ಸಿನಿವಾಣಿ

Pushpa ದುರಂತದಿಂದ ಎಚ್ಚೆತ್ತ ನಾನಿ; ಫ್ಯಾನ್ಸ್ ಜೊತೆ 'The Paradise' ನೋಡಲು ಪೊಲೀಸ್ ಭದ್ರತೆಗೆ ಮನವಿ, ಸಿಎಂ ಹೀಗಂದ್ರು

  • ದ ಪ್ಯಾರಡೈಸ್​ ಸಿನಿಮಾ ನೋಡಲು ರೇವಂತ್​ ರೆಡ್ಡಿಗೆ ಭದ್ರತೆ ಬಗ್ಗೆ ಮನವಿ ಮಾಡಿದ ನಾನಿ

  • ಪುಷ್ಪಾ ಸಿನಿಮಾ ರಿಲೀಸ್​ ಆದ ವೇಳೆ ಸಂಭವಿಸಿದ್ದ ದುರಂತ ತಡೆಯಲು ಪ್ಲ್ಯಾನ್​

  • ಪೊಲೀಸ್​ ಠಾಣೆಗೆ ಅರ್ಜಿ ಸಲ್ಲಿಸಲು ತೆಲಂಗಾಣ ಸಿಎಂ ರೇವಂತ್​ ರೆಡ್ಡಿ ಸಲಹೆ

ಪುಷ್ಪಾ ದಿ ರೈಸ್ ಸಿನಿಮಾ ರಿಲೀಸ್​ ಆದ ವೇಳೆ ಉಂಟಾಗಿದ್ದ ಕಾಲ್ತುಳಿತ ಮತ್ತು ಆಸ್ತಿ-ಪಾಸ್ತಿ ನಾಶ ಪ್ರಕರಣವು ಮತ್ತೆ ಮರುಕಳಿಸದಂತೆ ತಡೆಯಲು ತೆಲಂಗಾಣ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಫ್ಯಾನ್ಸ್​ ಜೊತೆ 'ದ ಪ್ಯಾರಡೈಸ್' ಸಿನಿಮಾ ನೋಡಲು ಬಯಸಿದ ನಾನಿಗೆ ಅರ್ಜಿ ಸಲ್ಲಿಸಲು ಸಿಎಂ ರೇವಂತ್​ ರೆಡ್ಡಿ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ನ್ಯಾಚುರಲ್​ ಸ್ಟಾರ್​ ನಾನಿ ನಟನೆಯ ದ ಪ್ಯಾರಡೈಸ್​ ಸಿನಿಮಾವು ಇದೇ 24ರಂದು ರಿಲೀಸ್ ಆಗಲಿದೆ. ಈ ಹಿನ್ನೆಲೆ ಸಾಕಷ್ಟು ಬೆಳವಣಿಗೆ ಯಉಂಟಾಗುತ್ತಿದೆ. ಸಿನಿಮಾದಲ್ಲಿ ಸಾಕಷ್ಟು ಹಿಂಸಾತ್ಮಕ ದೃಶ್ಯ ಇರುವ ಕಾರಣ ಸೆನ್ಸಾರ್​ ಮಂಡಳಿ ಸಿನಿಮಾಕ್ಕೆ ಎ ಪ್ರಮಾಣ ಪತ್ರ ನೀಡಿತ್ತು.

ನಾನಿ ಹೇಳಿದ್ದೇನು?

'ದ ಪ್ಯಾರಡೈಸ್' ಸಿನಿಮಾ ಪ್ರೀಮಿಯರ್​ ಶೋ ನೋಡಲು ಫ್ಯಾನ್ಸ್​ ಜೊತೆ ಸಿನಿಮಾ ನೋಡಲು ಚಿತ್ರತಂಡ ಬಯಸಿದ್ದು, ಅವಕಾಶ ನೀಡುವಂತೆ ಸಿಎಂ ರೇವಂತ್​ ರೆಡ್ಡಿ ಹಾಗೂ ಸಚಿವ ಕೋಮತಿ ವೆಂಕಟ್ ರೆಡ್ಡಿ ಅವರನ್ನು ಟ್ಯಾಗ್​ ಮಾಡಿ ಬೇಡಿಕೆ ಇಟ್ಟಿದ್ದರು. ನಾವು ಜಾರಿಯಲ್ಲಿರುವ ಎಲ್ಲ ಪ್ರೋಟೋಕಾಲ್​ ಹಾಗೂ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.

ಸಿಎಂ ಹೇಳಿದ್ದಿಷ್ಟು

ಇದಕ್ಕೆ ರೇವಂತ್​ ರೆಡ್ಡಿ ಅವರು ಪ್ರತಿಕ್ರಿಯೆ ಕೊಟ್ಟಿದ್ದು, ಪ್ರೀತಿಯ ನಾನಿ ಸುರಕ್ಷತೆ ಬಗ್ಗೆ ನೀವು ತೋರಿಸಿರುವ ಗೌರವ ಮತ್ತು ನಿರ್ದೇಶಕ ಒಡೆಲಾ ಶ್ರೀಕಾಂತ್​ ಅವರ ನಿರ್ದೇಶನದ ಸಿನಿಮಾದ ಮೇಲೆ ನಿಮಗಿರುವ ಬದ್ಧತೆಯು ಅದ್ಭುತ. ಜನಸಂದಣಿ ತಡೆಯಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ದಯವಿಟ್ಟು ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗೆ ಅಧಿಕೃತ ಅರ್ಜಿಯನ್ನು ಸಲ್ಲಿಸಿ. ಪೊಲೀಸ್​ ತಂಡ ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಉತ್ತರಿಸಿದ್ದಾರೆ.

ಪುಷ್ಪಾ ಸಿನಿಮಾ ರಿಲೀಸ್ ವೇಳೆ ಕಾಲ್ತುಳಿತ

ನಟ ಅಲ್ಲು ಅರ್ಜುನ್​ ಮುಖ್ಯ ಭೂಮಿಕೆಯ ಪುಷ್ಟಪ ಸಿನಿಮಾ ರಿಲೀಸ್ ಆದ ವೇಳೆ ಹೈದರಾಬಾದ್‌ನಲ್ಲಿ ಕಾಲ್ತುಳಿತದ ಘಟನೆ ನಡೆದಿತ್ತು. 2024 ಡಿಸೆಂಬರ್ 4ರಂದು ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್‌ರೋಡ್ಸ್‌ನಲ್ಲಿರುವ ಸಂಧ್ಯಾ ಥಿಯೇಟರ್‌ ಆವರಣದಲ್ಲಿ ಚಿತ್ರದ ಪ್ರೀಮಿಯರ್ ಶೋ ಮುಗಿದ ನಂತರ ಥಿಯೇಟರ್​ಗೆ ಬಂದಿದ್ದ ನಟ ಅಲ್ಲು ಅರ್ಜುನ್​ ಅವರನ್ನು ಮಾತನಾಡಿಸಲು ಫ್ಯಾನ್ಸ್​ ಮುಗಿಬಿದ್ದ ಕಾರಣ ಕಾಲ್ತುಳಿತ ಸಂಭವಿಸಿತ್ತು. ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅವರ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು, (ಏಜೆನ್ಸೀಸ್).