ಎಕ್ಸ್​ನಿಂದ ಸಂಗ್ರಹಿಸಿದ ಸಿನಿಮಾ 
ಸಿನಿವಾಣಿ

'The Paradise' ಎಕ್ಸ್​ ರಿವ್ಯೂ; ಕಳಪೆ ಬರವಣಿಗೆ, ನಾನಿ ವೃತ್ತಿಜೀವನದ ಅತ್ಯಂತ ಕೆಟ್ಟ ಸಿನಿಮಾ ಎಂದ ನೆಟ್ಟಿಗರು

  • ದ ಪ್ಯಾರಡೇಸ್​ ಸಿನಿಮಾ ಕಳಪೆ ಎಂದ ಪ್ರೇಕ್ಷಕರು

  • ಜೆರ್ಸಿಯಂತಹ ಸಿನಿಮಾ ಆಯ್ಕೆ ಮಾಡಿ ದಯವಿಟ್ಟು ಎಂದು ನಾನಿಗೆ ಮನವಿ

  • ನಾನಿಯ ವೃತ್ತಿಜೀವನದ ಅತ್ಯಂತ ಕಳಪೆ ಸಿನಿಮಾ ಎಂದು ಕೆಲವರಿಂದ ಟೀಕೆ, ಇನ್ನು ಕೆಲವರಿಂದ ಬೆಂಬಲ

ಶ್ರೀ ಕಾಂತ್​ ಒಡೆಲಾ ನಿರ್ದೇಶನದ, ರಿಯಲ್​ ಸ್ಟಾರ್​ ನಾನಿ ಹಾಗೂ ಕಯಾದು ಲೋಹರ್​ ಮುಖ್ಯ ಭೂಮಿಕೆಯ ಪ್ಯಾನ್​​ ಇಂಡಿಯಾ ಆಕ್ಷನ್​ ಡ್ರಾಮಾ ಸಿನಿಮಾ ದ ಪ್ಯಾರಡೇಸ್​​ ಸೆ.24ರಿಂದ ದೇಶದಾದ್ಯಂತ ರಿಲೀಸ್ ಆಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣವಾದ 'ಎಕ್ಸ್' ನಲ್ಲಿ ಪ್ರೇಕ್ಷಕರಿಂದ ತೀವ್ರ ನೆಗೆಟಿವ್ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ನಾನಿಗೆ ಒಳ್ಳೆ ಸ್ಕ್ರಿಪ್ಟ್​ ಸೆಲೆಕ್ಟ್ ಮಾಡಲು ತಿಳಿಸಿ, ಅವರ ವೃತ್ತಿ ಜೀವನದಲ್ಲಿ ಇದೊಂದು ಕೆಟ್ಟ ಸಿನಿಮಾ ಎನ್ನುವ ಬೇಡಿಕೆಗಳು ಕೇಳಿಬರುತ್ತಿದೆ.

ಟಾಕ್ಸಿಕ್​ ಸಿನಿಮಾವು ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಆದರೆ, ಬೆಳ್ಳಿ ತೆರೆ ಮೇಲೆ ಹಾಗೂ ಒಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಕೊಂಡಿಲ್ಲ. ದೃಶ್ಯಗಳು, ಆಕ್ಷನ್​​ ಚಿತ್ರೀಕರಂ, ನಯನತಾರಾ ಹಾಗೂ ಯಶ್​ ನಟನೆ ಚೆನ್ನಾಗಿದ್ದರೂ ಸಹ, ಸಿನಿಮಾದ ಕತೆ ಕಟ್ಟಿಕೊಡುವಲ್ಲಿ ನಿರ್ದೇಶಕಿ ಗೀತಾ ಮೋಹನ್​ ದಾಸ್ ಅವರು ವಿಫಲರಾಗಿದ್ದಾರೆ ಎನ್ನುವ ಅಭಿಪ್ರಾಯ ಕೇಳಿಬಂದಿತ್ತು. ಸದ್ಯ ದ ಪ್ಯಾರಡೇಸ್​ಗೂ ಇದೇ ಪ್ರತಿಕ್ರಿಯೆ ಕೇಳಿಬರುತ್ತಿದೆ. ಕೆಲ ಪ್ರೇಕ್ಷಕರು 2-3 ರೇಟಿಂಗ್​ ನೀಡುತ್ತಿದ್ದಾರೆ.

ದ ಪ್ಯಾರಡೈಸ್ ಸಿನಿಮಾ ಬಗ್ಗೆ

ಸ್ವಾತಂತ್ರ್ಯ ಸಿಕ್ಕು ಹಲವು ವರ್ಷ ಕಳೆದರೂ ಸಹ ಸವರಿ ಬುಡಕಟ್ಟು ಜನಾಂಗವು ತಮ್ಮ ಅಸ್ಮಿತೆ ಉಳಿಸಿಕೊಳ್ಳಲು ಹೋರಾಡುತ್ತದೆ. ಇಲ್ಲಿನ ಬುಡಕಟ್ಟು ಜನಾಂಗದವರು ಮಾಲೀಕನೊಬ್ಬನ ಆಸರೆಯಲ್ಲಿ ತಂಗಿರುತ್ತಾರೆ. ಬುಡಕಟ್ಟು ಜನರ ಮೈ ವಾಸನೆ ಸವರ್ಣೀಯರಿಗೆ ಹರಡಬಾರದೆಂದು ನಿತ್ಯ ಊದಿನ ಬತ್ತಿ ಹಿಡಿದು ಹೋರಾಡುವ ನರಕವನ್ನು ಎದುರಿಸುತ್ತಿರುತ್ತಾರೆ. ಈ ಮಧ್ಯೆ ಎಂಟ್ರಿಯಾಗುವುದೇ ಕತಾ ನಾಯಕ ನಾನಿ. ಆತ ಬಂದ ನಂತರ ಏನೆಲ್ಲ ಬದಲಾವಣೆ ತರುತ್ತಾನೆ. ಬುಡಕಟ್ಟು ಜನಾಂಗದ ಅಸ್ಮಿತೆಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದು ಸಿನಿಮಾದಲ್ಲಿ ಇದೆ. ಇಲ್ಲಿ ಹಿಂಸಾಚಾರವನ್ನು ಹೆಚ್ಚಾಗಿ ತೋರಿಸಲಾಗಿದೆ.

ದ ಪ್ಯಾರಡೈಸ್ ಗಳಿಕೆ

ನಾನಿ ನಟನೆಯ ಪ್ಯಾರಡೇಸ್​ ಸಿನಿಮಾವು ಅಡ್ವಾನ್ಸ್​ ಬುಕ್ಕಿಂಗ್ ಮೂಲಕ 37 ಕೋಟಿಯನ್ನು ಗಳಿಸಿದೆ. ಉತ್ತರ ಅಮೆರಿಕಾದಲ್ಲಿ 10 ಕೋಟಿಯನ್ನು ಬಾಚಿಕೊಂಡಿದೆ. ಇನ್ನು ಒಟಿಟಿ ಪ್ರಸಾರ ಹಕ್ಕನ್ನು ನೆಟ್​ಫ್ಲಿಕ್ಸ್​ ಪಡೆದುಕೊಂಡಿದ್ದು, 50 ಕೋಟಿಗೆ ಸಿನಿಮಾ ದಕ್ಕಿಸಿಕೊಂಡಿದೆ. ಒಟ್ಟಾರೆಯಾಗಿ 200 ಕೋಟಿಯವರೆಗೂ ಪ್ರೀ ರಿಲೀಸ್​ ಕಲೆಕ್ಷನ್​ ಮಾಡಿಕೊಂಡಿದೆ ಈ ಸಿನಿಮಾ.

ಎಕ್ಸ್​ನಲ್ಲಿ ಪ್ರೇಕ್ಷಕರು ಹೇಳಿದ್ದೇನು?

ಅಯ್ಯಪ್ಪನ್​ ಎಂಬುವವರು ಸಿನಿಮಾ ಬಗ್ಗೆ ರಿವ್ಯೂವ್​ ಕೊಟ್ಟಿದ್ದು, ಸಂಪೂರ್ಣವಾಗಿ ನಿರಾಶಾದಾಯಕವಾಗಿದೆ. ನಾನಿಯವರೇ ದಯವಿಟ್ಟು 'ಜೆರ್ಸಿ'ಯಂತಹ ಉತ್ತಮ ಕಥೆಗಳನ್ನು ಆಯ್ಕೆಮಾಡಿ. ನೀವು ನಿಮ್ಮ ಸ್ವಂತ ಸಾಮರ್ಥ್ಯವನ್ನು ವ್ಯರ್ಥ ಮಾಡುತ್ತಿದ್ದೀರಿ ಎಂದು ಬರೆದುಕೊಂಡಿದ್ದಾರೆ.

ವೆಂಕಿ ರಿವ್ಯೂಸ್ ಎಂಬ ಎಕ್ಸ್​ ಖಾತೆಯಿಂದ TheParadise ಸಿನಿಮಾಗೆ 1.75/5 ರೇಟಿಂಗ್​ ಕೊಟ್ಟಿದ್ದಾರೆ. ಇದೊಂದು ತಾಳ್ಮೆ-ಸಹನೆ ಬೇಡುವ ಸಿನಿಮಾ. ಕೃತಕವಾಗಿ ಮಾಸ್ ಎನಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಆರಂಭ ಆಸಕ್ತಿದಾಯಕವಾಗಿಎ. ಆದರೆ, ಮಧ್ಯಂತರ ಭಾಗ ಮಾತ್ರ ಮೊದಲ ಅರ್ಧದಲ್ಲಿ ಕೆಲಸ ಮಾಡುವ ಅಂಶಗಳಾಗಿವೆ.

ಕಳಪೆ ಬರವಣಿಗೆ

ಎರಡನೇ ಭಾಗದ ಬರವಣಿಗೆ ಅರ್ಥಹೀನವಾಗಿದೆ. ನಿರೂಪಣೆಯಲ್ಲಿ ಭಾವನಾತ್ಮಕವೇ ಇಲ್ಲ. ಕಳಪೆ ಎಡಿಟಿಂಗ್​, ಅನಿರೀಕ್ಷಿತ ಎಡಿಟಿಂಗ್​ ಪ್ರೇಕ್ಷಕರನ್ನು ಗೊಂದಲಕ್ಕೆ ದೂಡುತ್ತದೆ. ಅನಿರುದ್ಧ್ ಅವರ ಹಿನ್ನೆಲೆ ಸಂಗೀತ ದುರ್ಬಲವಾಗಿದೆ. ಕಳಪೆ ಸೌಂಡ್ ಮಿಕ್ಸಿಂಗ್ ಹೆವಿ ಸೌಂಡ್​ನಿಂದಾಗಿ ಸಂಭಾಷಣೆ ಅರ್ಥವಾಗೋದಿಲ್ಲ. ಒಡೆಲಾ ಅವರು ಬರವಣಿಗೆ ಮತ್ತು ನಿರ್ವಹಣೆಯಲ್ಲಿ ವಿಫಲಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಪ್ಲೀಸ್ ಇಂಥ ಸಿನಿಮಾ ಮಾಡ್ಬೇಡಿ

ಆಧಿಲ್​ ಎಂಬುವವರು ಟ್ವೀಟ್ ಮಾಡಿದ್ದು, ದ ಪ್ಯಾರಡೇಸ್ ಮೊದಲಿನಿಂದ ಕೊನೆಯವರೆಗೆ ಟೀಕೆಗೆ ಗುರಿಯಾಗುವಂತಹ ಸಿನಿಮಾ. ಸಂಪೂರ್ಣವಾಗಿ ಕಳಪೆಯಾಗಿದೆ. ಅಲ್ಲಲ್ಲಿ ಕೃತಕ ನಗು ತರಿಸುವ ದೃಶ್ಯಗಳಿದೆ ಎಂದು ಬರೆದುಕೊಂಡಿದ್ದಾರೆ.

ರಾಜಿ ಎಂಬುವವರು ಹೇಳಿದ್ದು ಹೀಗೆ, ಮೊದಲ 15 ನಿಮಿಷಗಳನ್ನು ಹೊರತುಪಡಿಸಿ, ಇಡೀ ಅರ್ಧಭಾಗವು ಸಂಪೂರ್ಣವಾಗಿ ಕಸದಂತಿತ್ತು. ನಂತರ ಎರಡನೇ ಅರ್ಧವು ಬಂದಾಗ, 'ಲೈಗರ್' ಎಷ್ಟು ಒಳ್ಳೆಯ ಸಿನಿಮಾ ಎನಿಸಿತು!ನಾನಿ ದಯವಿಟ್ಟು ನೀವು ಹಾಯ್​ ನಾನಾದಂತಹ ಭಾವನಾತ್ಮಕ ಸಿನಿಮಾಗಳನ್ನು ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ, (ಏಜೆನ್ಸೀಸ್​).