ಎಲ್ಲ ಚಿತ್ರರಂಗಗಳಲ್ಲೂ ಐತಿಹಾಸಿಕ ಟನೆಗಳ ಕುರಿತು, ಸಾಧಕರ ಬಯೋಪಿಕ್, ಸ್ವಾತಂತ್ರ$್ಯ ಹೋರಾಟ, ವಿವಾದಗಳು ಸೇರಿ ಹಲವು ನೈಜ ಘಟನೆಯಾಧಾರಿತ ಸಿನಿಮಾಗಳು ಬಂದಿವೆ, ಬರುತ್ತಿವೆ. ಅದೇ ಸಾಲಿಗೆ ಇದೀಗ ಶ್ರೀ ಶ್ರೀ ರವಿಶಂಕರ್ ಗುರೂಜಿ ಮಧ್ಯಸ್ಥಿಕೆ ವಹಿಸಿ ಕೊಲಂಬಿಯಾ ದೇಶದ 52 ವರ್ಷಗಳ ಆಂತರಿಕ ಯುದ್ಧವನ್ನು ಬಗೆಹರಿಸಿದ ಘಟನೆಯೂ ಸೇರಿಕೊಳ್ಳಲಿದೆ. "ದೇಖ್ ಇಂಡಿಯನ್ ಸರ್ಕಸ್', "ಚಲೋ ಜೀತೇ ಹೈ', "ಮಲಾಲ್' ಖ್ಯಾತಿಯ ಬಾಲಿವುಡ್ ನಿರ್ಮಾಪಕ ಮಹಾವೀರ್ ಜೈನ್ ಮತ್ತು "ಪಠಾಣ್', "ವಾರ್', "ಫೈಟರ್' ಸಿನಿಮಾಗಳ ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಈ ಬಗ್ಗೆ ಇತ್ತೀಚೆಗಷ್ಟೆ ಅಧಿಕೃತ ಘೋಷಣೆ ಮಾಡಿರುವ ನಿರ್ಮಾಪಕ ಮಹಾವೀರ್ ಜೈನ್, "ಇದು ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಜೀವನದಲ್ಲಿ ನಡೆದ ನಿಜ ಘಟನೆಯಾಧಾರಿತ ಇಂಟರ್ನ್ಯಾಷನಲ್ ಥ್ರಿಲ್ಲರ್ ಚಿತ್ರವಾಗಿರಲಿದೆ. ಶ್ರೀಗಳ ಮಧ್ಯಸ್ಥಿಕೆಯಲ್ಲಿ 52 ವರ್ಷಗಳ ಕೊಲಂಬಿಯಾದ ಅಂತರ್ಯುದ್ಧ ಒಂದೇ ಒಂದು ಬುಲೆಟ್ ಸಿಡಿಯದೇ ಶಾಂತರೂಪದಲ್ಲಿ ಬಗೆಹರಿಯಿತು. ಇಂದಿನ ಪರಿಸ್ಥಿತಿಯಲ್ಲಿ ಇಂತಹ ಕಥೆಯನ್ನು ಹೇಳಲೇಬೇಕಾದ ಅನಿವಾರ್ಯವಿದೆ. ಒಂದು ವಿಶ್ವ, ಒಂದು ಕುಟುಂಬ ಎಂಬ ಭಾರತದ ತತ್ವ ಮತ್ತು ಅಹಿಂಸೆಗೆ ಒತ್ತು ನೀಡಿದ ಗುರೂಜಿಯವರ ಹಿನ್ನೆಲೆಯಲ್ಲಿ ಮೊಂಟೂ ಬಸ್ಸಿ ಈ ಚಿತ್ರದ ಕಥೆ ಬರೆದಿದ್ದಾರೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಅಂತರ್ಯುದ್ಧದ ಹಿನ್ನೆಲೆ
1954ರಲ್ಲಿ ಕೊಲಂಬಿಯಾ ಸರ್ಕಾರ ಮತ್ತು ಕೊಲಂಬಿಯಾದ ಕ್ರಾಂತಿಕಾರಿ ಸಶಸ್ತ್ರ ಪಡೆಗಳ ನಡುವೆ ಸಂರ್ಷ ಉಂಟಾಗಿ, ಅದು ಹಿಂಸಾರೂಪ ಪಡೆಯಿತು. ಐದು ದಶಕಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಹಿಂಸಾತ್ಮಕ ಹೋರಾಟಕ್ಕೆ ಬಲಿಯಾಗಿ, 50 ಲಕ್ಷಕ್ಕೂ ಹೆಚ್ಚು ಮಂದಿ ಸ್ಥಳಾಂತರವಾದರು. ಆಗ ಕೊಲಂಬಿಯಾದ ಆರ್ಟ್ ಆ್ ಲಿವಿಂಗ್ ಮೂಲಕ ಅಲ್ಲಿನ ಸರ್ಕಾರ ಮತ್ತು ಕ್ರಾಂತಿಕಾರಿ ಸಶಸ್ತ್ರ ಪಡೆಗಳ ನಡುವೆ ಮಧ್ಯಸ್ಥಿಗೆ ವಹಿಸಿದರು. ದೇಶಾದ್ಯಂತ 500ಕ್ಕೂ ಅಧಿಕ ಸಾಮಾಜಿಕ ನಾಯಕರ ಜತೆ ಸಭೆ ನಡೆಸಿದರು. ಆ ಮೂಲಕ 2016ರ ಸೆ. 26ರಂದು ಸರ್ಕಾರ ಮತ್ತು ಕ್ರಾಂತಿಕಾರಿ ಕಮಾಂಡೋಗಳ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.