South OTT releases this week 
ಸಿನಿವಾಣಿ

ಪಲ್ಲಿ ಚಟ್ಟಂಬಿ, 'ಚಿನ್ನ ಚಿನ್ನ ಆಸೈ', 'ಬಾಲನ್: ದಿ ಬಾಯ್' ಸೇರಿದಂತೆ ಈ ವಾರ OTTಯಲ್ಲಿ ಸ್ಟ್ರೀಮ್​ ಆಗಲಿರುವ ಸೌತ್ ಸಿನಿಮಾಗಳಿವು

South OTT releases this week: ಸೌತ್​ ಇಂಡಿಯಾ ಸಿನಿಮಾಗಳು ಈ ವಾರ ಒಟಿಟಿಯಲ್ಲಿ ಸಿನಿ ಪ್ರಿಯರಿಗೆ ಹಬ್ಬದೂಟ ಉಣ ಬಡಿಸಿಲು ಸಜ್ಜಾಗಿವೆ. ಪ್ರೀತಿ-ಪ್ರಣಯ, ಕ್ರೈಂ ಥ್ರಿಲ್ಲರ್​ ಸಿನಿಮಾದಿಂದ ಹಿಡಿದು ಹಾರರ್​, ಆಕ್ಷನ್​ ಡ್ರಾಮಾದವರೆಗೂ ಎಲ್ಲ ಜಾನರ್​ನ ಸಿನಿಮಾಗಳು HD ಕ್ವಾಲಿಟಿಯಲ್ಲಿ ಮೊಬೈಲ್​ ಟಿವಿಗಳಲ್ಲಿ ನೋಡಬಹುದಾಗಿದೆ. ಥಿಯೇಟರ್​ನಲ್ಲಿ ಹಿಟ್​ ಕಂಡ ಯಾವ ಸಿನಿಮಾ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಪಲ್ಲಿ ಚಟ್ಟಂಬಿ
ಸೋನಿ LIV

ಟೊವಿನೋ ಥಾಮಸ್​ ಹಾಗೂ ಮಮಿತಾ ಬೈಜು ಮುಖ್ಯಭೂಮಿಕೆಯ ಮಲಯಾಳಂ ಆಕ್ಷನ್​​ ಹಾಗೂ ಪೀರಿಯಾಡಿಕ್​ ಡ್ರಾಮಾ ಸಿನಿಮಾ ಪಲ್ಲಿ ಚಟ್ಟಂಬಿ ಸೋನಿ ಲೈವ್​ನಲ್ಲಿ ರಿಲೀಸ್​ ಆಗಲಿದೆ. 1950ರ ದಶಕದ ಕೇರಳದ ಕತೆಯನ್ನು ಈಸಿನಿಮಾ ಹೊಂದಿದೆ. ಹಿಂದೂ ಮತ್ತು ಕ್ರಿಶ್ಚಿಯನ್ ಕುಟುಂಬಗಳಿಂದ ಬೆಳೆದ ಕೃಷ್ಣ ಪಿಳ್ಳೈ ಎಂಬ ವ್ಯಕ್ತಿಯ ಮಧ್ಯೆ ನಡೆಯುವ ಕತೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಕಯಾದು ಲೋಹರ್, ಸಿದ್ದಿಕ್, ವಿಜಯರಾಘವನ್, ಬಾಬುರಾಜ್ ಮತ್ತು ಶತ್ರು ಕೂಡ ಇದ್ದಾರೆ, ಪೃಥ್ವಿರಾಜ್ ಸುಕುಮಾರನ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈಗೋ ರಾಮನ್'

ಜುಲೈ 24 ರಂದು ಪ್ರೈಮ್ ವಿಡಿಯೋದಲ್ಲಿ 'ಈಗೋ ರಾಮನ್' ಕೂಡ ಬಿಡುಗಡೆಯಾಗಲಿದೆ. ಈ ಚಿತ್ರವು ಟಿಎನ್‌ಪಿಎಸ್‌ಸಿ ಆಕಾಂಕ್ಷಿ ಅರಿವು ಸರ್ಕಾರಿ ಅಧಿಕಾರಿಯಾಗುವ ಕನಸನ್ನು ಕಾಣುವ ವ್ಯಕ್ತಿ ಅದನ್ನು ನನಸಾಗಿಸುವ ಪರಿಯನ್ನು ಹೇಳುತ್ತದೆ. ತಾರಾಗಣದಲ್ಲಿ ಸಿಬಿ ಚಂದ್ರನ್, ರೋಬೋ ಶಂಕರ್, ಚೇರನ್ ರಾಜ್ ಮತ್ತು ಇನ್ನೂ ಅನೇಕರು ಇದ್ದಾರೆ.

ಕಾನ್​ ಸಿಟಿ

ಅನ್ನಾ ಬೆನ್​, ಅರ್ಜುನ್ ದಾಸ್, ಯೋಗಿ ಬಾಬು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಾನ್​ ಸಿಟಿ ಸಿನಿಮಾವು ನೆಟ್​ಫ್ಲಿಕ್ಸ್​ನಲ್ಲಿ ತೆರೆ ಕಾಣಲಿದೆ. ಹರೀಶ್​​ ದುರೈರಾಜ್​ ಸಿನಿಮಾದ ನಿರ್ದೇಶಕರು. ಸಿನಿಮಾವು ಬಟಕುಟುಂಬದ ಸುತ್ತಸುತ್ತುತ್ತದೆ. ಮಂಗಳೂರಿನ ಸಮುದ್ರ ತೀರದ ಹಡಗಿನ ಕಳ್ಳತನದ ಕತೆಯನ್ನು ಸಿನಿಮಾ ಹೇಳುತ್ತದೆ. ನೆಟ್​ಫ್ಲಿಕ್ಸ್​ನಲ್ಲಿ ತಮಿಳು ಸೇರಿದಂತೆ ಇತರ ಭಾಷೆಯಲ್ಲಿ ವೀಕ್ಷಿಸಬಹುದಾಗಿದೆ.

'ಕಳಿಂಗ ಮಿಸ್ಟರಿ'

ಜುಲೈ 24 ರಂದು ಸನ್ NXT ನಲ್ಲಿ 'ಕಳಿಂಗ ಮಿಸ್ಟರಿ' ನೋಡಬಹುದು. ಇದೊಂದು ನ್ಯಾಚುರಲ್ಲ ಥ್ರಿಲ್ಲರ್​ ಸಿನಿಮಾ. ಹಿಂದಿನ ಕಳಿಂಗ ಸಾಮ್ರಾಜ್ಯದ ಶಾಪವೊಂದು ಕಾಲೇಜು ಕ್ಯಾಂಪಸ್​​ ಹೇಗೆ ಸಮಸ್ಯೆಗಳಲ್ಲಿ ಸಿಲುಕುವಂತೆ ಮಾಡುತ್ತದೆ ಎನ್ನುವುದೇ ಕಥಾ ಹಂದರ. ಇದನ್ನು ಮಲಯಾಳಂ ಭಾಷೆಯಲ್ಲಿ ಮಾತ್ರ ನೋಡಬಹುದಾಗಿದೆ.ಧ್ಯಾನ್ ಶ್ರೀನಿವಾಸನ್, ಅಲ್ತಾಫ್ ಸಲೀಂ, ರಿಯಾಜ್ ಖಾನ್ ಮತ್ತು ಇತರರು ನಟಿಸಿದ್ದಾರೆ

'ಚಿನ್ನ ಚಿನ್ನ ಆಸೈ'

ಇಂದ್ರನ್ಸ್​ ಮತ್ತು ಮಾಧುರಿ ನಟನೆಯ ಚಿನ್ನ ಚಿನ್ನ ಆಸೈ ಸಿನಿಮಾಕ್ಕಾಗಿ ಹಲವರು ಕಾತುರದಿಂದ ಕಾಯುತ್ತಿದ್ದರು. ಅದರಂತೆ, ಜುಲೈ 28 ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ಸ್ಟ್ರೀಮ್ ಆಗಲಿದೆ. ಅನಿರೀಕ್ಷಿತ ಘಟನೆಗಳ ಮೂಲಕ ಸಂಪರ್ಕ ಹೊಂದಿದ ಇಬ್ಬರು ಅಪರಿಚಿತರು ಪರಿಚಿತರಾಗುವಷ್ಟು ಸಂಬಂಧ ಕಟ್ಟಿಕೊಳ್ಳೋದು ಹೇಗೆ ಎನ್ನುವದೇ ಕತೆ. ಚಿನ್ನ ಚಿನ್ನ ಆಸೈ ಜುಲೈ 28 ರಿಂದ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮಿಂಗ್ ಆಗುತ್ತಿದೆ."

'ಬಾಲನ್: ದಿ ಬಾಯ್'

'ಬಾಲನ್: ದಿ ಬಾಯ್' ಜುಲೈ 31 ರಿಂದ ZEE5 ನಲ್ಲಿ ಸ್ಟ್ರೀಮಿಂಗ್ ಪ್ರಾರಂಭವಾಗುತ್ತದೆ. ಚಿದಂಬರಂ ನಿರ್ದೇಶನದ ಈ ಮಲಯಾಳಂ-ತೆಲುಗು ಚಿತ್ರವು ಮಹಿಳಾ ಸುಧಾರಣಾ ಕೇಂದ್ರದೊಳಗೆ ತನ್ನ ತಾಯಿಯಿಂದ ಬೆಳೆದ ಚಿಕ್ಕ ಹುಡುಗನ ಕಥೆಯನ್ನು ಹೇಳುತ್ತದೆ, (ಏಜೆನ್ಸೀಸ್).