Vijay Sangeetha Love Story 
ಸಿನಿವಾಣಿ

ಅಭಿಮಾನಿಯಾಗಿ ವಿಜಯ್​ನ ಭೇಟಿಯಾದ ಸಂಗೀತ ಲವರ್ ಆಗಿದ್ದೇಗೆ?; 25 ವರ್ಷದ ದಾಂಪತ್ಯಕ್ಕೆ ಬ್ರೇಕ್​ ಕೊಡ್ತಿರೋದ್ಯಾಕೆ?..Vijay

ಪ್ರಮುಖ ಮುಖ್ಯಾಂಶಗಳು

  • ಪತ್ನಿ ಸಂಗೀತಾರಿಂದ ವಿಚ್ಛೇದನ ಅರ್ಜಿ ಸಲ್ಲಿಕೆ ಎಂಬ ವರದಿ.
  • 1996ರಲ್ಲಿ ಅಭಿಮಾನಿಯಾಗಿ ಭೇಟಿಯಾಗಿ, 1999ರಲ್ಲಿ ಮದುವೆಯಾದ ಜೋಡಿ.
  • ಸಂಗೀತಾ ಅವರು ಲಂಡನ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಮಾಹಿತಿ.
Vijay Sangeetha Love Story: ಕಾಲಿವುಡ್​ನ ದಳಪತಿ ವಿಜಯ್ ಭರ್ಜರಿಯಾಗಿ ಗೆದ್ದು ರಾಜಕೀಯ ಪಾದಾರ್ಪಣೆ ಮಾಡಿದ್ದಾರೆ. ಆದರೆ, ಅವರ ವೈಯಕ್ತಿಕ ಜೀವನ ಮಾತ್ರ ವಿವಾದಗಳ ಸುಳಿಯಲ್ಲಿದೆ. ಕಳೆದ 25 ವರ್ಷಗಳಿಂದ ಜೊತೆಯಾಗಿದ್ದ ವಿಜಯ್ ಮತ್ತು ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ಡಿವೋರ್ಸ್​ ಕೊಟ್ಟುಕೊಳ್ಲಲು ಮುಂದಾಗಿದ್ದಾರೆ. ಈ ವಿಚಾರ ಪ್ರಚಾರ ಪಡೆದುಕೊಳ್ಳುತ್ತಲೇ ಸೌತ್​ ಇಂಡಿಯನ್​ ಕ್ವೀನ್ ತ್ರಿಶಾ ಮತ್ತು ವಿಜಯ್​ ಒಟ್ಟಾಗಿ ಕಾಣಲು ಶುರುವಿಟ್ಟುಕೊಂಡರು.
ಹಾಗಾದ್ರೆ ವಿಜಯ್​ ಅವರ ಪ್ರೇಮದ ಆರಂಭಿಕ ದಿನಗಳು ಹೇಗಿತ್ತು..ಅವರಿಬ್ಬರು ಒಬ್ಬರಿಗೊಬ್ಬರು ಪ್ರೇಮಿಸಿಕೊಳ್ಳುತ್ತಿದ್ದರಾ? ಇಬ್ಬರಲ್ಲಿ ಮೊದಲು ಪ್ರಪೋಸ್ ಮಾಡಿಕೊಂಡಿದ್ದು ಯಾರು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ
ಸಂಗೀತ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಭಾವನಾತ್ಮಕ ಕ್ರೌರ್ಯ, ನಿರ್ಲಕ್ಷ್ಯ ಮತ್ತು ವಿಜಯ್ ಅವರ ಪರಸ್ತ್ರೀ ಸಂಬಂಧದ ಆರೋಪಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಈ ಸುದ್ದಿಯಿಂದ ವಿಜಯ್ ಅಭಿಮಾನಿಗಳು ತೀವ್ರ ಬೇಸರಗೊಂಡಿದ್ದಾರೆ.

ಇಬ್ಬರ ಪ್ರೀತಿ ಶುರುವಾಗಿದ್ದು ಹೇಗೆ?

ವಿಜಯ್ ಅವರ 'ಪೂವೇ ಉನಕ್ಕಾಗಿ' ಸಿನಿಮಾ ಹಿಟ್ ಕಂಡ ದಿನಗಳವು1996ರಲ್ಲಿ ಯುಕೆಯಿಂದ ಚೆನ್ನೈಗೆ ಸಂಗೀತ ಭೇಟಿ ಕೊಟ್ಟಿದ್ದರು. ಆಗ ಫಿಲ್ಮ್ ಸಿಟಿಯಲ್ಲಿ ವಿಜಯ್​ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದರು. ಆಗ ಸಂಗೀತ ಅವರು ವಿಜಯ್ ಅವರನ್ನು ಭೇಟಿ ಮಾಡಿ ಆಟೋಗ್ರಾಫ್ ಮತ್ತು ಫೋಟೋ ಪಡೆದುಕೊಂಡಿದ್ದರು. ನಂತರ ನನ್ನ ಪೋಷಕರನ್ನು ಭೇಟಿ ಮಾಡಿ ಎಂದು ಕೇಳಿಕೊಂಡಿದ್ದರಂತೆ. ಇದಕ್ಕೆ ವಿಜಯ್​ ಅವರು ಸಹ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ.

ಇಬ್ಬರ ಪ್ರೀತಿ ಮದುವೆಗೆ ಪೋಷಕರೇ ಕಾರಣ

ಮುಂದುವರೆದು, ಸಂಗೀತ ಅವರ ನಡವಳಿಕೆ ವಿಜಯ್ ತಂದೆ ಎಸ್.ಎ. ಚಂದ್ರಶೇಖರ್ ಅವರಿಗೆ ತುಂಬಾ ಇಷ್ಟವಾಯಿತು. ಎರಡನೇ ಬಾರಿ ಭೇಟಿಯಾದಾಗ, ವಿಜಯ್ ತಂದೆಯು ಸಂಗೀತಾಗೆ "ನಿನಗೆ ವಿಜಯ್ ಇಷ್ಟವೇ?" ಎಂದು ಕೇಳಿದರು. ಅನಿರೀಕ್ಷಿತ ಪ್ರಶ್ನೆಗೆ ಸಂಗೀತ ಮೌನವಾಗಿದ್ದರು. ನಂತರ ವಿಜಯ್ ಅವರಿಗೂ ಇದೇ ಪ್ರಶ್ನೆ ಕೇಳಿದಾಗ, ಅವರು ಆಲೋಚಿಸಲು ಒಂದು ವಾರ ಸಮಯ ಕೇಳಿದರು. ಕೊನೆಗೆ ವಿಜಯ್, "ಪೋಷಕರ ನಿರ್ಧಾರವೇ ನನ್ನ ನಿರ್ಧಾರ" ಎನ್ನುತ್ತಲೇ ತಾವು ಸಂಗೀತಾರ ಪ್ರೀತಿಯಲ್ಲಿ ಬಿದ್ದಿರುವುದನ್ನು ಒಪ್ಪಿಕೊಂಡರು.
ಪ್ರೀತಿಯ ಆರಂಭಿಕ ದಿನಗಳಲ್ಲಿ ವಿಜಯ್ ಅವರು ಸಂಗೀತಾಗೆ ವಜ್ರದ ಉಂಗುರವನ್ನು ಮೊದಲ ಉಡುಗೊರೆಯಾಗಿ ನೀಡಿದ್ದರು. 1999ರ ಆಗಸ್ಟ್ 25ರಂದು ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರಿಗೂ ಜೇಸನ್ ಸಂಜಯ್ ಎಂಬ ಮಗ ಮತ್ತು ದಿವ್ಯಾ ಸಾಶಾ ಎಂಬ ಮಕ್ಕಳಿದ್ದಾರೆ,
ಮದುವೆಯಾದ ಕೆಲ ದಿನದ ನಂತರ, ವಿಜಯ್ ಅವರು ಸಂಗೀತಾ ಅವರು ನನಗೆ ಎಲ್ಲ ವಿಚಾರದಲ್ಲು ತುಂಬಾ ಬೆಂಬಲ ನೀಡುವ ಸಂಗಾತಿ, ಆದರೆ, ನಾನೇ ಅನ್‌ರೊಮ್ಯಾಂಟಿಕ್ ಹೀಗಾಗಿ ಆಕೆ ಉಡುಗೊರೆ ಕೊಡುವುದನ್ನೇ ನಿಲ್ಲಿಸಿದ್ದಾಳೆ ಎಂದು ಹೇಳಿಕೊಂಡಿದ್ದರಂತೆ.

ಸಂಗೀತ ಯಾರು?

ಸಂಗೀತ ಅವರು ಮೂಲತಃ ಶ್ರೀಲಂಕಾ ಮೂಲದವರು. ತಮಿಳು ಮಾತನಾಡುವ ಕುಟುಂಬದವರಾದ ಇವರು ಯುಕೆಗೆ ವಲಸೆ ಹೋಗಿದ್ದರು. ನಂತರ ತಮಿಳುನಾಡಿನ ಸೊಸೆಯಾಗಿ ಸಂಗೀತ ಇಲ್ಲೇ ನೆಲೆಸಿದರು. ಸದ್ಯ ವಿಜಯ್​ ಅವರ ಮಗ ಸಂಜಯ್ 'ಸಿಗ್ಮಾ' ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ದಿವ್ಯಾ ಅವರು ತೆರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ತ್ರಿಶಾ ಕೃಷ್ಣನ್ ಜೊತೆಗೆ ವಿಜಯ್​

ನಟ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ನಡುವೆ ಅಫೇರ್ ಇದೆ ಎಂಬ ವದಂತಿಗಳು ಇತ್ತೀಚೆಗೆ ಹೆಚ್ಚಾಗಿದ್ದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ವಿಜಯ್ ಮತ್ತು ತ್ರಿಶಾ ಅವರು ವಿಹಾರಕ್ಕಾಗಿ ಒಟ್ಟಿಗೆ ವಿದೇಶಕ್ಕೆ ಪ್ರಯಾಣಿಸಿದ್ದರು ಎಂಬ ಸುದ್ದಿಗಳು ಹರಿದಾಡಿದ್ದವು.: ಇಬ್ಬರೂ ಲಿಫ್ಟ್ ಒಂದರಲ್ಲಿ ಕಾಣಿಸಿಕೊಂಡ ಫೋಟೋವೊಂದು ವೈರಲ್ ಆಗಿದ್ದು, ತ್ರಿಶಾ ಅವರು ವಿಜಯ್ ಜೊತೆಗಿನ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು(ಏಜೆನ್ಸೀಸ್).