ಸಿನಿವಾಣಿ

ಅಕ್ಷಯ್​ಕುಮಾರ್ ಅಭಿನಯದ ಸೂರ್ಯವಂಶಿ ಆಗಮನ

ಅಕ್ಷಯ್ ಕುಮಾರ್ ನಟನೆಯ ಬಹು ನಿರೀಕ್ಷಿತ ‘ಸೂರ್ಯವಂಶಿ’ ಸಿನಿಮಾ ಕೊನೆಗೂ ದೀಪಾವಳಿ ಪ್ರಯುಕ್ತ ಚಿತ್ರಮಂದಿರಕ್ಕೆ ಆಗಮಿಸುತ್ತಿದೆ. ಕರೊನಾ ಹಿನ್ನೆಲೆಯಲ್ಲಿ ಮತ್ತು ಶೇ. 100 ಆಸನ ಭರ್ತಿಗೆ ಅವಕಾಶ ಸಿಗದ ಕಾರಣ, ಚಿತ್ರದ ಬಿಡುಗಡೆ ಮುಂದೂಡುತ್ತಲೇ ಬಂದಿತ್ತು. ಇದೀಗ ಆ ಸುದೀರ್ಘ ಕಾಯುವಿಕೆಗೆ ಪೂರ್ಣ ವಿರಾಮ ಬಿದ್ದಿದೆ. ವಿಶ್ವದಾದ್ಯಂತ ಶುಕ್ರವಾರ ‘ಸೂರ್ಯವಂಶಿ’ ಬಿಡುಗಡೆ ಆಗುತ್ತಿದೆ.

ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಜತೆಗೆ ಅಜಯ್ ದೇವಗನ್, ರಣವೀರ್ ಸಿಂಗ್, ಕತ್ರಿನಾ ಕೈಫ್ ತಾರಾಗಣದಲ್ಲಿದ್ದಾರೆ.