ಸಿನಿವಾಣಿ

ಗಗನ್​ ಅಮ್ಮನ ರೇಟ್​​ ಕೇಳಿದ್ದ ಗಾನವಿ ವಿರುದ್ಧ ಕಿಚ್ಚ ಕಿಡಿ; 'ಅಮ್ಮನ ಕಳ್ಕೊಂಡಿದ್ದೀವಿ ನಾವು' ಎಂದು ವೇದಿಕೆಯಲ್ಲೇ ಅತ್ತ ಸುದೀಪ್​

  • ಗಗನ್​ ಅಮ್ಮನ ರೇಟ್​ ಕೇಳಿದ ಗಾನವಿಗೆ ಸಖತ್​ ಕ್ಲಾಸ್ ತಗೊಂಡ ಸುದೀಪ್

  • ನಿಮ್ಮ ಜಗಳಕ್ಕೆ ಅಮ್ಮಂದಿರನ್ನ ಯಾಕೆ ಎಳಿತೀರಿ ಎಂದು ಕಿಡಿಕಾರಿದ ಕಿಚ್ಚ

  • ಮಾನವೀಯತೆ, ಮನುಷ್ಯತ್ವ ಇಲ್ಲದಿದ್ದರೆ ಇರ್ಲೇಬೇಡಿ ಎಂದು ಸುದೀಪ್

Biggboss Kannada 13: ಬಿಗ್​​ಬಾಸ್ ಮನೆಯಲ್ಲಿ ಕಳೆದ ವಾರ ಗಂಧರ್ವರು ವರ್ಸಸ್​ ರಾಕ್ಷಸರು ಟಾಸ್ಕ್​ ವೇಳೆ ನಡೆದ ಘಟನೆಯು ವೀಕ್ಷಕರನ್ನು ಮಾತ್ರವಲ್ಲದೇ, ಬಿಗ್​ಬಾಸ್ ಸ್ಪರ್ಧಿಗಳು ತತ್ತರಿಸಿ ಹೋಗುವಂತೆ ಮಾಡಿತ್ತು. ಮಹಾನ್​ ಕವಿ ಮಂಜನ ಅತಿರೇಕದ ಮಾತುಗಳು ಮತ್ತು ಗಾನವಿ ಮತ್ತು ಗಗನ್​ ನಡುವೆ ನಡೆದ ಅಸಭ್ಯ ವಾದ ವಿವಾದವು ಇರಿಟೇಟ್​ ಮಾಡಿತ್ತು. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಸುದೀಪ್​ ಅವರು ಅಮ್ಮನ ಬಗ್ಗೆ ಮಾತನಾಡಿ ಭಾವುಕರಾದ ವಿಡಿಯೋ ಸಖತ್​ ಸೆನ್ಸೇಷನ್​ ಕ್ರಿಯೇಟ್ ಮಾಡಿದೆ. ಸುದೀಪ್​ ಅವರಿಗೆ ತಾಯಿ ಬಗ್ಗೆ ಇರುವ ಗೌರವವನ್ನು ನೆಟ್ಟಿಗರು ಕೊಂಡಾಡಿದ್ದಾರೆ.

ಹೌದು, ಟಾಸ್ಕ್​ ಆಡುವ ಭರದಲ್ಲಿ ಹಾಗೂ ಗಗನ್​ನನ್ನು ನಿಂದಿಸುವ ಭರದಲ್ಲಿ ಗಾನವಿ ಅವರ ಕುಟುಂಬಸ್ಥರನ್ನು ಎಳೆದು ತಂದಿದ್ದರು. 'ಗಗನ್ ತಾಯಿ ರೇಟ್' ಎಷ್ಟು ಎಂದು ಕೇಳಿದ್ದರು, ಈ ವಿಚಾರವನ್ನು ಉಲ್ಲೇಖಿಸಿದ ಸುದೀಪ್​ ಅವರು ತೀವ್ರ ಕಿಡಿಕಾರಿದರು.

ಸುದೀಪ್​ ಅತ್ತಿದ್ಯಾಕೆ?

'ಗಾನವಿ ಅವ್ರೆ ನೀವ್ ಏನ್ ಹೇಳಿದ್ದು ನಿಮ್ಮ ಅಮ್ಮನ ರೇಟ್ ಎನದು' ಎಂದು ಮ್ಯೂಟ್ ಮಾಡಿದರು ಸುದೀಪ್. ಗಗನ್​ಗೆ ಬಯ್ಯುವ ಹಾಗಿದ್ರೆ ಅವ್ರಿಗೆ ಬೈದು ಸುಮ್ಮನಾಗಿ ಅವರ ಕುಟುಂಬಸ್ಥರನ್ನು ಯಾಕೆ ತರ್ತೀರಿ. ವುಮನ್​ ಕಾರ್ಡ್​ ಪ್ಲೇ ಮಾಡೋಕು ಮುಂಚೆ ನೀವು ಬೈದಿದ್ದು ಅವ್ರ ತಾಯಿಗೆ. ಗಗನ್ ತಾಯಿಗೆ ನಾನು ಈ ವೇದಿಕೆಯಿಂದ ಕ್ಷಮೆ ಕೇಳುತ್ತೇನೆ' ಎಂದು ಭಾವುಕರಾದರು.

'ಅಮ್ಮನನ್ನು ಕಳೆದುಕೊಂಡಿದ್ದೇವೆ ನಾವು. ಅವರ ತಾಯಿಯನ್ನ ಕರೆಯಿಸಿ. ಕ್ಷಮೆ ಕೇಳ್ತೇನೆ. ನಿಮ್ಮ ಜಗಳಕ್ಕೆ ತಾಯಂದಿರನ್ನ ಯಾಕೆ ತರ್ತೀರಾ? ನಿಮ್ಮನ್ನ ಹೆತ್ತಿರುವುದೇ ತಪ್ಪಾ?. 'ದಿಸ್​ ಇಸ್ ಅಗ್ಲಿ ಎಂದು ಕಣ್ಣೀರು ಹಾಕಿದರು. ಕೊಂಚ ಹೊತ್ತು ಏನೂ ಮಾತನಾಡದೆ ಅತ್ತರು.

'ಮಾನವೀಯತೆ, ಮಾರಲ್​ ವ್ಯಾಲ್ಯೂ ಇಲ್ಲದೆ ಇರುವವರು ದಯವಿಟ್ಟು ಈ ಬಿಗ್​ಬಾಸ್​ನಲ್ಲಿ ಇರಬೇಡಿ. ಅವರ ಪ್ಯಾಂಟ್​ ಬೆಲೆ ಕಟ್ಟೋಕೆ ನಮಗೆ ಯೋಗ್ಯತೆ ಇಲ್ಲ. ಆದರೆ ತಾಯಿ ಬೆಲೆ ಕಟ್ಟೋಕೆ ಅರ್ಹತೆ ಅಲ್ಲ. ಸಾಧ್ಯವೇ ಇಲ್ಲ. ನಿಮ್ಮ ತಾಯಿ ನಿಮ್ಮ ಬಗ್ಗೆ ಈಗ ಹೆಮ್ಮೆ ಪಟ್ಟುಕೊಂಡಿರಬೇಕು' ಎಂದು ಗಾನವಿ ಬಗ್ಗೆ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದರು.

ಇಂಟರ್ನೆಟ್​ನಲ್ಲಿ ಸುದೀಪ್​ ಬಗ್ಗೆ ಮೆಚ್ಚುಗೆ

'ಕಿಚ್ಚ ಸುದೀಪ್ ಸರ್ ಅವರು ತಮ್ಮ ತಾಯಿಯ ಮೇಲೆ ತೋರಿಸುವ ಪ್ರೀತಿ, ಗೌರಿ ಮತ್ತು ಕಾಳಜಿಯ ವಿಚಾರದಲ್ಲಿ ಪ್ರತಿಯೊಬ್ಬರಿಗೂ ನಿಜಕ್ಕೂ ಒಂದು ಸ್ಫೂರ್ತಿ. ಅವರು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ, ತಮ್ಮ ತಾಯಿಯ ಮುಂದೆ ಒಬ್ಬ ಸಣ್ಣ ಮಗನಂತೆ ಇರುವುದು ಕೋಟ್ಯಂತರ ಜನರ ಮನಸ್ಸನ್ನು ಗೆಲ್ಲುವಂತೆ ಮಾಡಿದೆ' ಎಂದು ನೆಟ್ಟಿಗರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

'ಕಿಚ್ಚ ಸುದೀಪ್ ಸರ್ ಅವರ ತಾಯಿಯ ಮೇಲಿನ ಪ್ರೀತಿ, ಗೌರವ ಮತ್ತು ಭಾವನೆಗಳು ಅವರ ಹೃದಯದ ಕೋಮಲತೆಯನ್ನು ಸುಂದರವಾಗಿ ಬಿಂಬಿಸುತ್ತವೆ. ಅವರು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ, ತಮ್ಮ ತಾಯಿಯ ಮುಂದೆ ಒಬ್ಬ ಪುಟ್ಟ ಮಗನಂತೆ ಉಳಿಯುವ ಆ ರೀತಿ ನಿಜಕ್ಕೂ ನಮ್ಮ ಮನಸ್ಸನ್ನು ಸೆಳೆಯುತ್ತದೆ' ಎಂದು ಸುಪ್ರೀತ್​ ಗೌಡ ಎಂಬುವವರು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).