'ಡ್ಯೂಡ್' ಬೆಡಗಿ
ಕಳೆದ ವರ್ಷ ಪ್ರದೀಪ್ ರಂಗನಾಥನ್ ಅಭಿನಯದ 'ಡ್ಯೂಡ್'ನಲ್ಲಿ ಕಾಣಿಸಿಕೊಂಡ ಮಮಿತಾ ಬೈಜು, ತಮ್ಮ ಸಿಂಪಲ್ ಲುಕ್ನಿಂದ ಹೆಚ್ಚಾಗಿ ಲವ್ ಕಾನ್ಸೆಪ್ಟ್ ಚಿತ್ರಗಳಲ್ಲಿ ಅವಕಾಶಗಳನ್ನು ಪಡೆಯುತ್ತಿದ್ದಾರೆ. ತೆಲುಗು ಅಥವಾ ಇತರೆ ಚಿತ್ರರಂಗಕ್ಕಿಂತ ತಮಿಳು ನಿರ್ಮಾಪಕರು ನಟಿಗೆ ರೆಡ್ ಕಾರ್ಪೆಟ್ ನೀಡುತ್ತಿದ್ದಾರೆ. ತಮಿಳು ನಟ ಸೂರ್ಯ ಸೇರಿದಂತೆ ಹಲವು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ರಿಲೀಸ್ಗೆ ಎದುರುನೋಡುತ್ತಿರುವ ದಳಪತಿ ವಿಜಯ ನಟನೆಯ 'ಜನ ನಾಯಗನ್'ನಲ್ಲಿ ಕೂಡ ಮಮತಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಕಾಂತಾರ' ಕನಕಾವತಿ
ಇನ್ನು ಕನ್ನಡದ ಬೆಡಗಿ, ಕಾಂತಾರ ಕನಕಾವತಿ ರುಕ್ಮಿಣಿ ವಸಂತ್, ಸ್ಯಾಂಡಲ್ವುಡ್ನಿಂದ ಟಾಲಿವುಡ್ ಮತ್ತು ಕಾಲಿವುಡ್ಗೂ ಹೆಜ್ಜೆ ಇಟ್ಟಿರುವುದು ಗಮನಾರ್ಹ. ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬ್ರ್ಯಾಂಡ್ ಆಗುತ್ತಿರುವ ಈ ಬ್ಯೂಟಿಗೆ ಟಾಲಿವುಡ್, ಕಾಲಿವುಡ್ ಮಾತ್ರವಲ್ಲದೇ ಬಾಲಿವುಡ್ನಲ್ಲೂ ಬೇಡಿಕೆ ಹೆಚ್ಚಿದೆ. ಪ್ರಸ್ತುತ, ಯಶ್ ಅವರ 'ಟಾಕ್ಸಿಕ್' ಮತ್ತು ಎನ್ಟಿಆರ್ 'ಡ್ರ್ಯಾಗನ್'ನಂತಹ ಬಿಗ್ ಬಜೆಟ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ, ಈ ನಟಿಮಣಿಯರ ಸ್ಟಾರ್ಡಮ್, ಅವಕಾಶಗಳು ಮತ್ತು ಅಭಿಮಾನಿಗಳು ಒಂದೊಂದು ಸಿನಿಮಾ ಕಳೆದಂತೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ,(ಏಜೆನ್ಸೀಸ್). South heroines