Thalaivi 
ಸಿನಿವಾಣಿ

ಥಲೈವಿ ಟ್ರೈಲರ್ ಬಿಡುಗಡೆ: ಜಯಲಲಿತಾ ಪಾತ್ರದಲ್ಲಿ ಮಿಂಚಿದ ಕಂಗನಾ ರಣಾವತ್

mcbhadrashetti

ಚೆನ್ನೈ: ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಜೀವನದ ರೋಚಕ ಸಂಗತಿಗಳನ್ನು ಹೊತ್ತು ತೆರೆಗೆ ಬರಲು ಸಿದ್ದವಾಗಿರುವ ಥಲೈವಿ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಜಯಲಲಿತಾ ಪಾತ್ರದಲ್ಲಿ ಬಾಲಿವುಡ್ ಬೆಡಗಿ ಕಂಗನಾ ರಣಾವತ್ ಮಿಂಚಿದ್ದು, ಟ್ರೈಲರ್​ನಲ್ಲಿ ಅದ್ಭುತವಾಗಿ ಮೂಡಿ ಬಂದಿದ್ದಾರೆ.

ಯೂಟ್ಯೂಬ್​ನಲ್ಲಿ 3.3 ನಿಮೀಷದ ಟ್ರೈಲರ್ ಬಿಡುಗಡೆಯಾಗಿದ್ದು, ಜಯಲಲಿತಾ ಅಭಿಮಾನಿಗಳನ್ನು ಸಿನಿಮಾ ನೋಡಲು ಇದು ತುದಿಗಾಲ ಮೇಲೆ ನಿಲ್ಲಿಸಿದೆ.

ತಮಿಳಿನಲ್ಲಿ ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಎ ಎಲ್ ವಿಜಯ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ವಿಷ್ಣುವರ್ಧನ್ ಇಂದೂರಿ, ಶೈಲೇಶ್ ಆರ್ ಸಿಂಗ್ ಅವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ.

ಏಪ್ರೀಲ್ 23 ಕ್ಕೆ ಥಲೈವಿ ಸಿನಿಮಾ ತಮಿಳು, ತೆಲಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.