ಸಿನಿವಾಣಿ

ಕನ್ನಡದಲ್ಲಿ ಡಾನ್ಸ್ ಆಧರಿತ ಚಿತ್ರ; ಬಾಲಿವುಡ್​ನಲ್ಲಿ ಗುರುತಿಸಿಕೊಂಡ ಸುಶಾಂತ್ ಇಲ್ಲಿ ನಾಯಕ

ಬೆಂಗಳೂರು: ಈಗಾಗಲೇ ಬಾಲಿವುಡ್​ನಲ್ಲಿ ಡಾನ್ಸ್ ಆಧರಿತ ಸಾಕಷ್ಟು ಸಿನಿಮಾಗಳು ಬಂದಿವೆ. ಒಳ್ಳೇ ಪ್ರತಿಕ್ರಿಯೆಯ ಜತೆಗೆ ಗಳಿಕೆ ವಿಚಾರದಲ್ಲಿಯೂ ಸದ್ದು ಮಾಡಿವೆ. ಇದೀಗ ಕನ್ನಡದಲ್ಲಿಯೂ ಅಂಥದ್ದೆ ಹೊಸದೊಂದು ಪ್ರಯತ್ನವಾಗುತ್ತಿದೆ.

ಹೌದು, ಸ್ಯಾಂಡಲ್​ವುಡ್​ನಲ್ಲಿ ಪ್ರಪ್ರಥಮ ಬಾರಿಗೆ ಡಾನ್ಸ್ ಆಧಾರಿತ ಚಿತ್ರವೊಂದು ನಿರ್ಮಾಣಗೊಳ್ಳುತ್ತಿದ್ದು, ಹಿಂದಿಯ ಎಬಿಸಿಡಿ ಹಾಗೂ ಸ್ಟ್ರೀಟ್ ಡಾನ್ಸರ್ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ನಟ ಸುಶಾಂತ್ ಪೂಜಾರಿ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಎ.ಎಸ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರಕ್ಕೆ ಕಿಶೋರ್ ಕುಮಾರ್ ಮತ್ತು ಸುಜಯ್ ಎಸ್. ಕಾಮತ್ ಆಕ್ಷನ್ ಕಟ್ ಹೇಳಲಿದ್ದಾರೆ.

ಕಿರಣ್ ಶೆಟ್ಟಿ, ಆಶಿಕಾ ಸುವರ್ಣ, ವಿನೋದ್ ಕುಮಾರ್ ಮತ್ತು ಶಿವರಾಜ್ R ಮೊಗವೀರ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಶೀಘ್ರದಲ್ಲಿ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಿದೆ ತಂಡ. ಚಿತ್ರೀಕರಣ ಪೂರ್ವ ಕೆಲಸಗಳು ಮುಕ್ತಾಯ ಹಂತದಲ್ಲಿದ್ದು, ಶೂಟಿಂಗ್​ ಬಗ್ಗೆಯೂ ಮಾಹಿತಿ ನೀಡಿಲಿದೆ.