ಸಿನಿವಾಣಿ

17 vs 110 ಕೋಟಿ ರೂಪಾಯಿ: ಮಿಲ್ಕಿ ಬ್ಯೂಟಿ ತಮನ್ನಾ ನಡೆಗೆ ಅಭಿಮಾನಿಗಳ ಮೆಚ್ಚುಗೆ!

ಮುಂಬೈ: ಇದುವರೆಗೂ ವದಂತಿ ಅಂದುಕೊಂಡಿದ್ದ ಸುದ್ದಿಗೆ ನಟಿ ತಮನ್ನಾ ಅಧಿಕೃತ ಮುದ್ರೆ ಒತ್ತಿದ್ದಾರೆ. ತಾವು ನಟ ವಿಜಯ್​ ವರ್ಮರನ್ನು ಪ್ರೀತಿಸುತ್ತಿರುವುದಾಗಿ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ಲಸ್ಟ್​ ಸ್ಟೋರಿಸ್​ ವೆಬ್ ಸರಣಿ ಚಿತ್ರೀಕರಣ ಸಮಯದಲ್ಲಿ ಇಬ್ಬರು ಪರಿಚಿತರಾದರು ಎಂದು ತಿಳಿದುಬಂದಿದೆ. ಜೂನ್​ 29ರಂದು​ ನೆಟ್​ಫ್ಲಿಕ್ಸ್​ನಲ್ಲಿ ಲಸ್ಟ್​ ಸ್ಟೋರೀಸ್​ ಬಿಡುಗಡೆಯಾಗಲಿದ್ದು, ಅದರ ಪ್ರಚಾರದಲ್ಲಿ ತಮನ್ನಾ ನಿರತರಾಗಿದ್ದಾರೆ.

ತಮನ್ನಾ ಹೆಸರಿನ ಜೊತೆ ಈ ಹಿಂದೆ ಹಲವರು ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲಿ ಉದ್ಯಮಿ ಹೆಸರೂ ಇತ್ತು. ಆದರೆ, ಅಷ್ಟೊಂದು ಖ್ಯಾತರಲ್ಲದ ವಿಜಯ್​ ವರ್ಮ ಪ್ರೀತಿಯಲ್ಲಿ ತಮನ್ನಾ ಬಿದ್ದಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ ತಮನ್ನಾ ಅವರು ವಿಜಯ್​ ವರ್ಮಗಿಂತ ಆರು ಪಟ್ಟು ಅಧಿಕ ಆಸ್ತಿ ಹೊಂದಿದ್ದಾರೆ. ಇದು ತಮನ್ನಾ ಅವರ ಅಭಿಮಾನಿಗಳಿಗೆ ಮಾತ್ರವಲ್ಲ ಸಿನಿಮಾ ಇಂಡಸ್ಟ್ರಿಯವರಿಗೂ ಅಚ್ಚರಿ ಉಂಟು ಮಾಡಿದೆ.

17 ಕೋಟಿ ರೂ.

37 ವರ್ಷದ ವಿಜಯ್​ ವರ್ಮ ಹೈದರಾಬಾದ್​ ಮೂಲದವರು. ಗಲ್ಲಿ ಬಾಯ್​, ಪಿಂಕ್​, ಭಾಗಿ 3 ಮತ್ತು ಡಾರ್ಲಿಂಗ್ಸ್​ ಸೇರಿದಂತೆ ಅನೇಕ ಬಾಲಿವುಡ್​ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಆಸ್ತಿಯ ಮೌಲ್ಯ 17 ಕೋಟಿ ರೂ. ಎನ್ನಲಾಗಿದೆ.

ತಮನ್ನಾ ಬಗ್ಗೆ ಅಭಿಮಾನಿಗಳ ಮೆಚ್ಚುಗೆ

ತಮನ್ನಾ ವಿಚಾರಕ್ಕೆ ಬರುವುದಾದರೆ, ಇಂದಿಗೂ ಸ್ಟಾರ್​ ನಟಿಯರ ಸಾಲಿನಲ್ಲಿ ತಮನ್ನಾ ಗುರುತಿಸಿಕೊಂಡಿದ್ದಾರೆ. ಬಹುತೇಕ ಸ್ಟಾರ್​ ನಟರೊಂದಿಗೆ ನಟಿಸಿರುವ ತಮನ್ನಾ, ಅವರ ಒಟ್ಟು ಆಸ್ತಿ 110 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ನಟಿಯರು ತನಗಿಂತಲೂ ಶ್ರೀಮಂತರಾದ ಉದ್ಯಮಿಯನ್ನು ಅಥವಾ ಸೂಪರ್​ಸ್ಟಾರ್​ ಅಥವಾ ಖ್ಯಾತ ಕ್ರಿಕೆಟಿಗನನ್ನು ವರಿಸುತ್ತಾರೆ. ಆದರೆ, ತಮನ್ನಾ ಈ ಪದ್ಧತಿಗೆ ಬೆಲೆ ಕೊಡದೆ ಆಸ್ತಿ ವಿಚಾರದಲ್ಲಿ ತನಗಿಂತಲೂ ತುಂಬಾ ಅಂತರದಲ್ಲಿರುವ ಮತ್ತು ಹೆಚ್ಚು ಖ್ಯಾತರಲ್ಲದ ನಟನನ್ನು ಪ್ರೀತಿಸುತ್ತಿದ್ದಾರೆ. ಹಣಕ್ಕಿಂತ ಗುಣಕ್ಕೆ ತಮನ್ನಾ ಪ್ರಾಮುಖ್ಯತೆ ಕೊಟ್ಟಿದ್ದಾರೆ ಅಂತಾ ಅವರ ಅಭಿಮಾನಿಗಳು ಅವರನ್ನು ಕೊಂಡಾಡುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ಜೂನ್​ 29ಕ್ಕೆ ಲಸ್ಟ್​ ಸ್ಟೋರಿಸ್​ ವೆಬ್​ ಸರಣಿ ಬಿಡುಗಡೆಯಾಗಲಿದೆ. ಸೂಪರ್​ ಸ್ಟಾರ್​ ರಜನಿಕಾಂತ್​ ನಟನೆಯ ಜೈಲರ್​ ಸಿನಿಮಾದಲ್ಲಿ ಮತ್ತು ಸುಂದರ್​ ಸಿ ನಿರ್ದೇಶನದ ಅರಮನೈ ಭಾಗ 4ರ ಚಿತ್ರದಲ್ಲಿ ತಮನ್ನಾ ನಟಿಸಿದ್ದಾರೆ. (ಏಜೆನ್ಸೀಸ್​)