ಮುಂಬೈ: ಸುಶಾಂತ್ ಸಿಂಗ್ಗಾಗಿ ನನ್ನ ಸೋದರನ ಮೂಲಕ ಡ್ರಗ್ಸ್ ಪಡೆಯುತ್ತಿದ್ದೆ ಎಂದು ರಿಯಾ ಚಕ್ರವರ್ತಿ ಈಗಾಗಲೇ ಎನ್ಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈಗ ಅವರ ಸೋದರ ಶೋವಿಕ್ ಇನ್ನೊಂದು ಮಹತ್ವದ ವಿಚಾರವನ್ನು ಎನ್ಸಿಬಿ ಎದುರು ಬಿಚ್ಚಿಟ್ಟಿದ್ದಾನೆ.
ಸುಶಾಂತ್ಗಾಗಿ ಖರೀದಿಸಲಾಗುತ್ತಿದ್ದ ಡ್ರಗ್ಸ್ಗೆ ನನ್ನ ಸೋದರಿ ಹಣ ನೀಡುತ್ತಿರಲಿಲ್ಲ. ಬದಲಿಗೆ ಸುಶಾಂತ್ ಮ್ಯಾನೇಜರ್ ಹಣ ಕೊಡುತ್ತಿದ್ದರು ಎಂದು ಹೇಳಿದ್ದಾನೆ. ಇದನ್ನೂ ಓದಿ: 18 ಸಾವಿರ ಜನರಿಗೆ ಆಕ್ಸ್ಫರ್ಡ್ ವಿವಿ ಲಸಿಕೆ ಪ್ರಯೋಗ; ಮತ್ತೆ ಶುರುವಾಯ್ತು ಕ್ಲಿನಿಕಲ್ ಟ್ರಯಲ್
ನಾವು ಪೆಡ್ಲರ್ ಮೂಲಕ ಖರೀದಿಸುತ್ತಿದ್ದ ಡ್ರಗ್ಸ್ಗೆ ಸುಶಾಂತ್ ಸಿಂಗ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಂಡಾ ಹಣ ನೀಡುತ್ತಿದ್ದ. ಒಂದು ಬಾರಿ ಮಾತ್ರ ರಿಯಾ ತನ್ನ ಕ್ರೆಡಿಟ್ ಕಾರ್ಡ್ನಿಂದ ಹಣ ಕಳಿಸಿದ್ದಳು. ಅದು ಬಿಟ್ಟರೆ ಡ್ರಗ್ಸ್ ಸಂಬಂಧಿತ ಖರ್ಚುವೆಚ್ಚಗಳನ್ನೆಲ್ಲ ಸುಶಾಂತ್ ಮತ್ತು ಅವರ ಮ್ಯಾನೇಜರ್ ಭರಿಸುತ್ತಿದ್ದರು. ವ್ಯವಹಾರವನ್ನೂ ಅವರೇ ನೋಡಿಕೊಳ್ಳುತ್ತಿದ್ದರು ಎಂದು ಶೋವಿಕ್ ಮಾಹಿತಿ ನೀಡಿದ್ದಾನೆ. ಅಷ್ಟೇ ಅಲ್ಲ, ಡ್ರಗ್ಸ್ ವ್ಯವಹಾರದಲ್ಲಿ ನಾವು ನಮ್ಮ ಕೈಯಿಂದ ಸುಶಾಂತ್ಗೆ ಹಣವನ್ನು ನೀಡಲೂ ಇಲ್ಲ..ಅವರಿಂದ ಪಡೆಯಲೂ ಇಲ್ಲ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಗಂಡ-ಹೆಂಡ್ತಿ ನಡುವೆ ಈ ನಾಯಿಯ ಕೂದಲು ತಂದಿಟ್ಟ ಫಜೀತಿ ಅಷ್ಟಿಷ್ಟಲ್ಲ!
ಸುಶಾಂತ್ ದಿನಕ್ಕೆ ನಾಲ್ಕರಿಂದ ಐದು ಬಾರಿ ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂದು ಸೋದರಿ ರಿಯಾ ನನಗೆ ವಾಟ್ಸ್ಆ್ಯಪ್ ಚಾಟ್ನಲ್ಲಿ ತಿಳಿಸಿದ್ದಳು. ನಂತರ ನಾನು ಐದು ಗ್ರಾಂಗಳಷ್ಟು ಗಾಂಜಾ ನೀಡುವುದಾಗಿ ತಿಳಿಸಿದ್ದೆ. ಅದಕ್ಕಾಗಿ ನನ್ನ ಸ್ನೇಹಿತ ಅಬ್ದೆಲ್ ಬಸಿತ್ ಪರಿಹಾರ್ನನ್ನು ಭೇಟಿಯಾಗಿ, ಗಾಂಜಾವನ್ನು ಎಲ್ಲಿಂದ ಸಂಗ್ರಹಿಸಬಹುದು, ಅದರ ಬೆಲೆಯ ಬಗ್ಗೆ ಎಲ್ಲ ಚರ್ಚಿಸಿದೆ. ಬೆಲೆಯನ್ನು ರಿಯಾ ಮತ್ತು ಸ್ಯಾಮ್ಯುಯೆಲ್ಗೆ ತಿಳಿಸಿದ್ದೆ. ನಂತರ ಸ್ಯಾಮ್ಯುಯೆಲ್ ಹಣ ನೀಡಿದ್ದರು. ಇದು ಹೀಗೆ ಮುಂದುವರಿದಿತ್ತು ಎಂದೂ ಹೇಳಿದ್ದಾನೆ.
ಸುಶಾಂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಲಿಂಕ್ಗೆ ಸಂಬಂಧಪಟ್ಟಂತೆ ರಿಯಾ ಹಾಗೂ ಶೋವಿಕ್ನನ್ನು ಎನ್ಸಿಬಿ ಬಂಧಿಸಿದೆ. ಎನ್ಡಿಪಿಎಸ್ ಆ್ಯಕ್ಟ್ನಡಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಜಾಮೀನು ಅರ್ಜಿಯೂ ತಿರಸ್ಕೃತಗೊಂಡಿದೆ. (ಏಜೆನ್ಸೀಸ್)