ಬಾಲಿವುಡ್ನಲ್ಲಿ ಆ್ ಬೀಟ್ ಸಿನಿಮಾ ಮೂಲಕ ತಮ್ಮದೇ ನೋಡುಗ ವರ್ಗವನ್ನು ಸೃಷ್ಟಿಸಿಕೊಂಡಿರುವ ನಟಿ ತಾಪ್ಸೀ ಪನ್ನು, ಇದೀಗ ಒಟಿಟಿಯಲ್ಲಿಯೂ ಮಿನುಗಲು ಸಜ್ಜಾಗುತ್ತಿದ್ದಾರೆ.
ಬತ್ತಳಿಕೆಯಲ್ಲಿ ಸಿದ್ಧವಾದ ಸಾಲುಸಾಲು ಸಿನಿಮಾಗಳಿದ್ದರೂ, ಚಿತ್ರಮಂದಿರಗಳು ಬಂದ್ ಆಗಿರುವುದರಿಂದ ಒಟಿಟಿಯತ್ತ ಮುಖ ಮಾಡಿದ್ದಾರೆ ತಾಪ್ಸೀ. ಈಗಾಗಲೇ ಬಾಲಿವುಡ್ನ ಸಾಕಷ್ಟು ಸಿನಿಮಾಗಳು ಒಟಿಟಿಯ ಹಾದಿ ಹಿಡಿದಿವೆ. ಒಳ್ಳೆಯ ಪ್ರತಿಕ್ರಿಯೆಯನ್ನೂ ಗಿಟ್ಟಿಸಿಕೊಳ್ಳುತ್ತಿವೆ. ಅದೇ ರೀತಿ ವಿನಿಲ್ ಮ್ಯಾಥ್ಯೂ ನಿರ್ದೇಶನದ ತಾಪ್ಸೀ ನಟಿಸಿರುವ "ಹಸೀನ್ ದಿಲ್ರುಬಾ' ಚಿತ್ರ ನೆಟ್ಫ್ಲಿಕ್ಸ್ನಲ್ಲಿ ಜುಲೈ 2ಕ್ಕೆ ಬಿಡುಗಡೆ ಆಗಲಿದೆ. &ಏಜೆನ್ಸೀಸ್