ಬೆಂಗಳೂರು: ‘ಸಿಂಪಲ್’ ಸುನಿ ಮತ್ತು ಗಣೇಶ್ ‘ಚಮಕ್’ ನಂತರ ಮತ್ತೆ ಒಂದಾಗಿದ್ದು, ಇದೀಗ ಇದೇ ಟೀಮ್ಂದ ನಾಯಕಿ ಆಯ್ಕೆ ಕುರಿತ ವಿಚಾರ ಹೊರಬಿದ್ದಿದೆ. ತೆಲುಗು, ತಮಿಳಿನಲ್ಲಿ ಗುರುತಿಸಿಕೊಂಡಿರುವ ನಟಿ ಸುರಭಿ, ಗಣೇಶ್ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದಾರೆ.
ಹಾಗಾದರೆ ಚಿತ್ರದಲ್ಲಿ ಸುರಭಿ ಪಾತ್ರ ಎಂಥದ್ದು? ಅದಕ್ಕೂ ನಿರ್ದೇಶಕ ಸುನಿ ಉತ್ತರಿಸಿದ್ದಾರೆ. ‘ಸುರಭಿ ಈ ಚಿತ್ರದಲ್ಲಿ ಖಾಸಗಿ ವಾಹಿನಿಯ ಆಂಕರ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಕೋರ್ಟ್ನಲ್ಲಿ ಮತ್ತು ರಿಯಾಲಿಟಿ ಶೋನಲ್ಲಿ ನಡೆಯುವ ಕಥೆಯಾಗಿದೆ. ಗಣೇಶ್ ಅವರ ಪಾತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುವೆ. ‘ಚಮಕ್’ ಚಿತ್ರದಂತೆ ಈ ಬಾರಿಯೂ ಹೊಸ ಕಥೆಯನ್ನು ಹೇಳುತ್ತೇನೆ’ ಎನ್ನುತ್ತಾರೆ ಸುನಿ. ಸುನಿ ಸದ್ಯ ‘ಅವತಾರ ಪುರುಷ’ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಸದ್ಯದಲ್ಲೆ ಅವೆಲ್ಲವನ್ನು ಮುಗಿಸಿ ಇದೇ 24ರಿಂದ ಚಿತ್ರದ ಶೂಟಿಂಗ್ ಆರಂಭಿಸಲಿದ್ದಾರೆ. ಈ ಚಿತ್ರವನ್ನು ‘ಭರಾಟೆ’ ಚಿತ್ರದ ನಿರ್ಮಾಪಕ ಸುಪ್ರಿತ್ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಮತ್ತೊಬ್ಬ ನಾಯಕಿಯೂ ಇರಲಿದ್ದು, ಅದ್ಯಾರು ಎಂಬುದನ್ನು ಸದ್ಯದಲ್ಲೆ ಚಿತ್ರತಂಡ ಹೇಳಲಿದೆ.
ಗಣೇಶ್ ಅವರು ಹಿಂದೆ ಕಾಣಿಸಿಕೊಂಡಿರದ ಪಾತ್ರ ಇದು, ಜನ ಖಂಡಿತ ಇಷ್ಟಪಡುವಂತಹ ಸಿನಿಮಾ ಇದಾಗಲಿದೆ. | ಸುನಿ ನಿರ್ದೇಶಕ