ಸಿನಿವಾಣಿ

ಕುಡಿದ ಮತ್ತಿನಲ್ಲಿ ಮಹಿಳಾ ಪೊಲೀಸ್ ಕೊರಳು ಪಟ್ಟಿ ಹಿಡಿದ ನಟಿ ಕಾವ್ಯಾ ತಾಪರ್ ಬಂಧನ!

ಟಾಲಿವುಡ್ ಮತ್ತು ಕಾಲಿವುಡ್​ನಲ್ಲೂ ನಟಿಸಿ ಬಹಳಷ್ಟು ಖ್ಯಾತಿ ಪಡೆದಿರುವ ನಟಿ ಕಾವ್ಯಾ ತಾಪರ್ ಅವರನ್ನು ಫೆಬ್ರವರಿ 18 ರಂದು ರಾತ್ರಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ನಟಿ ಕಾವ್ಯಾ ತಾಪರ್ ಅವರು ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಜುಹು ಏರಿಯಾದಲ್ಲಿ ಒಂದು ಕಾರಿಗೆ ಗುದ್ದಿದ್ದಲ್ಲದೇ ಒಬ್ಬ ಪಾದಾಚಾರಿಯನ್ನು ಗಾಯಗೊಳಿಸಿದ್ದು, ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಹಾಗಾಗಿ, ಸ್ಥಳೀಯರ ದೂರಿನ ಆಧಾರದ ಮೇಲೆ ಕಾವ್ಯಾ ತಾಪರ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ನಟಿ ಕಾವ್ಯಾ ಅವರು ಮಹಿಳಾ ಪೊಲೀಸ್ ಒಬ್ಬರ ಕೊರಳು ಪಟ್ಟಿ ಹಿಡಿದು ಜಗಳ ಮಾಡಿ ಜತೆಗೆ ಹಲ್ಲೆಗೆ ಸಹ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಕಾರಣಗಳಿಗೆ ನಟಿಯನ್ನು ಪೊಲೀಸರು ಬಂಧಿಸಿದ್ದು, ಸೆಕ್ಷನ್ 353, 504, 427 ಗಳನ್ನು ಕಾವ್ಯಾ ಮೇಲೆ ಹೂಡಲಾಗಿದೆ.
ಮದ್ಯ ಸೇವಿಸಿ ವಾಹನ ಚಲಾಯಿಸಿದ ಪ್ರಕರಣ, ಅಪಘಾತ ಮಾಡಿದ ಪ್ರಕರಣ, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ಅಧಿಕಾರಿಗಳಿಗೆ ಕರ್ತವ್ಯ ಮಾಡಲು ಅಡ್ಡಿಪಡಿಸಿದ್ದು ಹೀಗೆ ಹಲವು ದೂರುಗಳನ್ನು ಬೇರೆ ಬೇರೆ ಸೆಕ್ಷನ್​ಗಳ ಅಡಿ ಕಾವ್ಯಾ ಅವರ ವಿರುದ್ಧ ದಾಖಲಿಸಲಾಗಿದೆ. ಮುಂಬೈನವರಾಗಿರುವ ಕಾವ್ಯಾ ತಾಪರ್ ನಟಿಸಿರುವುದು ಮಾತ್ರ ತೆಲುಗು, ತಮಿಳು ಚಿತ್ರಗಳಲ್ಲಿ. ತೆಲುಗಿನಲ್ಲಿ 'ಒಕ ಮಿನಿ ಕಥಾ', 'ಈ ಮಾಯ ಪೇರೇಮಿಟೊ' ಹಾಗೂ ತಮಿಳಿನಲ್ಲಿ 'ಮಾರ್ಕೆಟ್ ರಾಜ ಎಂಬಿಬಿಎಸ್' ಎಂಬ ಸಿನಿಮಾಗಳ ಮೂಲಕ ಹೆಸರು ಮಾಡಿದ್ದಾರೆ. ಈಗ, ಮತ್ತೊಂದು ತೆಲುಗು ಮತ್ತು ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.