ಸಿನಿವಾಣಿ

ವಿದೇಶದಿಂದ ಐಷಾರಾಮಿ ಕಾರು ಖರೀದಿ: ಮದ್ರಾಸ್​ ಹೈಕೋರ್ಟ್​​ನಿಂದ ನಟ ವಿಜಯ್​ಗೆ ಬಿಗ್​ ರಿಲೀಫ್​​

ಚೆನ್ನೈ: ವಿದೇಶದಿಂದ ಕಾರು ಆಮದು ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್​ ಹೈಕೋರ್ಟ್​ನಿಂದ ನಟ ವಿಜಯ್​ಗೆ ಬಿಗ್​ ರಿಲೀಫ್​ ಸಿಕ್ಕಿದೆ.

ಅಮೆರಿಕದಿಂದ ಬಿಎಂಡಬ್ಲ್ಯೂ ಎಕ್ಸ್​​ 5 ಕಾರನ್ನು ಖರೀದಿಸಿದ್ದ ವಿಜಯ್​ ಅದರ ತೆರಿಗೆ ಪಾವತಿ ಕುರಿತು ಕೋರ್ಟ್​​​ಗೆ ಅರ್ಜಿ ಸಲ್ಲಿಸಲಾಗಿತ್ತು. 2005ರಿಂದಲೇ ತೆರಿಗೆ ಪಾವತಿಸಬೇಕೆಂದು ಆದಾಯ ತೆರಿಗೆ ಇಲಾಖೆ ಸೂಚಿಸಿತ್ತು.

ಸದ್ಯಕ್ಕೆ ಜನವರಿ 19, 2019 ರಿಂದ 2021ರ ವರೆಗೆ ಮಾತ್ರೆ ತೆರಿಗೆ ಪಾವತಿಸಬೇಕೆಂದು ಕೋರ್ಟ್​ ತೀರ್ಪು ನೀಡಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್​. ಸುರೇಶ್​ ಕುಮಾರ್​ ಅವರಿದ್ದ ವಿಭಾಗೀಯ ಪೀಠ, ಎಲ್ಲರೂ ಪ್ರವೇಶ ತೆರಿಗೆ ಪಾವತಿಸಲು ಹೊಣೆಗಾರರಾಗಿದ್ದು, ಅಂತಹ ತೆರಿಗೆಯನ್ನು ವಿಧಿಸಲು ರಾಜ್ಯ ಸರ್ಕಾರ ಅರ್ಹವಾಗಿದೆ ಎಂದು ತಿಳಿಸಿದೆ.

ಸೆಪ್ಟಂಬರ್​ 17, 2021ರಂದು ವಾಣಿಜ್ಯ ತೆರಿಗೆ ಇಲಾಖೆಯು ವಿಜಯ್​ ಅವರು ಆಮದು ಮಾಡಿಕೊಂಡಿದ್ದ BMW X5 ಐಷಾರಾಮಿ ಕಾರಿಗೆ 30.23ಲಕ್ಷ ದಂಡದ ಜತೆಗೆ 7.98ಲಕ್ಷ ಪ್ರವೇಶ ತೆರಿಗೆ ಬೇಡಿಕೆಯಿರುವ ನೋಟಿಸ್ ಅನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ವಿಜಯ್​ ನ್ಯಾಯಾಲಯದ ಮೊರೆ ಹೋಗಿದ್ದರು. (ಏಜೆನ್ಸೀಸ್​)