ಹೈದರಾಬಾದ್: ಬಾಲಿವುಡ್ನಲ್ಲಿ 2013ರಲ್ಲಿ ತೆರೆಕಂಡ ‘ಮದ್ರಾಸ್ ಕೆಫೆ’ ಚಿತ್ರದೊಂದಿಗೆ ಸಿನಿಮಾ ಕೆರಿಯರ್ ಆರಂಭಿಸಿದ್ದ ರಾಶಿ ಖನ್ನಾ, ಅದಾದ ಮೇಲೆ ದಕ್ಷಿಣದ ಸಿನಿಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡರು. ಈಗಲೂ ತಮಿಳು ಮತ್ತು ತೆಲುಗಿನಲ್ಲಿ ರಾಶಿ ತುಂಬಾ ಬಿಜಿಯಾಗಿದ್ದಾರೆ. ಇದರ ನಡುವೆ ಹಿಂದಿಗೂ ಕಮ್ ಬ್ಯಾಕ್ ಮಾಡಿರುವ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.
ಸಿನಿಮಾ ಮಾತ್ರವಲ್ಲದೆ ರಾಶಿ ಖನ್ನಾ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿರುತ್ತಾರೆ. ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈಬಿಸಿಯೇರಿಸುತ್ತಾರೆ. ಹಾಟ್ ಅವತಾರದಲ್ಲಿ ರಾಶಿ ಎಂದೂ ಕೂಡ ಹಿಂದೆ ಬಿದ್ದಿಲ್ಲ. ಇದರ ನಡುವೆ ರಾಶಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟಿಯ ಬೋಲ್ಡ್ ಅವತಾರ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಡೆನಿಮ್ ಡ್ರೆಸ್ನಲ್ಲಿ ರಾಶಿ ಕಾಣಿಸಿಕೊಂಡಿದ್ದಾರೆ. ಉದ್ದದ ಡೆನಿಮ್ ಸ್ಕರ್ಟ್ ಮತ್ತು ಡೆನಿಮ್ ಜಾಕೆಟ್ ಧರಿಸಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಈ ವೇಳೆ ಜಾಕೆಟ್ ಬದಿಗೆ ಸರಿಸಿ ಎದೆ ಸೀಳು ಪ್ರದರ್ಶಿಸುವ ಮೂಲಕ ರಾಶಿ ಖನ್ನಾ, ಪಡ್ಡೆ ಹುಡುಗರ ಮೈ ಬಿಸಿಯೇರಿಸಿದ್ದಾರೆ.
artistrybuzz ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ 8 ಗಂಟೆ ಹಿಂದೆಯಷ್ಟೇ ವಿಡಿಯೋ ಪೋಸ್ಟ್ ಮಾಡಿದ್ದು, ಈವರೆಗೂ 1 ಲಕ್ಷದ 60 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. 9 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಕೆಲವರು ರಾಶಿ ಖನ್ನಾರ ಹಾಟ್ ಅವತಾರಕ್ಕೆ ಫಿದಾ ಆಗಿದ್ದರೆ, ಇನ್ನು ಕೆಲವರು ರಾಶಿ ತೊಡ್ಡ ಉಡುಗೆ ಭಿಕ್ಷುಕರ ಉಡುಗೆಯಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)