ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ತಬು ಬಾಲ್ಯದ ಗೆಳೆಯರು. ಇವರ ಸ್ನೇಹ ನಾಲ್ಕು ದಶಕಗಳು ಕಳೆದರೂ ಹಾಗೆಯೇ ಇದೆ. ಅದಕ್ಕೆ ಕಾರಣ ಇವರು ಚಿತ್ರರಂಗಕ್ಕೆ ಬಂದ ನಂತರವೂ ಆಗಾಗ ಒಟ್ಟಿಗೆ ನಟಿಸುತ್ತಿದ್ದಾರೆ.
ಈಗಾಗಲೇ ಎಂಟು ಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದು, ಸದ್ಯ ಒಂಬತ್ತನೇ ಬಾರಿಗೆ ಒಂದಾಗಿದೆ. ಅದು ಖುದ್ದು ಅಜಯ್ ದೇವಗನ್ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ "ಭೋಲಾ' ಚಿತ್ರದ ಮೂಲಕ. ಹೌದು, "ಯೂ, ಮಿ ಔರ್ ಹಮ್', "ಶಿವಾಯ್' ಹಾಗೂ "ರನ್ವೇ 34' ಬಳಿಕ ಅಜಯ್ ನಾಲ್ಕನೇ ಬಾರಿಗೆ ಆಕ್ಷನ್&ಕಟ್ ಹೇಳುತ್ತಿರುವ ಚಿತ್ರ "ಭೋಲಾ'. ಇದು ತಮಿಳಿನ ಹಿಟ್ ಸಿನಿಮಾ ಕಾರ್ತಿ ನಟಿಸಿರುವ "ಕೈದಿ' ಹಿಂದಿ ರಿಮೇಕ್ ಆಗಿದ್ದು, ಇದೇ ಜುಲೈನಲ್ಲಿ ಸೆಟ್ಟೇರಿತ್ತು. ಸದ್ಯ ತಬು ಅವರ ಪಾತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರು, "ಒಟ್ಟಿಗೆ ಒಂಭತ್ತನೇ ಚಿತ್ರ ಪೂರ್ಣಗೊಳಿಸಿದ್ದೇವೆ' ಎಂದು ಅಜಯ್ ದೇವಗನ್ ಜತೆಗಿನ ೋಟೋ ಹಂಚಿಕೊಂಡಿದ್ದಾರೆ.
ಈ ಹಿಂದೆ "ವಿಜಯ್ಪಥ್', "ಹಕೀಕತ್', "ತಕ್ಷಕ್', "ಫಿತೂರ್', "ದೃಶ್ಯಂ', "ಗೋಲ್ಮಾಲ್ ಅಗೇನ್', "ದೇ ದೇ ಪ್ಯಾರ್ ದೇ' ಹಾಗೂ "ದೃಶ್ಯಂ 2' ಚಿತ್ರಗಳಲ್ಲೂ ಅಜಯ್&ತಬು ಒಟ್ಟಿಗೆ ನಟಿಸಿದ್ದರು. ಚಿತ್ರ 2023ರ ಮಾರ್ಚ್ನಲ್ಲಿ ತೆರೆಗೆ ಬರುವ ನಿರೀೆಯಿದೆ. "ಭೋಲಾ' ಜತೆಗೆ ಅಜಯ್ ದೇವಗನ್, "ಥ್ಯಾಂಕ್ ಗಾಡ್' ಎಂಬ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇನ್ನು ತಬು ಸಹ "ಕುತ್ತೇ' ಹಾಗೂ "ಖೂಫಿಯಾ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಏಜೆನ್ಸೀಸ್