- 'ದೀವಾನಾ' ಚಿತ್ರದ ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ಹೇಳಿಕೆ
- ಇಂದಿನ ಯುವಪೀಳಿಗೆಯ ಪ್ರೇಮಕಥೆಯನ್ನು ತಮ್ಮ ಶೈಲಿಯಲ್ಲಿ ಹೇಳಿದ ಅಲ್ಲು ಅರವಿಂದ್
ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟಾರ್ ನಿರ್ಮಾಪಕ ಹಾಗೂ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರ ಇತ್ತೀಚಿಗಿನ ಬೋಲ್ಡ್ ಹೇಳಿಕೆಯೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
ಗೀತಾ ಆರ್ಟ್ಸ್‌ನ ಮುಖ್ಯಸ್ಥರಾಗಿ ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಅಲ್ಲು ಅರವಿಂದ್, ಪ್ರಸ್ತುತ ಕಾಲಘಟ್ಟದ ಪ್ರೇಮಿಗಳು ಮತ್ತು ಅವರ ಪ್ರೀತಿ ಕುರಿತಂತೆ ನೀಡಿದ ಬೋಲ್ಡ್ ಕಾಮೆಂಟ್ಗಳು ವೇದಿಕೆಯಲ್ಲಿದ್ದ ಸಿನಿಮಾ ನಟರು ಮತ್ತು ಇತರರನ್ನು ಒಂದು ನಿಮಿಷ ಗಪ್ಚುಪ್ ಮಾಡಿತು.
ಇತ್ತೀಚೆಗಷ್ಟೇ 'ದೀವಾನಾ' ಚಿತ್ರದ ಟ್ರೇಲರ್ ಲಾಂಚ್ ಈವೆಂಟ್ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಟ ವಿಶ್ವಕ್ ಸೇನ್ ಅವರು ಕೇಳಿದ ಕೆಲವು ಪ್ರಶ್ನೆಗಳಿಗೆ ಹಾಸ್ಯಸ್ಪದವಾಗಿ ಉತ್ತರಿಸಿದ ಅಲ್ಲು ಅರವಿಂದ್, "ಇಂದಿನ ಯುವ ಪ್ರೇಮಿಗಳು ಚಿತ್ರಮಂದಿರಗಳಿಗೆ ಹೋಗ್ತಾರೆ ಆದ್ರೆ, ಸಿನಿಮಾ ನೋಡೋದಿಲ್ಲ. ಯಾರ ಕಣ್ಣಿಗೂ ಬೀಳದಂತೆ ಮೂಲೆಯ ಸೀಟಿನಲ್ಲಿ ಕುಳಿತು ಎಂಜಾಯ್ ಮಾಡುತ್ತಿರುತ್ತಾರೆ ಎಂದರು.
ಇಷ್ಟೇ ಅಲ್ಲದೇ, ಒಂದೆರಡು ಶಾಪಿಂಗ್ ಮಾಲ್ ಸುತ್ತಾಡುತ್ತಾರೆ ಮತ್ತು ಅಲ್ಲಿಂದ ನೇರವಾಗಿ ಓಯೋ ರೂಮ್ಗಳಿಗೆ ಹೋಗಿ ತಮ್ಮ ಪ್ರೇಮಕಥೆಗಳಿಗೆ ದಿ ಎಂಡ್ ಬರೆಯುತ್ತಾರೆ" ಎಂದು ಬೋಲ್ಡ್ ಕಾಮೆಂಟ್‌ಗಳನ್ನು ಮಾಡಿದರು. ಹಿರಿಯ ನಿರ್ಮಾಪಕನ ಈ ಹೇಳಿಕೆಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ,(ಏಜೆನ್ಸೀಸ್).