ಬಾಲಿವುಡ್ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಇಲ್ಲವಾಗಿ ಇಂದಿಗೆ ಒಂದು ವರ್ಷವಾಗಿದೆ. 2020ರ ಜೂನ್ 14ರಂದು ಮುಂಬೈನ ಬಾಂದ್ರಾ ಅಪಾರ್ಟ್ಮೆಂಟ್ನಲ್ಲಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿ ಯಲ್ಲಿ ಪತ್ತೆಯಾಗಿ ಇಡೀ ದೇಶವನ್ನೇ ಶಾಕ್ಗೆ ದೂಡಿತ್ತು. ಅಂದಿನಿಂದ ಇಂದಿನವರೆಗೂ ಅವರ ಸಾವಿನ ಪ್ರಕರಣ ಸಾಕಷ್ಟು ತಿರುಗಳನ್ನು ಪಡೆದುಕೊಂಡಿದೆ.
ನೂರಾರು ಮಂದಿ ವಿಚಾರಣೆ ಎದುರಿಸಿದ್ದಾರೆ. ಊಹಿಸದ ಮಾಹಿತಿಗಳು ಹೊರಬಿದ್ದು ಅಚ್ಚರಿ ಮೂಡಿಸಿವೆ. ಇದು ಸಹಜ ಸಾವಲ್ಲ ಆತ್ಮಹತ್ಯೆ ಎಂದು ದೊಡ್ಡ ಮಟ್ಟದಲ್ಲಿ ತನಿಖೆ ನಡೆದರೂ, ಸಾವಿನ ನಿಗೂಢತೆ ಇನ್ನೂ ಗೊತ್ತಾಗಿಲ್ಲ! ಸುಶಾಂತ್ ಆತ್ಮಹತ್ಯೆ ಸುದ್ದಿ ಹೊರಬೀಳುತ್ತಿದ್ದಂತೆ, ಬೇರೆ ಬೇರೆ ಕೋನಗಳಲ್ಲಿ ಇಡೀ ಬಾಲಿವುಡ್ನಲ್ಲಿ ಸದ್ದು ಮಾಡಿತು. ಅವರ ಸಾವಿಗೆ ನೆಪೋಟಿಸಂ ಕಾರಣ ಎಂಬ ಆರೋಪವನ್ನು ಕಂಗನಾ ಮಾಡುತ್ತಿದ್ದಂತೆ, ಹಲವು ಸ್ಟಾರ್ಗಳು, ನಿರ್ದೇಶಕ, ನಿರ್ಮಾಪಕರ ಹೆಸರೂ ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿತು. ಪ್ರಕರಣ ಕೈಗೆತ್ತಕೊಂಡ ಸಿಬಿಐ, ನಾನಾ ರೀತಿಯಲ್ಲಿ ತನಿಖೆ ನಡಿಸಿದರೂ ಸಾವಿಗೆ ಸ್ಪಷ್ಟ ಕಾರಣ ಮಾತ್ರ ದಕ್ಕಲಿಲ್ಲ. ರಿಯಾ ಚಕ್ರವರ್ತಿ ಕುಟುಂಬದ ವಿರುದ್ಧ ಎ್ಐಆರ್ ದಾಖಲಾದರೆ, ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಾಕುಲ್ ಪ್ರೀತ್ ಸೇರಿ ಹಲವರು ವಿಚಾರಣೆ ಎದುರಿಸಿದರು.
ಸೆಪ್ಟೆಂಬರ್ನಲ್ಲಿ ರಿಯಾ ಜೈಲು ಸೇರಿ ಅಕ್ಟೋಬರ್ನಲ್ಲಿ ಜಾಮೀನಿನ ಮೇಲೆ ಬಿಡುಗಡೆ ಯಾದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಂತಿಮ ವರದಿ ಸಲ್ಲಿಸಿಲ್ಲ. ಇತ್ತ ಸುಶಾಂತ್ ಸಾವಿಗೆ ನ್ಯಾಯ ಸಿಗುವುದಾದರೂ ಯಾವಾಗ ಎಂಬುದು ಅಭಿಮಾನಿ ವಲಯದ ಪ್ರಶ್ನೆ.