ಸಿನಿವಾಣಿ

'ಮರ್ಫಿ' ಹುಡ್ಗಿ ರೋಶಿನಿ ಪ್ರಕಾಶ್​​

ತೆಲುಗಿನ ಸಪ್ತಗಿರಿ ಎಕ್ಸ್​ಪ್ರೆಸ್​ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ರೋಶಿನಿ ಪ್ರಕಾಶ್..ಮರ್ಫಿ ಸಿನಿಮಾ ಮೂಲಕ ಕನ್ನಡಿಗರಿಗೆ ಹೆಚ್ಚೆಚ್ಚು ಪರಿಚಿತರಾದರು. ಬಿಎಸ್​ ಪ್ರದೀಪ್​​ ವರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭು ಮುಂಡ್ಕೋರ್​​, ಇಳಾ ಸೇರಿದಂತೆ ಹಲವರು ನಟಿಸಿದ್ದರು. ಸದ್ಯ ರೋಶಿನಿ ಪ್ರಕಾಶ್​ ಅವರು ನಾಕುತಂತಿ ಸಿನಿಮಾ ಮೂಲಕ ಮತ್ತೆ ಬೆಳ್ಳಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಸಿನಿಮಾದ ಬಣ್ಣ ಹಾಡು ಹಾಗೂ 'ನೀರೆ ನೀರೆ ನಾರಿ' ಹಾಡು ಸಾಕಷ್ಟು ವೈರಲ್ ಆಗಿದೆ. ಡಿಸೆಂಬರ್ 18ರಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ವಿಜಯವಾಣಿ ಸುದ್ದಿ ಜಾಲ