ಸಿನಿವಾಣಿ

ಕೊಡೈಕೆನಾಲ್​ನತ್ತ ರಕ್ಷಿತ್​ ಶೆಟ್ಟಿ ಮತ್ತು ಚಾರ್ಲಿಯ ಹೆಜ್ಜೆ

ಬೆಂಗಳೂರು: ರಕ್ಷಿತ್​ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ‘777 ಚಾರ್ಲಿ’ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿದ್ದು, ಕೊನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೀಗ ಕೊಡೈಕೆನಲ್​ನತ್ತ ಇಡೀ ತಂಡ ಪ್ರಯಾಣ ಬೆಳೆಸಿದೆ.

ಇತ್ತೀಚೆಗಷ್ಟೇ ರಿಚ್ಚಿ ಸಲುವಾಗಿ ಗೋವಾದ ಕಡಲ ತೀರಕ್ಕೆ ಹೋಗಿ ಬಂದಿದ್ದ ರಕ್ಷಿತ್​, ಇದೀಗ ಚಾರ್ಲಿ ಸಲುವಾಗಿ ಕೊಡೈಕೆನಲ್​ಗೆ ತೆರಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಶೂಟಿಂಗ್​ ಮಾಡಿಕೊಂಡಿದ್ದ ತಂಡ, ಈಗ ಚಿತ್ರದ ಕೆಲ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲು ಕೊಡೈಕೆನಲ್​ನತ್ತ ಮುಖ ಮಾಡಿದೆ.

‘777 ಚಾರ್ಲಿ’ ಚಿತ್ರವನ್ನು ಕಿರಣ್​ ರಾಜ್​ ನಿದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಕ್ಷಿತ್​, ಸಂಗೀತ ಶೃಂಗೇರಿ, ರಾಜ್​ ಬಿ ಶೆಟ್ಟಿ, ದಾನಿಶ್​ ಸೇಠ್​ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರವನ್ನು ರಕ್ಷಿತ್​ ಶೆಟ್ಟಿ ಮತ್ತು ಪುಷ್ಕರ್​ ಮಲ್ಲಿಕಾರ್ಜುನಯ್ಯ ಜತೆಯಾಗಿ ನಿರ್ಮಾಣ ಮಾಡುತ್ತಿದ್ದಾರೆ.