ಸಂಗ್ರಹ ಚಿತ್ರ 
ಸಿನಿವಾಣಿ

'ನಾವೇನು ಮಾಡ್ಬಾರ್ದು ಎನ್ನುವ ಪಾಠ ಕಲಿಬೇಕು'; ಧನ್ವೀರ್​-ವಿಜಯಲಕ್ಷ್ಮಿ ಮಧ್ಯೆ ಜಟಾಪಟಿ ಬೆನ್ನಲ್ಲೇ ಸುದೀಪ್ ಹಳೇ ಹೇಳಿಕೆ ವೈರಲ್..Sudeep

  • ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ-ಧನ್ವೀರ್​ ಮಧ್ಯೆ ಗಲಾಟೆ.

  • ಸುದೀಪ್​​ ಸಲಹೆ ಕೊಟ್ಟಿದ್ದ ಹಳೆಯ ಹೇಳಿಕೆ ಇಂಟರ್​​ನೆಟ್​ನಲ್ಲಿ ವೈರಲ್.

  • ಸಪೋರ್ಟ್​ ಮಾಡ್ದೋರು ಗೂಬೆಗಳ ತರ ಕಾಣ್ತಾರೆ ಎಂದಿದ್ದ ಸುದೀಪ್.

'ಯಾರೋ ಒಬ್ಬರು ಬರ್ತಾರೆ, ನನಗೆ ಸಿಕ್ಕಾಪಟ್ಟೆ ಮನೆಯಲ್ಲಿ ಒಡಿತಿದ್ದಾರೆ ಅಂತ ಸಪೋರ್ಟ್ ಕೇಳಿ ಇನೊಬ್ಬರ ಮನೆಗೆ ಬರ್ತಾರೆ. ಅವರು ಸಮಸ್ಯೆ ಬಗೆಹರಿಸ್ತಾರೆ. ಆದರೆ, ಕೊನೆಗೆ ಆ ಇಬ್ಬರು ರಾಜಿಯಾಗ್ತಾರೆ. ಸಪೋರ್ಟ್​ ಮಾಡಿದವರು ಗೂಬೆಗಳಾಗ್ತಾರೆ' ಎಂದು ಕಿಚ್ಚ ಸುದೀಪ್​ ಮಾತನಾಡಿರುವ ವಿಡಿಯೋವೊಂದು ಧನ್ವೀರ್​ ಮತ್ತು ವಿಜಯಲಕ್ಷ್ಮಿ ನಡುವಿನ ಕಾನೂನಿನ ಗುದ್ದಾಟದ ಬೆನ್ನಲ್ಲೇ ವೈರಲ್​​ ಆಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಜೈಲಿನಲ್ಲಿದ್ದಾರೆ. ಆದರೆ, ಇತ್ತ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ನಟನ ಆಪ್ತ ಧನ್ವೀರ್​ ಮಧ್ಯೆ ದೊಡ್ಡ ಕೋಲಾಹಲವೇ ನಡೆದಿದೆ. ಇಬ್ಬರು ಸಹ ರಾಜರಾಜೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಿಸಿರುವುದು ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಕಳೆದ ವರ್ಷ ದರ್ಶನ್ ಅವರಿಗೆ ಜಾಮೀನು ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಧನ್ವೀರ್ ಅವರು ನ್ಯಾಯಾಲಯದಲ್ಲಿ ಶೂರಿಟಿ (ಜಾಮೀನು ಸಹಿ) ನೀಡುವ ಮೂಲಕ ದರ್ಶನ್ ಕುಟುಂಬಕ್ಕೆ ಹೆಗಲಾಗಿದ್ದರು. ಆನಂತರ ಹಲವು ಬಾರಿ ದರ್ಶನ್​ ಅವರನ್ನು ಭೇಟಿ ಮಾಡಿ ತಾವು ಅವರಿಗೆ ಎಷ್ಟು ಆಪ್ತರು ಎನ್ನುವುದನ್ನು ಅರ್ಥ ಮಾಡಿಸಿದ್ದರು. ಆದರೆ, ಇಬ್ಬರ ನಡುವೆ ಭಿನ್ನಾಭಿಪ್ರಾಯ ವಿಕೋಪಕ್ಕೆ ತಿರುಗಿದೆ.

ಸುದೀಪ್ ಏನಂದಿದ್ರು?

ಈ ಸಮಯಕ್ಕೆ ಸುದೀಪ್​ ಕೊಟ್ಟಿರುವ ಸಲಹೆ ಸಖತ್​​​ ಹೊಂದಿಕೆಯಾಗುತ್ತದೆ ಎಂದು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆ ವಿಡಿಯೋದಲ್ಲಿ ಕಿಚ್ಚ ಮಾತನಾಡಿದ್ದು ಹೀಗೆ, 'ಯಾರೋ ಒಬ್ಬರು ಬರುತ್ತಾರೆ. ನಮ್ಮ ಮನೆಯಲ್ಲಿ ಸಿಕ್ಕಾಪಟ್ಟೆ ಒಡಿತಿದ್ದಾರೆ ಎಂದು ಮತ್ತೊಬ್ಬರ ಮನೆಗೆ ಹೋಗಿ ಸಪೋರ್ಟ್​ ಕೇಳ್ತಾರೆ. ಅವರು ಸಪೋರ್ಟ್ ಮಾಡ್ತಾರೆ. ಕೊನೆಗೆ ಅವರಿಬ್ಬರು ಒಂದಾಗ್ತಾರೆ. ಸಪೋರ್ಟ್​ ಮಾಡಿದವರು ಒಡೆದಾಡಿಕೊಳ್ತಿರ್ತಾರೆ. ಇದ್ರಿಂದ ಕಲಿಯಬೇಕಾದ ಪಾಠ ಏನಂದ್ರೆ ಮನೆಗೆ ಹೋಗ್ಬೇಕು ಟಿವಿ ಆನ್​ ಮಾಡಿ ನೋಡಿ,ನಾವು ಏನನ್ನು ಮಾಡಬಾರದು ಅನ್ನೋದನ್ನು ಕಲಿಯಬೇಕು' ಎಂದಿದ್ದಾರೆ. ಅದನ್ನು ಅಭಿಮಾನಿಗಳು ಈಗ ವೈರಲ್ ಮಾಡುತ್ತಾ..ನೀವಂದು ಮಾತನಾಡಿದ್ದು..ಇಂದಿನ ಘಟನೆಗೆ ಹೋಲಿಕೆಗೆ ಹೊಂದಿಕೊಳ್ಳುತ್ತಿದೆ ಎಂದು ಕಾಮೆಂಟ್​​ಗಳ ಸುರಿಮಳೆ ಸುರಿಸುತ್ತಿದ್ದಾರೆ.

ನೆಟ್ಟಿಗರು ಏನಂದ್ರು?

ಈ ಹಿಂದೆ ಸುದೀಪ್​ ಸರ್ ಕೊಟ್ಟ ಹೇಳಿಕೆ ಎಷ್ಟು ಅರ್ಥಪೂರ್ಣವಾಗಿದೆ ಎಂದು ಒಬ್ಬರು ಬರೆದುಕೊಂಡಿದ್ದರೆ, ಮತ್ತೊಬ್ಬ ಎಕ್ಸ್ ಬಳಕೆದಾರ, ಸುದೀಪ್​ ಸರ್ ಹೇಳಿಕೆ ಬಗ್ಗೆ ಈಗ ತಿಳಿಯುತ್ತಿದೆ ಎಂದಿದ್ದಾರೆ.

ಏನಾಗಿದೆ ಧನ್ವೀರ್​- ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಧ್ಯೆ?

ದರ್ಶನ್ ಪಿಎ ಹಾಗೂ ವಿಜಯಲಕ್ಷ್ಮಿ ಅವರಿಗೆ ಆಪ್ತನಾಗಿರುವ ನಾಗರಾಜು ಧನ್ವೀರ್​ ವಿರುದ್ಧ ದೂರು ನೀಡಿದ್ದರು. ಜೊತೆಗೆ, ಧನ್ವಿರ್ ಬೈದಿರುವ ಮೊಬೈಲ್ ಆಡಿಯೋ ದಾಖಲೆಗಳನ್ನೂ ಪೊಲೀಸರಿಗೆ ಒದಗಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಧನ್ವೀರ್ ಅವರ ತಂದೆ ತಿಮ್ಮಗೌಡ ಸಹ ವಿಜಯಲಕ್ಷ್ಮಿ ಹಾಗೂ ಇನ್ನೂ ಕೆಲವರ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಸಂಬಂಧ ಸುದ್ದಿಗಾರರ ಜತೆ ಮಾತನಾಡಿರುವ ಧನ್ವೀರ್​, ದೂರು ಕೊಡಲಿ. ಇದಾದ ಮೇಲೂ ನಾನು ಆತನಿಗೆ ನಿಂದನೆ ಮಾಡಿಯೇ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು. ಒಬ್ಬ ವ್ಯಕ್ತಿ ಸುಮ್ಮನೆ ನಿಂದಿಸುವುದಿಲ್ಲ. ಯಾವ ಕಾರಣಕ್ಕೆ ನಿಂದಿಸಿದೆ ಎಂಬುದು ಬೇಕಲ್ವಾ? ಆ ಕಾರಣ ಹೊರಗಡೆ ಬಂದರೆ ಯಾರ ಮ್ಯಾನೇಜ‌ರ್ ಅಂತಿದ್ದಾರಲ್ಲಾ ಈಗ, ಅವರ ಬಂಡವಾಳ ಬಯಲಿಗೆ ಬರಲಿದೆ. ಮುಖವಾಡ ಕಳಚಿ ಬೀಳುವ ಸಮಯ ಬಂದಿದೆ. ಮುಖವಾಡ ಕಳಚಲು ನಾವು ಸಿದ್ದ ಎಂದು ಹೇಳಿದರು, (ಏಜೆನ್ಸೀಸ್).