ಸಿನಿವಾಣಿ

ಸ್ಟಾರ್​ ಚಿತ್ರಗಳಿಗೆ ತೆಲಂಗಾಣ ಹೈಕೋರ್ಟ್​ ಚಾಟಿ!

"ಪುಷ್ಪ 2: ದ ರೂಲ್​' ಚಿತ್ರದ ವಿಶೇಷ ಶೋ ಸಂದರ್ಭದಲ್ಲಿ ಹೈದರಾಬಾದ್​ನ ಥಿಯೇಟರ್​ನಲ್ಲಿ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ವಿಧಿವಶರಾಗಿದ್ದು, ಅವರ ಪುತ್ರ ಸಾವು-ಬದುಕಿನ ನಡುವೆ ಹೋರಾಡುತ್ತಿರುವುದು ಗೊತ್ತಿದೆ. ಆ ಬಳಿಕ "ಗೇಮ್​ಚೇಂಜರ್​' ಚಿತ್ರಕ್ಕೂ ಮಧ್ಯರಾತ್ರಿ, ಮುಂಜಾನೆ ಸಮಯದಲ್ಲಿ ವಿಶೇಷ ಶೋಗಳನ್ನು ಆಯೋಜಿಸಲಾಗಿತ್ತು. ಆಗಲೂ ಥಿಯೇಟರ್​ಗಳ ಮುಂದೆ ಸಾವಿರಾರು ಜನ ಸೇರಿ, ಸಮಸ್ಯೆ ಉಂಟಾಗಿತ್ತು.

ಟಿಕೆಟ್​ ದರ ಹೆಚ್ಚಿಸಿ, ತಡರಾತ್ರಿ ಅಥವಾ ಮುಂಜಾನೆ ಸಮಯದಲ್ಲಿ ಆಯೋಜಿಸಲಾಗುವ ಸ್ಪೆಷಲ್​ ಶೋಗಳನ್ನು ಪ್ರಶ್ನಿಸಿ ತೆಲಂಗಾಣ ಹೈಕೋರ್ಟ್​ನಲ್ಲಿ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ ಜಸ್ಟೀಸ್​ ಬಿ. ವಿಜಯಸೇನಾ ರೆಡ್ಡಿ, ಬೆಳಗ್ಗೆ 11 ಗಂಟೆಗೂ ಮುನ್ನ ಹಾಗೂ ರಾತ್ರಿ 11 ಗಂಟೆಯ ನಂತರದ ಶೋಗಳನ್ನು ವೀಸಲು 16 ವರ್ಷದ ಒಳಗಿನ ಮಕ್ಕಳಿಗೆ ರ್ನಿಬಂಧ ಹೇರುವಂತೆ ತೆಲಂಗಾಣ ರಾಜ್ಯ ಸರ್ಕಾರ ಮತ್ತು ಥಿಯೇಟರ್​ ಮಾಲೀಕರಿಗೆ ನಿರ್ದೇಶಿಸಿದ್ದಾರೆ.

ತಡರಾತ್ರಿ ಸಿನಿಮಾ ಶೋಗಳನ್ನು ವೀಸುವುದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹೀಗಾಗಿ ಸಂಬಂಧಪಟ್ಟವರ ಜತೆ ಸಭೆ ನಡೆಸಿ ನಿರ್ಧಾರಕ್ಕೆ ಬರುವಂತೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದು, ಪ್ರಕರಣವನ್ನು ೆ. 22ಕ್ಕೆ ಮುಂದೂಡಿದ್ದಾರೆ. &ಏಜೆನ್ಸೀಸ್​