ಸಿನಿವಾಣಿ

ಬಹು ನಿರೀಕ್ಷಿತ 'ದಿ ಫ್ಯಾಮಿಲಿ ಮ್ಯಾನ್' ಸೀಸನ್​-3 ಬಿಡುಗಡೆ ದಿನಾಂಕ ಫೈನಲ್!

ಮುಂಬೈ: ರಾಷ್ಟ್ರಪ್ರಶಸ್ತಿ ವಿಜೇತ ನಟ ಮನೋಜ್​ ಬಾಜಪೇಯಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ(ವೆಬ್​ ಸಿರೀಸ್​) 'ದಿ ಫ್ಯಾಮಿಲಿ ಮ್ಯಾನ್' ಸೀಸನ್​-3 ಬಿಡುಗಡೆ ದಿನಾಂಕವನ್ನು ಚಿತ್ರತಂಡ ಫೈನಲ್ ಮಾಡಿದೆ.

ಹೊಸ ಸೀಸನ್‌ನಲ್ಲಿ ಮನೋಜ್ ಬಾಜ್‌ಪೇಯಿ, ಜೈದೀಪ್ ಅಹ್ಲಾವತ್ ಮತ್ತು ನಿಮ್ರತ್ ಕೌರ್ ಜೊತೆಗೆ ಶರೀಬ್ ಹಶ್ಮಿ, ಪ್ರಿಯಾಮಣಿ,ಆಶ್ಲೇಷಾ ಠಾಕೂರ್, ವೇದಾಂತ್ ಸಿನ್ಹಾ, ಶ್ರೇಯಾ ಧನ್ವಂತರಿ ಮತ್ತು ಗುಲ್ ಪನಾಗ್ ಅಭಿನಯಿಸಿದ್ದಾರೆ.

ಚಿತ್ರದ ಮೂರನೇ ಸೀಸನ್ 2025ರ ನವೆಂಬರ್ 21 ರಂದು ಬಿಡುಗಡೆಯಾಗಲಿದೆ. ದಿ ಫ್ಯಾಮಿಲಿ ಮ್ಯಾನ್‌ ಎರಡು ಸೀಸನ್‌ ಹಿಟ್‌ ಲಿಸ್ಟ್‌ಗೆ ಸೇರಿದೆ. ಈ ಸಲ ಗೂಢಚಾರಿ ಪಾತ್ರದಾರಿ ಶ್ರೀಕಾಂತ್‌ ತಿವಾರಿಯಾಗಿ ಮನೋಜ್‌ ಬಾಜ್‌ಪಾಯಿ ಹೊಸ ಸವಾಲನ್ನು ಎದುರಿಸಲಿದ್ದಾರೆ.(ಏಜೆನ್ಸೀಸ್​)