ಜೈಲರ್ 2, ತಮಿಳು ನಟ ರಜಿನಿಕಾಂತ್
- ರಜಿನಿಕಾಂತ್ ನಟನೆಯ ಬಹುನಿರೀಕ್ಷಿತ 'ಜೈಲರ್ 2' ರಿಲೀಸ್ ಡೇಟ್ ಫಿಕ್ಸ್
- ಇದೇ ಅಕ್ಟೋಬರ್ನಲ್ಲಿ ಸಿನಿಮಾ ಅಭಿಮಾನಿಗಳ ಎದುರು
- ಹೊಸ ಲುಕ್ನಲ್ಲಿ ರಜಿನಿ ನೋಡಲು ಫ್ಯಾನ್ಸ್ ಥ್ರಿಲ್
Jailer 2: ತಮಿಳಿನ ಸೂಪರ್ಸ್ಟಾರ್, ನೆಚ್ಚಿನ ಅಭಿಮಾನಿಗಳ ತಲೈವಾ ರಜಿನಿಕಾಂತ್ ಅಭಿನಯದ ಹಾಗೂ ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಬಹುನಿರೀಕ್ಷಿತ 'ಜೈಲರ್ 2' ಚಿತ್ರದ ರಿಲೀಸ್ ಡೇಟ್ ಕಡೆಗೂ ಅಧಿಕೃತವಾಗಿ ಹೊರಬಿದ್ದಿದೆ.
ಕಲಾನಿಧಿ ಮಾರನ್ ನಿರ್ಮಾಣದಲ್ಲಿ ಮೂಡಿಬಂದಿರುವ ಹೈಬಜೆಟ್ ಚಿತ್ರದಲ್ಲಿ ರಜನಿ ಅವರ ಜೊತೆಗೆ ಇತರ ಚಿತ್ರರಂಗದ ದಿಗ್ಗಜ ನಟರು ಕೂಡ ನಟಿಸಿದ್ದು, ವಿಶೇಷ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಒಂದಷ್ಟು ವಿಳಂಬದ ಬಳಿಕ ರಿಲೀಸ್ ದಿನಾಂಕವನ್ನು ಹಂಚಿಕೊಂಡಿರುವ ಚಿತ್ರತಂಡ, ಇದೇ ಅಕ್ಟೋಬರ್ 15ಕ್ಕೆ 'ಜೈಲರ್ 2' ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ತಿಳಿಸಿದೆ. ಇದರೊಟ್ಟಿಗೆ ರಜಿನಿ ಅಭಿಮಾನಿಗಳ ಹುಬ್ಬೇರಿಸುವಂತ ಟೀಸರ್ವೊಂದನ್ನು ಕೂಡ ಹರಿಬಿಟ್ಟಿದೆ.
ಟೀಸರ್ ತುಣುಕಿನಲ್ಲಿ ರಜಿನಿ ಅವರದ್ದು ಹೊಸ ಲುಕ್ ಎನ್ನಿಸುವಂತೆ ಕಂಡುಬಂದಿದ್ದೇ ಆದರೂ ಚಿತ್ರತಂಡ ಅಷ್ಟಾಗಿ ಯಾವುದನ್ನೂ ರಿವೀಲ್ ಮಾಡಿಲ್ಲ. ಟೀಸರ್ನಲ್ಲಿ ಬಿಜಿಎಂ ಸದ್ದು ಮಾಡಿದರೆ, ಯಾರೆಲ್ಲ ಕಲಾವಿದರು ನಟಿಸಿದ್ದಾರೋ, ಅವರ ಪಾತ್ರಗಳ ಒಂದು ಸೆಕೆಂಡ್ನಲ್ಲಿ ಪಾಸಿಂಗ್ ಶಾಟ್ ಆಗಿ ತೋರಿಸಲಾಗಿದೆ. ಮೇಲ್ನೋಟಕ್ಕೆ ಚಿತ್ರಪ್ರೇಮಿಗಳಲ್ಲಿ ಕೌತುಕ ಕೆರಳಿಸುವಲ್ಲಿ ನಿರ್ದೇಶಕರು ಒಂದು ಹೆಜ್ಜೆ ಮುಂದೋಗಿರುವುದಂತು ಇಲ್ಲಿ ಸ್ಪಷ್ಟ. ಕಳೆದ ವರ್ಷ ಕೂಲಿ ಸಿನಿಮಾದಲ್ಲಿ ಯಾರೆಲ್ಲ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ ಚಿತ್ರತಂಡ, ಜೈಲರ್-2 ಚಿತ್ರದಲ್ಲಿಯೂ ಅದನ್ನೇ ಫಾಲೋ ಮಾಡಿದೆ.
ಚಿತ್ರಕ್ಕೆ ಎಂದಿನಂತೆ ಸೂಪರ್ಹಿಟ್ ಮ್ಯೂಸಿಕಲ್ ಕಂಪೋಸರ್ ಅನಿರುದ್ಧ್ ರವಿಚಂದ್ರನ್ ಅವರೇ ಸಂಗೀತ ನೀಡಿದ್ದಾರೆ. ರಜಿನಿಕಾಂತ್, ಮಿರ್ನಾ ಮೆನನ್, ಮೋಹನ್ ಲಾಲ್, ಹ್ಯಾಟ್ರಿಕ್ ಹೀರೋ ಶಿವಕಾಜ್ಕುಮಾರ್, ಹೃತಿಕ್ ರೋಷನ್, ಮೋಹನ್ ಲಾಲ್, ರಮ್ಯ ಕೃಷ್ಣನ್ ಸೇರಿದಂತೆ ದಿಗ್ಗಜ ಕಲಾವಿದರೇ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಆದರೆ, ಇದೆಷ್ಟು ನಿಜ ಎಂಬುದನ್ನು ತಿಳಿಯಲು ಸಿನಿಮಾ ರಿಲೀಸ್ ಆದಾಗಲೇ ಚಿತ್ರಮಂದಿರಗಳಲ್ಲಿ ನೋಡಿ ಖಚಿತಪಡಿಸಿಕೊಳ್ಳಬೇಕಿದೆ,(ಏಜೆನ್ಸೀಸ್).