ಸಿನಿವಾಣಿ

ವೆಬ್​ಸಿರೀಸ್ ಕಡೆ ತಮನ್ನಾ ಗಮನ; ಭಾಟಿಯಾಗೆ ಸಿನಿಮಾ ಅವಕಾಶ ಕಡಿಮೆ ಆಯ್ತಾ?

Webdesk - Ravikanth

ಟಾಲಿವುಡ್ ನಟಿ ತಮನ್ನಾ ಭಾಟಿಯಾ, ಇತ್ತೀಚಿನ ಕೆಲ ದಿನಗಳಲ್ಲಿ ವೆಬ್ ಸಿರೀಸ್ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅದಕ್ಕೆ ಕಾರಣ ಸಿನಿಮಾಗಳ ಕೊರತೆ! ಸದ್ಯ ಅವರ ಕೈಯಲ್ಲಿರುವ ಸಿನಿಮಾ ಎಂದರೆ ಅದು ಕನ್ನಡಿಗ ನಾಗಶೇಖರ್ ನಿರ್ದೇಶನ ಮಾಡುತ್ತಿರುವ ‘ಗುರ್ತಂದಾ ಸೀತಾಕಲಂ’. ಆ ಸಿನಿಮಾ ಹೊರತುಪಡಿಸಿ ಬೇರಾವ ಚಿತ್ರಕ್ಕೆ ಸಹಿ ಮಾಡಿರುವ ಬಗ್ಗೆ ಸುದ್ದಿಯಾಗಿಲ್ಲ. ಹೀಗಿರುವಾಗಲೇ ವೆಬ್ ಸೀರಿಸ್ ನತ್ತ ಗಮನಹರಿಸಿದ್ದಾರೆ.

ಆಹಾ ಒಟಿಟಿಯಲ್ಲಿ ‘ಲೆವೆಂಥ್ ಅವರ್’ ಮತ್ತು ಡಿಸ್ನಿ ಹಾಟ್​ಸ್ಟಾರ್ ಪ್ಲಸ್​ನಲ್ಲಿ ‘ನವೆಂಬರ್ ಸ್ಟೋರಿ’ ಎಂಬ ಎರಡು ವೆಬ್ ಸರಣಿಗಳು ಪ್ರಸಾರವಾಗಿದ್ದವು. ಅವೆರಡರಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ತಮನ್ನಾ, ಇದೀಗ ಅದರ ಬೆನ್ನಲ್ಲೇ ಅಮೆಜಾನ್ ಪ್ರೖೆಂಗಾಗಿ ಹೊಸ ವೆಬ್ ಸರಣಿಗೆ ಸಹಿ ಹಾಕಿದ್ದಾರೆ. ಹಲವು ಭಾಷೆಗಳಲ್ಲಿ ಡಬ್ ಆಗಿ ಸ್ಟ್ರೀಮ್ ಆಗಲಿರುವ ಈ ಸರಣಿಗೆ ಅರುಣಿಮಾ ಶರ್ಮಾ ನಿರ್ದೇಶನ ಮಾಡಲಿದ್ದಾರೆ. ಸೆಪ್ಟೆಂಬರ್​ನಲ್ಲಿ ಶೂಟಿಂಗ್ ಪ್ಲಾನ್ ಆಗಿದ್ದು, ನಿರ್ದೇಶಕ ದಿನೇಶ್ ವಿಜನ್ ಇದರ ನಿರ್ವಣದ ಜವಾಬ್ದಾರಿ ಹೊತ್ತಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಸರಣಿಯಲ್ಲಿ ನೆಗೆಟಿವ್ ಲವರ್ ರೀತಿಯ ಪಾತ್ರವನ್ನು ತಮನ್ನಾ ನಿಭಾಯಿಸಲಿದ್ದಾರೆ. 2022ರಲ್ಲಿ ಅಮೆಜಾನ್​ನಲ್ಲಿ ಬಿಡುಗಡೆ ಆಗಲಿದೆ.