ಬೆಂಗಳೂರು: ಇಂದು 43ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಂಸದೆ ಸುಮಲತಾ ಅಂಬರೀಷ್ ವಿಶೇಷವಾಗಿ ಜನ್ಮದಿನದ ಶುಭಾಶಯ ಹೇಳಿದ್ದಾರೆ.
ನನ್ನ ಪ್ರೀತಿಯ ಹಿರಿಯ ಮಗ ದರ್ಶನ್ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿನ್ನ ಕಠಿಣ ಪರಿಶ್ರಮದಿಂದಲೇ ಒಂದು ಉತ್ತಮ ಸ್ಥಾನಕ್ಕೆ ಏರಿದ್ದೀಯಾ. ಆ ದೇವರು ನಿನಗೆ ಅದ್ಭುತ ಯಶಸ್ಸು, ಕೀರ್ತಿ, ಸಮೃದ್ಧಿ ಕೊಟ್ಟು ಆಶೀರ್ವದಿಸಲಿ. ನಿನ್ನ ಬದುಕಲ್ಲಿ ಸಂತೋಷ, ಆರೋಗ್ಯ, ಶಾಂತಿ ಸದಾ ನೆಲೆಸಲಿ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಕೊನೆಯಲ್ಲಿ.. ಅಭಿ ಹಾಗೂ ನಿನ್ನ ಪ್ರೀತಿಯ ಮದರ್ ಇಂಡಿಯಾರಿಂದ ಪ್ರೀತಿಯ ಹಾರೈಕೆಗಳು ನಿನಗೆ ಎಂದು ಬರೆದಿದ್ದಾರೆ. ಜತೆಗೆ ತಮ್ಮ ಹಾಗೂ ದರ್ಶನ್ ಅವರ ಫೋಟೋವನ್ನು ಕೊಲ್ಯಾಜ್ ಮಾಡಿ ಪೋಸ್ಟ್ ಮಾಡಿದ್ದಾರೆ.
ದರ್ಶನ್ ಅವರು ಸುಮಲತಾ ಅವರಿಗೆ ಪ್ರೀತಿಯಿಂದ ಮದರ್ ಇಂಡಿಯಾ ಎಂದೇ ಕರೆಯುತ್ತಾರೆ ಎಂಬುದು ಗೊತ್ತಿರುವ ವಿಚಾರವೇ. ಅದೇ ಹೆಸರನ್ನು ಉಲ್ಲೇಖಿಸಿ ಇದೀಗ ಸುಮಲತಾ ವಿಶ್ ಮಾಡಿದ್ದಾರೆ.