ಬಿಗ್‌ಬಾಸ್ ಮನೆಗೆ ಕೊನೆಗೂ ಕಾಲಿಟ್ಟ ತಾಂಡವ್ ರಾಮ್
ಮನೆಗೆ ಮತ್ತೆ ಎಂಟ್ರಿಯಾಗುತ್ತಲೇ ಕ್ಯಾಪ್ಟನ್ಸಿ ಸ್ಥಾನ ಹೈಜಾಕ್
ಇನ್ಮುಂದೆ ಒಳ್ಳೆತನ ಎಕ್ಸ್ಪೆಕ್ಟ್ ಮಾಡ್ಬೇಡಿ ಎಂದಿದ್ದು ಯಾರಿಗೆ?
Bigg Boss Kannada: ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಎಂಟ್ರಿಯಾಗಿ ಮೂರು ದಿನ ಕಳೆದರೂ ಸಹ ಇನ್ನೂ ತಾಂಡವ್ ರಾಮ್ ಎಂಟ್ರಿಯಾಗಿಲ್ಲ ಯಾಕೆ. ಅವರಿಗೆ ಟ್ರೇನಿಂಗ್ ಕೊಡ್ತಿದ್ದೀರಾ, ಸೀಕ್ರೇಟ್ ರೂಮ್ನಲ್ಲಿಟ್ಟಾದರೂ ನಮಗೆ ತೋರಿಸಿ ಎಂದು ವೀಕ್ಷಕರು ಗೋಗೆರೆದಿದ್ದರು. ಈ ಮಧ್ಯೆ ತಾಂಡವ್ ರಾಮ್ ಎಂಟ್ರಿಯಾದ ಪ್ರೋಮೋವನ್ನು ರಿಲೀಸ್ ಮಾಡಲಾಗಿದೆ.
ಭಾರ ಹೊತ್ತ ಧೀರ, ಗೋಲು ಇಲ್ಲಾಂದ್ರೆ ಸೋಲು ಟಾಸ್ಕ್ಗಳಲ್ಲಿ ಉಸ್ತುವಾರಿಗಳಲ್ಲೇ ಉಂಟಾದ ಗೊಂದಲದಿಂದಾಗಿ ಕ್ಯಾಪ್ಟನ್ಸಿ ಟಾಸ್ಕ್ ಅನ್ನೇ ರದ್ದು ಮಾಡಲಾಗಿತ್ತು. ಆ ಬೆನ್ನಲ್ಲೇ ಕಳಪೆ ಚಟುವಟಿಕೆ ನೀಡಲಾಗಿತ್ತು. ಹೀಗ್ಯಾಕೆ ಎಂದು ವೀಕ್ಷಕರು ನಾನಾ ರೀತಿಯಲ್ಲಿ ಚರ್ಚೆ ಮಾಡುತ್ತಿರುವಾಗಲೇ ಅಸಲಿ ಕಾರಣ ಬೇರೆಯೇ ಇದೆ ಎನ್ನುವುದು ತಿಳಿದುಬಂದಿದೆ.
ಹೌದು ಎಮರ್ಜನ್ಸಿ ಎಕ್ಸಿಟ್ ಆಗಿ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆದ ತಾಂಡವ್ ರಾಮ್ ಕಂಬ್ಯಾಕ್ ಆಗಿದ್ದಲ್ಲದೇ ಕ್ಯಾಪ್ಟನ್ ಸ್ಥಾನವನ್ನು ಹೈಜಾಕ್ ಮಾಡಿದ್ದಾರೆ. ಅವರು ಈ ವಾರ ಕ್ಯಾಪ್ಟನ್ ಆಗಿ ಮುಂದುವರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಎಲ್ಲೋ ಇದ್ದ ತಾಂಡವ್ ಅವರು ಆಟವನ್ನೇ ಆಡದೆ ಕ್ಯಾಪ್ಟನ್ ಅಂದರೆ ಪೈಟಲ್ ಆಗಿರುವುದು, ನಿಷ್ಠೆಯಿಂದ ಆಟವಾಡಿದ ಸ್ಪರ್ಧಿಗಳಲ್ಲಿ ಬೇಸರವನ್ನುಂಟು ಮಾಡುತ್ತದೆಯೇ ಎನ್ನುವುದನ್ನು ನೋಡಬೇಕಾಗಿದೆ.
ಬಿಗ್‌ಬಾಸ್ ಮನೆಯಲ್ಲಿ ಒಬ್ಬ ಹೈಜಾಕರ್ ಮನೆಯ ಕ್ಯಾಪ್ಟೆನ್ಸಿಯನ್ನು ಹೈಜಾಕ್ ಮಾಡಲು ನೂತನ ಕ್ಯಾಪ್ಟನ್ ಆಗಿ ಮನೆಗೆ ಪ್ರವೇಶಿಸಿದ್ದಾರೆ ಎಂದು ಹೇಳುತ್ತಲೇ ಮನೆಯ ಎಲ್ಲ ಭಾಗಗಳು ಬಿಳಿ ಪರದೆಯಿಂದ ಮುಚ್ಚಿಕೊಳ್ಳುತ್ತದೆ. ಆಗ ಎಲ್ಲ ಸ್ಪರ್ಧಿಗಳು ಮನೆಗೆ ಯಾರೋ ಬಂದಿದ್ದಾರೆ ಎನ್ನುತ್ತಾರೆ. ಆ ಕೂಡಲೇ ತಾಂಡವ್ ಅವರು 'ಇನ್ನೂ ಏನೋ ಬೇಜಾರಾಗಿದ್ದೀಯಾ ಮಚ್ಚಾ' ಎನ್ನುವುದು ಕೇಳಿಬರುತ್ತದೆ. ಆಗ ಬೆಡ್ ರೂಂನಲ್ಲಿ ಅವರು ಮಾಸ್ಕ್ ಧರಿಸಿ ಕುಳಿತಿರುತ್ತ ಕ್ಯಾಮೆರಾ ಟರ್ನ್ ಆಗಿರುವುದು ಕಾಣುತ್ತದೆ.
'ಮಾಸ್ಕ್ ತೆರೆದು ಹೊರಬಂದ ಅವರು, ತುಂಬಾ ಒಳ್ಳೆತನ ತೋರಿಸಿ, ತುಂಬಾ ನೋವು ಪೆಟ್ಟು ತಿಂದಿದೀನಿ, ಅನುಭವಿಸಿದೀನಿ. ಇನ್ಮೇಲೆ ಆ ಒಳ್ಳೆತನ ಈ ಮನೆಲ್ಲಿ ಇರೋವರೆಗೂ ನನ್ನ ಹತ್ರ ಎಕ್ಸ್ಪೆಕ್ಟ್ ಮಾಡಬೇಡಿ. ನ್ಯಾಯ ಅಂದ್ರೆ ನ್ಯಾಯ, ನಮ್ಮ ತಾಯಣೆ ನ್ಯಾಯ' ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಮತ್ತೆ ಬಿಗ್‌ಬಾಸ್ ಮನೆಯಲ್ಲಿ ಹೊಸದಾಗಿ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗುತ್ತದೆಯೇ ಅಥವಾ ತಾಂಡವ್ ಅವರು ಕ್ಯಾಪ್ಟನ್ ಆಗಿ ಮುಂದುವರೆಯುತ್ತಾರಾ ಎನ್ನುವುದನ್ನು ಇಂದಿನ ಎಪಿಸೋಡ್ನಲ್ಲಿ ಕಾದು ನೋಡಬೇಕಾಗಿದೆ, (ಏಜೆನ್ಸೀಸ್).