ಸಿನಿವಾಣಿ

ಹಾಟ್​​​ಲುಕ್​​​ನಲ್ಲಿ ಹಾಲಿವುಡ್​ ಹೀರೋಯಿನ್​ನಂತೆ ಕಣ್ಮನ ಸೆಳೆದ ಸಾನ್ಯಾ ಐಯ್ಯರ್​...!Sanya Iyyer

ಬಿಗ್​ ಬಾಸ್​ ಸ್ಪರ್ಧಿಯಾಗಿದ್ದ ನಟಿ ಸಾನ್ಯಾ ಅಯ್ಯರ್​ ಇದೀಗ ಸ್ಯಾಂಡಲ್​ವುಡ್​ನಲ್ಲಿ ಮಿಂಚಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸದಾ ಸ್ಟೈಲಿಶ್ ಹಾಗೂ ಬೋಲ್ಡ್ ಫೋಟೋಶೂಟ್​ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ. ಸಖತ್ ಹಾಟ್​ ಆಗಿ ನಟಿ ಸಾನ್ಯಾ ಅಯ್ಯರ್ ಫೋಟೋಗಳಿಗೆ ಪೋಸ್​ ಕೊಟ್ಟಿದ್ದಾರೆ.

ಪುಟ್ಟಗೌರಿ ಪಾತ್ರ ಮಾಡಿ ಇಡೀ ಕರುನಾಡ ಜನರ ಮನಸ್ಸು ಗೆದ್ದಿದ್ದರು ನಟಿ ಸಾನ್ಯಾ ಐಯ್ಯರ್, ಇದೀಗ ನಟಿ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಸಖತ್​ ಸ್ಟೈಲಿಶ್​ ಫೋಟೋಗಳನ್ನು ನಟಿ ಸಾನ್ಯಾ ಹಂಚಿಕೊಂಡಿದ್ದಾರೆ. ಸಖತ್ ಹಾಟ್​ ಆಗಿ ಫೋಟೋಗಳಿಗೆ ಪೋಸ್​ ಕೊಟ್ಟಿದ್ದಾರೆ.

ಸ್ಟಾರ್ ಡೈರೆಕ್ಟರ್​ ಇಂದ್ರಜಿತ್ ಲಂಕೇಶ್​ ಸಿನಿಮಾದಲ್ಲಿ ಸಾನ್ಯಾ ಅಯ್ಯರ್​ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್​ಗೆ ಸಾನ್ಯಾ ಜೋಡಿಯಾಗಿದ್ರು.

ಸಾನ್ಯಾ ಅಯ್ಯರ್ ಅವರ ಹೊಸ ಫೋಟೋಶೂಟ್​ನಲ್ಲಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಅವರ ಹೇರ್​ಸ್ಟೈಲ್ನಲ್ಲಿ ಬೇಬಿ ಬಾಪ್​​ ಮಾಡಿಸಿಕೊಂಡಿದ್ದಾರೆ.

ಸಾನ್ಯಾ ಅಯ್ಯರ್ ಅವರಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಅವ ವರು ‘ಗೌರಿ’ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟಿದ್ದಾರೆ. ಈ ಮೂಲಕ ಚಿತ್ರರಂಗದಲ್ಲಿ ಅವರು ಖಾತೆ ತೆರೆದಿದ್ದಾರೆ.

ಸಾನ್ಯಾ ಅಯ್ಯರ್ ಅವರು ಹೊಸ ಸಿನಿಮಾ ಘೋಷಣೆ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದು, ಸದ್ಯ ಸಾನ್ಯಾ ಅವರ ಹೊಸ ಫೋಟೋಶೂಟ್​ ವೈರಲ್​ ಆಗಿದೆ.